First position for Vayuputra Edahalli taluk in NMMS examination

ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ವಾಯುಪುತ್ರ ಎಡಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ

ಎನ್ ಎಂ ಎಂ ಎಸ್ ಪರೀಕ್ಷೆಯಲ್ಲಿ ವಾಯುಪುತ್ರ ಎಡಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ

ತಾಳಿಕೋಟೆ : ಸ್ಥಳೀಯ ವೀರಶೈ ವಿದ್ಯಾವರ್ಧ ಸಂಘದ ಪ್ರತಿಷ್ಠಿತ ಎಸ್ ಕೆ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಎಂಟನೇ ವರ್ಗದ ವಿದ್ಯಾರ್ಥಿ ಕುಮಾರ್ ವಾಯುಪುತ್ರ ಪರಶುರಾಮ್ ಎಡಹಳ್ಳಿ, ರಾಷ್ಟ್ರೀಯ (ಎನ್ ಎಂ ಎಂ ಎಸ್) ಪ್ರತಿಭಾನ್ವೇಷಣೆ ಪರೀಕ್ಷೆಯಲ್ಲಿ ವಾಯುಪುತ್ರ ಎಡಹಳ್ಳಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಿಷ್ಯವೇತನಕ್ಕೆ ಅರ್ಹನಾಗಿದ್ದಾನೆ.

ತಾಲೂಕಿನ ಹರನಾಳ ಗ್ರಾಮದ ಪರಶುರಾಮ ಮತ್ತು ಅಕ್ಷತಾ ಎಡಹಳ್ಳಿ ದಂಪತಿಗಳ ಮಗ ಓದಿನಲ್ಲಿ ವಿಶೇಷ ಆಸಕ್ತಿ ಹೊಂದಿದ್ದು ನಿರಂತರ ಅಧ್ಯಯನದಲ್ಲಿ ತೊಡಗಿರುತ್ತಾನೆ. ಅವನಿಗೆ ನ್ಯಾಷನಲ್ ಮೀನ್ಸ್ ಕಮ್ ಮೆರಿಟ್ ಸ್ಕಾಲರ್ಶಿಪ್ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ 180ಕ್ಕೆ 109 ಅಂಕ ಬಂದಿವೆ. ಅವನು ಮುದ್ದೇಬಿಹಾಳ ತಾಲೂಕಿಗೆ ಪ್ರಥಮ ಸ್ಥಾನ ಪಡೆದು ಶಿಷ್ಯ ವೇತನಕ್ಕೆ ಅರ್ಹನಾಗಿದ್ದಾನೆ.

ವೀರಶೈವ ವಿದ್ಯಾವರ್ಧಕ ಸಂಘದ ಚೇರಮನ್ ವ್ಹಿ. ಸಿ. ಹಿರೇಮಠ, ವಾಯ್ಸ್ ಚೇರ್ಮನ್ ಬಿ. ಎನ್ ಹಿಪ್ಪರಗಿ, ಕಾರ್ಯದರ್ಶಿಗಳಾದ ಎಂ. ಎಸ್. ಸರಶೆಟ್ಟಿ, ಸಹ ಕಾರ್ಯದರ್ಶಿಗಳಾದ ಕೆ. ಎಸ್. ಮುರಾಳ, ಹೈಸ್ಕೂಲ್ ವಿಭಾಗದ ಚೇರ್ಮನ್ ಎಂ. ಜಿ. ಕತ್ತಿ, ಪದವಿಪೂರ್ವ ಕಾಲೇಜಿನ ಚೇರ್ಮನ್ ಎಂ. ಆರ್. ಕತ್ತಿ, ಉಪಪ್ರಾಚಾರ್ಯ ಜೆ. ಎಸ್. ಕಟ್ಟಿಮನಿ ಹಾಗೂ ಸಮಸ್ತ ಶಿಕ್ಷಕ ಬಳಗ ಈ ವಿದ್ಯಾರ್ಥಿಯನ್ನು ಅಭಿನಂದಿಸಿದ್ದಾರೆ.

Latest News

ಹಣ ಬೇಡಿಕೆ ಇಟ್ಟಿದ್ದು ಸಾಬೀತುಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವೆ-ನಾಟೀಕಾರ

ಹಣ ಬೇಡಿಕೆ ಇಟ್ಟಿದ್ದು ಸಾಬೀತುಪಡಿಸದಿದ್ದರೆ ಮಾನನಷ್ಟ ಮೊಕದ್ದಮೆ ಹೂಡುವೆ-ನಾಟೀಕಾರ

ಮುದ್ದೇಬಿಹಾಳ : ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ ತಾವು ಹಣಕ್ಕೆ ಬೇಡಿಕೆ ಇಟ್ಟಿರುವುದಾಗಿ ತಮ್ಮ

ದಸ್ತು ಬರಹಗಾರರ ಸಂಘಕ್ಕೆ ಆಯ್ಕೆ

ದಸ್ತು ಬರಹಗಾರರ ಸಂಘಕ್ಕೆ ಆಯ್ಕೆ

ಮುದ್ದೇಬಿಹಾಳ : ತಾಲೂಕಾ ದಸ್ತು ಬರಹಗಾರರ ಸಂಘದ ನೂತನ ಪದಾಧಿಕಾರಿಗಳನ್ನು ಈಚೇಗೆ ಆಯ್ಕೆ ಮಾಡಲಾಯಿತು.

