ಕೋಲ್ಕತ್ತಾ: ಕೆಕೆಆರ್ ವಿರುದ್ಧ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡ 1 ರನ್ ನ ರೋಚಕ ಸೋಲು ಕಂಡಿದೆ. ಈ ಮೂಲಕ ಆರ್.ಆರ್ ತಂಡ ಪ್ಲೇ ಆಫ್ ಹಂತದಿಂದ ಅಧಿಕೃತವಾಗಿ ಹೊರಬಿದ್ದಿದೆ.
ಟಾಸ್ ಗೆದ್ದು ಕೋಲ್ಕತ್ತಾ ತಂಡ ಬ್ಯಾಟಿಂಗ್ ಆಯ್ದುಕೊಂಡಿತ್ತು. ನಿಗದಿತ 20 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 206 ರನ್ ಕಲೆ ಹಾಕಿತು. ಗುರಿ ಬೆನ್ನತ್ತಿದ ರಾಜಸ್ಥಾನ ತಂಡ, ಆರಂಭಿಕ ಆಘಾತದ ನಡುವೆಯೂ ನಿಗದಿತ 20 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 205 ರನ್ ಕಲೆ ಹಾಕಿ, 1 ರನ್ ನಿಂದ ಸೋಲೊಪ್ಪಿಕೊಂಡಿತು.
ಕೊನೆಯ ಎಸೆತದಲ್ಲಿ ಗೆಲುವಿಗೆ 3 ರನ್ ಗಳು ಬೇಕಿದ್ದಾಗ, 1 ರನ್ ಮಾತ್ರ ಗಳಿಸಿದರು.