ಚೆನ್ನೈ: ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಸಿ.ಎಸ್.ಕೆ ಹಾಗೂ ಎಸ್.ಆರ್.ಎಚ್ ತಂಡಗಳ ನಡುವಿನ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ 5 ವಿಕೆಟ್‌ಗಳ ಗೆಲುವನ್ನು ದಾಖಲಿಸಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಚೆನ್ನೈ ಸೂಪರ್ ಕಿಂಗ್ಸ್ 19.5 ಓವರ್‌ಗಳಲ್ಲಿ 154 ರನ್‌ಗಳಿಗೆ ಸರ್ವಪತನ ಕಂಡಿತ್ತು. ಹೈದರಾಬಾದ್ ತಂಡಕ್ಕೆ ಗೆಲ್ಲಲು 155 ರನ್‌ಗಳ ಗುರಿಯನ್ನು ನೀಡಿತು. ಈ ಗುರಿಯನ್ನು ಬೆನ್ನಟ್ಟಿದ ಹೈದರಾಬಾದ್ 18.4 ಓವರ್‌ಗಳಲ್ಲಿ 5 ವಿಕೆಟ್ ನಷ್ಟಕ್ಕೆ 155 ರನ್ ಕಲೆಹಾಕಿತು.
ಈ ಸೋಲಿನಿಂದ ಚೆನ್ನೈ ತಂಡ ಲೀಗ್ ಹಂತದಲ್ಲೇ ಟೂರ್ನಿಯಿಂದ ಬಹುತೇಕ ಹೊರಬಿದ್ದಂತಾಗಿದೆ. ಆಡಿರುವ 9 ಪಂದ್ಯಗಳಲ್ಲಿ ಕೇವಲ 2 ರಲ್ಲಿ ಜಯಗಳಿಸಿದೆ. ಬಾಕಿ ಉಳಿದಿರುವ 5 ಪಂದ್ಯಗಳಲ್ಲಿ ಚೆನ್ನೈ ಜಯ ದಾಖಲಿಸಿದರರು ಪ್ಲೇ ಆಫ್ ಪ್ರವೇಶ ಕಷ್ಟಕರವಾಗಿದೆ. ನೆಟ್ ರನ್ ರೇಟ್ ಕೂಡ ಮೈನಸ್ ನಲ್ಲಿರುವುದು ಚೆನ್ನೈ ತಂಡಕ್ಕೆ ಬಹು ದೊಡ್ಡ ಹೊಡೆತ.
ಈ ವರ್ಷದ ಟೂರ್ನಿಯಲ್ಲಿ ರಾಜಸ್ತಾನ್ ರಾಯಲ್ಸ್ ಹಾಗೂ ಚೆನ್ನೈ ತಂಡಕ್ಕೆ ಟೂರ್ನಿಯಿಂದ ಔಟ್ ಆದ್ದಂತಿವೆ.