
ಮುದ್ದೇಬಿಹಾಳ : ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿ ವತಿಯಿಂದ ನೋಂದಾಯಿತ ಕಟ್ಟಡ ಮತ್ತು ಇತರೆ ಕಾರ್ಮಿಕರಿಗೆ ಟೂಲ್ ಕಿಟ್ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ.

ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಗೌಂಡಿ, ವೆಲ್ಡಿಂಗ್ ಟೈಲ್ಸ್, ರೋಡ್ ವರ್ಕ್ ಕಿಟ್‌ಗಳನ್ನು ವಿತರಿಸಲು ಅರ್ಜಿ ಕರೆದಿದ್ದು ಅರ್ಹರು ಫಲಾನುಭವಿ ಗುರುತಿನ ಚೀಟಿ,(ಇ-ಕಾರ್ಡ್), ಆಧಾರ್ ಕಾರ್ಡ, ಮತ್ತು ಫಲಾನುಭವಿ ಭಾವಚಿತ್ರ ಇತರೆ ದಾಖಲೆಗಳನ್ನು ಮುದ್ದೇಬಿಹಾಳದ ಕಾರ್ಮಿಕರ ನಿರೀಕ್ಷಕರ ಕಚೇರಿ, ಕೆ.ಎಚ್.ಬಿ.ಕಾಲೋನಿ 21ನೇ ಕ್ರಾಸ್, ಮುದ್ದೇಬಿಹಾಳ ಇಲ್ಲಿಗೆ ಹಾಗೂ ಕಾರ್ಮಿಕ ನಿರೀಕ್ಷಕರ ಕಚೇರಿ, ಏಪಿಎಂಸಿ ಎದುರಿಗೆ, ಕತ್ತಿ ಬಿಲ್ಡಿಂಗ್ ತಾಳಿಕೋಟಿ ಇಲ್ಲಿಗೆ ಏ.8 ರಿಂದ 19ರವರೆಗೆ ಸಲ್ಲಿಸಲು ಕಾರ್ಮಿಕ ನಿರೀಕ್ಷಕ ಅಲೀಮ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.