ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಎಸ್.ಡಿ.ಕೆ ಕನ್ನಡ ಮಾಧ್ಯಮ ಪ್ರೌಢಶಾಲೆಯ ಫಲಿತಾಂಶ ಶೇ. 100ರಷ್ಟಾಗಿದೆ.
108 ಡಿಸ್ಟಿಂಕ್ಷನ್, 98 ಪ್ರಥಮ,11 ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ. ಅಕ್ಷತಾ ಆಸಂಗಿ ಶೇ.99.68 ಅಂಕ ಪಡೆದು ರಾಜ್ಯಕ್ಕೆ ಮೂರನೇ ತಾಲ್ಲೂಕಿಗೆ ಪ್ರಥಮ,ರೋಹಿಣಿ ಲಿಂಗರೆಡ್ಡಿ ಶೇ.99.36 ದ್ವಿತೀಯ, ನಾಗರತ್ನಾ ಭೋಯರ 99.2 ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ಆಂಗ್ಲ ಮಾಧ್ಯಮ ವಿಭಾಗದಲ್ಲಿ ಒಟ್ಟಾರೆ ಫಲಿತಾಂಶ ಶೇ.95 ರಷ್ಟಾಗಿದ್ದು 67 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್‌ದಲ್ಲಿ ಉತ್ತೀರ್ಣರಾಗಿದ್ದಾರೆ. ಅಕ್ಷತಾ ಹಿರೇಮಠ ಶೇ.98.72 ಪ್ರಥಮ, ವಿನಯ ಮಾಮನಿ ಶೇ.98.56 ಹಾಗೂ ಪ್ರಗತಿ ಮೇಟಿ ಶೇ.98.56 ದ್ವಿತೀಯ ಸ್ಥಾನ,ಬನಶ್ರೀ ವಡವಡಗಿ ಹಾಗೂ ಸಿದ್ಧಲಿಂಗ ಭಂಗಿ ಶೇ.98.24 ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ.
ವಿದ್ಯಾರ್ಥಿಗಳ ಸಾಧನೆಗೆ ಸಂಸ್ಥೆಯ ಚೇರಮನ್ ಬಿ.ಜಿ.ಮಠ, ಕಾರ್ಯದರ್ಶಿ ಸಿದ್ದಯ್ಯ ಮಠ, ಮುಖ್ಯ ಶಿಕ್ಷಕರಾದ ಹೀರೂ ನಾಯಕ, ಶಿವಯ್ಯ ಹಿರೇಮಠ, ಆಡಳಿತಾಧಿಕಾರಿ ಪ್ರಜ್ವಲ್ ಮಠ ಸಂಸ್ಥೆಯ ಸಿಬ್ಬಂದಿ ಅಭಿನಂದಿಸಿದ್ದಾರೆ.