
ಮುದ್ದೇಬಿಹಾಳ: ರಾಯಚೂರು ಜಿಲ್ಲೆ ಲಿಂಗಸುಗೂರು ತಾಲೂಕು ಬೆಂಡೋಣಿ ಗ್ರಾಮದ ಯುವತಿ ಮಂಜುಳಾ ನಗಿಮುಖ ಇವರು ಹೆಣ್ಣು ಮಕ್ಕಳ ಮೇಲೆ ಅತ್ಯಾಚಾರ ಮತ್ತು ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಖುದ್ದು ಭೇಟಿಯಾಗಿ ಮನವಿ ಸಲ್ಲಿಸಲು ತಮ್ಮ ಉದ್ದೇಶದ ಫ್ಲೆಕ್ಸ್ ಅಳವಡಿಸಿ ದೆಹಲಿಗೆ ಕಾಲ್ನಡಿಗೆ ಯಾತ್ರೆ ಹೊರಟಿದ್ದಾರೆ.

ಲಿಂಗಸುಗೂರು ಮಾರ್ಗವಾಗಿ ನಾಲತವಾಡ ಮೂಲಕ ಮುದ್ದೇಬಿಹಾಳ ಪ್ರವೇಶಿಸಿರುವ ಇವರು ಮುದ್ದೇಬಿಹಾಳದಲ್ಲಿ ವಾಸ್ತವ್ಯ ಮಾಡಿ ಬಸವನ ಬಾಗೇವಾಡಿ ತಾಲೂಕಿನತ್ತ ಪ್ರಯಾಣ ಬೆಳೆಸಲಿದ್ದಾರೆ. ಇವರಿಗೆ ಪೊಲೀಸರು ಸೂಕ್ತ ಭದ್ರತೆ ಒದಗಿಸಿ ಸಹಕರಿಸಿರುವುದು ವಿಶೇಷವಾಗಿದೆ.