
ನಗರದ ಸುರಕ್ಷಾ ಸೇವಾ ಸಂಸ್ಥೆಯಲ್ಲಿ ಕನ್ನಡ ಚಿತ್ರರಂಗದ ಸರಳತೆಯ ನಟ ದಿವಂಗತ ಪುನೀತ ರಾಜಕುಮಾರ ಅವರ 50ನೇ ಹುಟ್ಟು ಹಬ್ಬದ ನಿಮಿತವಾಗಿ ಅವರ ಅಪ್ಪಟ ಅಭಿಮಾನಿ ಸಿದ್ದು ಪಲ್ಲೇದ್ ಅವರು ಅನಾಥಾಶ್ರಮ ವಾಸಿಗಳಿಗೆ ಉಪಹಾರದ ವ್ಯವಸ್ಥೆ ಮಾಡುವದರ ಜೊತೆಗೆ ಕಲ್ಲಂಗಡಿ ಕಟ್ ಮಾಡುವ ಮೂಲಕ ಅಪ್ಪು ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಅಧ್ಯಕ್ಷ ಪುರುಷೋತ್ತಮ್ ದರಕ್, ಹಿರಿಯ ಪತ್ರಕರ್ತ ಸಿ. ಸಿ ಚಂದ್ರಪಟ್ಟಣ ಉದಯ್ ವದ್ದಿ, ವಿಜಯ ಪಲ್ಲೆದ, ಶರಣಪ್ಪ ಹೊದ್ಲೂರ್, ಭೀಮಣ್ಣ ಗಾಣಿಗೇರ್ ಸೇರಿದಂತೆ ಆಶ್ರಮವಾಸಿಗಳು ಉಪಸ್ಥಿತರಿದ್ದರು.