ಹೋರಾಟಗಾರನಿಂದ ಹಣಕ್ಕೆ ಬೇಡಿಕೆ : ಪುರಸಭೆ ಅಧ್ಯಕ್ಷ ಗೊಳಸಂಗಿ ಆರೋಪ

ಹೋರಾಟಗಾರನಿಂದ ಹಣಕ್ಕೆ ಬೇಡಿಕೆ : ಪುರಸಭೆ ಅಧ್ಯಕ್ಷ ಗೊಳಸಂಗಿ ಆರೋಪ

ಮುದ್ದೇಬಿಹಾಳ : ತಾಲ್ಲೂಕು ಪಂಚಾಯಿತಿಗೆ ಸೇರಿದ ವಸತಿ ಗೃಹಗಳನ್ನು ನೆಲಸಮಗೊಳಿಸಿದ ಘಟನೆಗೆ ಸಂಬಂಧಿಸಿದಂತೆ ಪುರಸಭೆ

ತಾಪಂ ಕಚೇರಿ ಎದುರು ಧರಣಿ: ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ನೀಡಿದ ತಾಪಂ ಇಒ

ತಾಪಂ ಕಚೇರಿ ಎದುರು ಧರಣಿ: ಪುರಸಭೆ ಮುಖ್ಯಾಧಿಕಾರಿಗೆ ನೋಟಿಸ್ ನೀಡಿದ ತಾಪಂ ಇಒ

ಮುದ್ದೇಬಿಹಾಳ : ಗ್ರಾಮದ ದೇವತೆ ಜಾತ್ರೆಯ ಸಮಯದಲ್ಲಿ ಪಟ್ಟಣದ ಲಕ್ಷ್ಮಿ ಚಿತ್ರಮಂದಿರದ ಎದುರಿಗೆ ಇರುವ

ಆ.12 ರಂದು ಕಿಲ್ಲಾ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

ಆ.12 ರಂದು ಕಿಲ್ಲಾ ವೀರಭದ್ರೇಶ್ವರ ಜಾತ್ರಾ ಮಹೋತ್ಸವ ಪೂರ್ವಭಾವಿ ಸಭೆ

ಮುದ್ದೇಬಿಹಾಳ : ಪಟ್ಟಣದ ಕಿಲ್ಲಾ ಗಲ್ಲಿಯಲ್ಲಿರುವ ಗುಗ್ಗಳ ಬಸವೇಶ್ವರ ಹಾಗೂ ಶ್ರೀ ವೀರಭದ್ರೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಆ.12 ರಂದು ನಡೆಸಲು ಊರಿನ ದೈವದವರು ನಿರ್ಣಯ ಕೈಗೊಂಡಿದ್ದಾರೆ. ಪಟ್ಟಣದ ಕುಂಬಾರ ಓಣಿಯಲ್ಲಿರುವ ಗ್ರಾಮದೇವತೆ ದೇವಸ್ಥಾನದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ವೀರಭದ್ರೇಶ್ವರ ದೇವರ ಜಾತ್ರಾ ಮಹೋತ್ಸವದ ಕುರಿತ ಪೂರ್ವಭಾವಿ ಸಭೆಯಲ್ಲಿ ಜಾತ್ರೆಯ ಕುರಿತು ಚರ್ಚೆ ನಡೆಸಿ ಈ ತೀರ್ಮಾನ ಕೈಗೊಳ್ಳಲಾಯಿತು. ವೇ.ಆಯ್.ಬಿ.ಹಿರೇಮಠ ಮಾತನಾಡಿ, ಆ.12 ರಂದು ದೇವರನ್ನು ಗಂಗಸ್ಥಳಕ್ಕೆ ಕರೆದೊಯ್ಯುವುದು,9ಕ್ಕೆ ಪಿಲೇಕೆಮ್ಮ ದೇವಸ್ಥಾನದಿಂದ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಿಟಿ ಬಸ್ ಆರಂಭ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ಸಿಟಿ ಬಸ್ ಆರಂಭ

ಮುದ್ದೇಬಿಹಾಳ : ಪಟ್ಟಣದ ಹಡಲಗೇರಿ ರಸ್ತೆಯಲ್ಲಿರುವ ಮಾದರಿ ಎಸ್.ಸಿ.ಎಸ್.ಟಿ ವಸತಿಯುಕ್ತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿಗೆ ನಿತ್ಯವೂ ವಿದ್ಯಾರ್ಥಿಗಳ ಓಡಾಟಕ್ಕೆ ನಗರ ಸಾರಿಗೆ ಬಸ್‌ನ್ನು ಮಂಗಳವಾರದಿಂದ ಆರಂಭಿಸಲಾಗಿದೆ ಎಂದು ಕಾಲೇಜಿನ ಪ್ರಾಚಾರ್ಯ ಎಸ್.ಎಲ್.ಪಾಟೀಲ್ ತಿಳಿಸಿದ್ದಾರೆ. ಪಟ್ಟಣದ ಬಸ್ ನಿಲ್ದಾಣದಿಂದ ಕಾಲೇಜಿಗೆ ಸುಮಾರು 1.50 ಕಿ.ಮೀ ದೂರವಿದ್ದು ವಿದ್ಯಾರ್ಥಿಗಳು, ಉಪನ್ಯಾಸಕರ ಓಡಾಟಕ್ಕೆ ಸಮಸ್ಯೆಯಾಗಿದ್ದನ್ನು ಸಾರಿಗೆ ಘಟಕದ ಅಧಿಕಾರಿಗಳ ಗಮನಕ್ಕೆ ತಂದಾಗ ಕೂಡಲೇ ನಗರ ಸಾರಿಗೆ ಬಸ್ ಆರಂಭಕ್ಕೆ ಕ್ರಮ ಕೈಗೊಂಡಿದ್ದಾರೆ ಎಂದು