
ಮುದ್ದೇಬಿಹಾಳ : ಶಾಲಾ ಪಠ್ಯಕ್ರಮದೊಂದಿಗೆ ಮಕ್ಕಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳು ಅಗತ್ಯವಾಗಿವೆ ಎಂದು ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ಎಂ.ಎಂ. ಬೆಳಗಲ್ಲ ಅವರು ಹೇಳಿದರು.

ಪಟ್ಟಣದ ಆಕ್ಸಫರ್ಡ್ ಪಬ್ಲಿಕ್ ಸ್ಕೂಲ್‌ನಲ್ಲಿ ಶನಿವಾರ ಹಮ್ಮಿಕೊಂಡಿದ್ದ 9ನೇ ವಾರ್ಷಿಕೋತ್ಸವ ಹಾಗೂ ಚಿಣ್ಣರ ಹಬ್ಬ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಅಂಕ ಗಳಿಕೆಯಷ್ಟೇ ಮಾನದಂಡವಾಗದೇ ಇನ್ನೀತರ ಆಟೋಟಗಳಲ್ಲೂ ಮಕ್ಕಳನ್ನು ತೊಡಗಿಸುವ ಕಾರ್ಯ ಆಗಬೇಕು ಎಂದರು. ಶಾಸಕರ ಆಪ್ತ ಸಹಾಯಕ ನಾಗರಾಜ ತಂಗಡಗಿ ಮಾತನಾಡಿ, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಗುಣಮಟ್ಟದ ಶಿಕ್ಷಣ ಅಗತ್ಯವಾಗಿದ್ದು ಶಿಕ್ಷಕರೊಂದಿಗೆ ಪಾಲಕರು ಈ ನಿಟ್ಟಿನಲ್ಲಿ ಮಕ್ಕಳ ಕಲಿಕೆಯ ಮೇಲೆ ನಿಗಾ ಇರಿಸಬೇಕು ಎಂದರು.
ನಿವೃತ್ತ ಶಿಕ್ಷಕ ಕೆ.ಪಿ.ಹಿರೇಮಠ ಸಾನಿಧ್ಯ ವಹಿಸಿದ್ದರು. ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ಅಧ್ಯಕ್ಷ ಸಿ. ಎಲ್. ಬಿರಾದಾರ ಉದ್ಘಾಟಿಸಿದರು. ಸಂಸ್ಥೆಯ ಅಧ್ಯಕ್ಷ ಬಾಪುಗೌಡ ಎಂ ಪಾಟೀಲ್ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸಮೂಹ ಸಂಪನ್ಮೂಲ ವ್ಯಕ್ತಿಗಳಾದ ಪಿ. ಎ. ಬಾಳಿಕಾಯಿ, ಗುಂಡು ಚವ್ಹಾಣ, ಬಿಜೆಪಿ ಮುಖಂಡ ಅವ್ವಣ್ಣ ಗ್ವಾತಗಿ, ಸಂಸ್ಥೆಯ ಕಾರ್ಯದರ್ಶಿ ಆರ್. ಎಂ. ಬಿರಾದಾರ ಉಪಸ್ಥಿತರಿದ್ದರು.
ವಿವಿಧ ವಸತಿ ಶಾಲೆಗೆ ಆಯ್ಕೆ ಆಗಿರುವ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿದವು.