
ಕುಳಗೇರಿ ಕ್ರಾಸ್ : ಸ್ಥಳೀಯವಾಗಿ ಇಂದು ಇಲ್ಲಿನ ರಾಮದುರ್ಗ ರೋಡನಲ್ಲಿರುವ ಜಾಮೀಯಾ ಮಸೀದಿಯಲ್ಲಿ ಎಲ್ಲಾ ಮುಸ್ಲಿಂ ಬಾಂಧವರು ರಂಜಾನ ಹಬ್ಬದ ನಿಮಿತ್ತಾವಾಗಿ ಸಾಮೂಹಿಕ ಪ್ರಾರ್ಥನೆಯನ್ನು ಮಾಡಿದರು ಈ ಸಂದರ್ಭದಲ್ಲಿ ಶ್ರೀ ಮೈಬೂಬಸಾಬ ಮಕಾನದಾರ ರವರು ರಂಜಾನ ತಿಂಗಳ ಉಪವಾಸದ ಮಹತ್ವದ ಕುರಿತು ಪ್ರವಚನ ನೀಡಿದರು.

ಉಪವಾಸ ಕೇವಲ ವೃತಾಚರಣೆ ಮಾತ್ರವಲ್ಲ. ಇದರಿಂದ ದೈಹಿಕ ಮಾನಸಿಕ ಆರೋಗ್ಯವೂ ವೃದ್ದಿಸುವುದು. ವರ್ಷದಲ್ಲಿ ಹನ್ನೊಂದು ತಿಂಗಳುಗಳ ಕಾಲ ಊಟ ಮಾಡಿ ಒಂದು ತಿಂಗಳ ಕಾಲ ಭಕ್ತಿಯಿಂದ ಉಪವಾಸ ಆಚರಿಸಿದರೆ ಪುಣ್ಯ ಲಭಿಸುವುದು. ಉಪವಾಸ ಕೈಗೊಳ್ಳುವವರು ಸೂರ್ಯೋದಯಕ್ಕಿಂತ ಮೊದಲು ಸೂರ್ಯಾಸ್ತದವರೆಗೂ ಉಪವಾಸ ಕೈಗೊಳ್ಳುವುದರ ಜೋತೆಗೆ ದುಶ್ಚಟಗಳಿಂದ ದೂರವಿರುವ ನಿಯಮವೂ ಇದೆ ಎಂದು ತಿಳಿಸಿದರು.
ಶ್ರೀ ಹಫೀಜ ಮಕ್ತುಂಸಾಬ ಮುಲ್ಲಾ ರವರು ಎಲ್ಲರಿಗೂ ಪ್ರಾರ್ಥನೆಯನ್ನು ಬೋಧಿಸಿದರು ಊರಿನ ಅಂಜುಮನ್ ಕಮೀಟಿಯ ಅಧ್ಯಕ್ಷರಾದ ಶ್ರೀ ಯಮನೂರ ಸಾಬ ನದಾಫ್, ಉಪಾಧ್ಯಕ್ಷರಾದ ಮುತ್ತುಸಾಬ ನದಾಫ್ ಹಾಗೂ ಪ್ರಮುಖರಾದ ಶ್ರೀ ಮಹ್ಮದ ಸಾಬ ಮುಲ್ಲಾ, ಸೈದುಸಾಬ ನದಾಫ್, ಅಬ್ದುಲ್ ಸಾಬ ನದಾಫ್, ಬಿ.ಜಿ ಲೋಕಾಪೂರ, ಸಿ. ಎ ಜಕಾತಿ, ಆರ್. ಎಸ್. ಬಾಗವಾನ ಖಾನಾಪೂರ ಹಾಗೂ ಕುಳಗೇರಿ ಕ್ರಾಸ್ ಗ್ರಾಮದ ಸಮಸ್ತ ಮುಸ್ಲಿಂ ಬಾಂಧವರು ಮತ್ತು ಪೋಲೀಸ್ ಸಿಬ್ಬಂದಿರವರು ಹಾಜರಿದ್ದರು.