From May 1st to 5th various programs Veerabhadreshwar Temple Lokarpane

ಮೇ.1 ರಿಂದ 5ರವರೆಗೆ ವಿವಿಧ ಕಾರ್ಯಕ್ರಮವೀರಭದ್ರೇಶ್ವರ ದೇವಸ್ಥಾನ ಲೋಕಾರ್ಪಣೆ

ಮೇ.1 ರಿಂದ 5ರವರೆಗೆ ವಿವಿಧ ಕಾರ್ಯಕ್ರಮವೀರಭದ್ರೇಶ್ವರ ದೇವಸ್ಥಾನ ಲೋಕಾರ್ಪಣೆ

ಮುದ್ದೇಬಿಹಾಳ : ಪಟ್ಟಣದ ತಾಳಿಕೋಟಿ ರಸ್ತೆಯಲ್ಲಿರುವ ವಿನಾಯಕ ನಗರದ ವಿನಾಯಕ ಹಾಗೂ ಭದ್ರಕಾಳಿ ಅಮ್ಮನವರ ಸಮೇತ ವೀರಭದ್ರೇಶ್ವರ ನೂತನ ದೇವಸ್ಥಾನ ಲೋಕಾರ್ಪಣೆ ಹಾಗೂ ಪ್ರಾಣ ಪ್ರತಿಷ್ಠಾಪನೆ ನಿಮಿತ್ಯ ಮೇ.1 ರಿಂದ 5ರವರೆಗೆ ವಿವಿಧ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೇ.1 ರಂದು ಬೆಳಗ್ಗೆ 5ಕ್ಕೆ ಮೂಲ ಮೂರ್ತಿಗಳಿಗೆ ಅಭಿಷೇಕ, ಸಂಜೆ 6ಕ್ಕೆ ಗೋಪೂಜೆ ನಂತರ ಇಟಗಿ ಗುರುಶಾಂತವೀರ ಶಿವಾಚಾರ್ಯರಿಂದ ಆಧ್ಯಾತ್ಮಿಕ ಪ್ರವಚನ ಸಂಜೆ 7 ಕ್ಕೆ ನಡೆಯಲಿದೆ.

ದಿವ್ಯ ಸಾನಿಧ್ಯವನ್ನು ಇಟಗಿ ಗುರುಶಾಂತವೀರ ಶಿವಾಚಾರ್ಯರು ವಹಿಸುವರು. ಈರಯ್ಯ ಹಿರೇಮಠ ಸಾನಿಧ್ಯ ವಹಿಸುವರು.ವಿಶ್ವನಾಥ ನಾಗಠಾಣ ಅಧ್ಯಕ್ಷತೆ ವಹಿಸುವರು. ಉದ್ಯಮಿ ಸಂಜೀವಕುಮಾರ ಓಸ್ವಾಲ್ ಉದ್ಘಾಟಿಸುವರು. ಗಣ್ಯರಾದ ಕಾಶೀಬಾಯಿ ರಾಂಪೂರ, ಅನುರಾಧಾ ಪ್ಯಾಟಿಗೌಡರ, ಸಂಗೀತಾ ನಾಡಗೌಡರ, ಶಿವಶಂಕರಗೌಡ ಹಿರೇಗೌಡರ, ಸಂಗಯ್ಯ ಗಣಾಚಾರಿ ಉಪಸ್ಥಿತರಿರಲಿದ್ದಾರೆ. ಬಳಿಕ ದಾನಿಗಳಿಗೆ ಸನ್ಮಾನ ನಡೆಯಲಿದೆ. ಮೇ.2 ಹಾಗೂ 3 ರಂದು ಸಂಜೆ ಆಧ್ಯಾತ್ಮಿಕ ಪ್ರವಚನ, ಮೇ.4 ರಂದು ಬೆಳಗ್ಗೆ 7ಕ್ಕೆ ಕಿಲ್ಲಾದಲ್ಲಿನ ಗುಗ್ಗಳ ಬಸವೇಶ್ವರ ಹಾಗೂ ವೀರಭದ್ರೇಶ್ವರ ದೇವಸ್ಥಾನದಿಂದ ನೂತನ ಪಲ್ಲಕ್ಕಿ ಹಾಗೂ ಮೂರ್ತಿಗಳನ್ನು ಮೆರವಣಿಗೆ ಮೂಲಕ ವಿನಾಯಕ ನಗರದ ನೂತನ ದೇವಸ್ಥಾನಕ್ಕೆ ಕರೆತರುವುದು.

ಮೇ. 5 ರಂದು ಮೂಲ ಮೂರ್ತಿಗಳಿಗೆ ಅಭಿಷೇಕ ನಂತರ ನೂತನ ಮೂರ್ತಿಗಳ ಸ್ಥಾಪನೆ, ಮಹಾಭಿಷೇಕ, ಉತ್ಸವಮೂರ್ತಿ, ದೇವಸ್ಥಾನದ ಕಳಸವನ್ನು ದೇವಸ್ಥಾನಕ್ಕೆ ಕರೆತರಲಾಗುತ್ತದೆ. ಸಂಜೆ 5ಕ್ಕೆ ಶ್ರೀಶೈಲ ಚೆನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯರ ನೇತೃತ್ವದಲ್ಲಿ ಧರ್ಮಸಭೆ ನಡೆಯಲಿದೆ ಎಂದು ದೇವಸ್ಥಾನ ಕಮೀಟಿ ಅಧ್ಯಕ್ಷ ಶಾಹೀಲ್ ನಾಗಠಾಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Latest News

Free Slots Enjoy 32,178+ Slot Demonstrations Galera Bet app No Install

BlogsWhat are the secret differences when considering totally free ports and

Troll casino Eucasino 50 free spins Seekers Position ️ Play On line Free

ContentCasino Eucasino 50 free spins | Blood Moonlight WildsHigh-Investing SignsFederal CasinoDon’t

ಗ್ರಾಪಂ ಮಟ್ಟದ ಸೇವೆ ಅಸ್ತವ್ಯಸ್ತ ಸಾಧ್ಯತೆ:ಗ್ರಾ.ಪಂ ನೌಕರರನ್ನು ಸಮೀಕ್ಷೆಯಿಂದ ಕೈಬಿಡಲು ಒತ್ತಾಯ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ

ಬಿದ್ದಾಗ ಕೈ ಹಿಡಿದು ಮೇಲೆತ್ತಿ ಜೋಪಾನ ಮಾಡುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಿ-ಅಕ್ಷಯಾ ಗೋಖಲೆ

ಬಿದ್ದಾಗ ಕೈ ಹಿಡಿದು ಮೇಲೆತ್ತಿ ಜೋಪಾನ ಮಾಡುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಿ-ಅಕ್ಷಯಾ ಗೋಖಲೆ

ತಾಳಿಕೋಟಿ : ತಂದೆ ತಾಯಿ ಹುಟ್ಟಿನಿಂದ ನೀಡುವ ಸಂಸ್ಕಾರವು ಮಗುವಿನ ಭವಿಷ್ಯ ನಿರ್ಧರಿಸುತ್ತದೆ. ಈ ಮಣ್ಣಿನ ಸಂಸ್ಕೃತಿಯನ್ನು ಅಳವಡಿಸುವಂತಹ ಕಾರ್ಯ ಮಾಡಿದರೆ ಪ್ರತಿ ಮನೆಯಲ್ಲಿಯೂ ರಾಜ ಮಹಾರಾಜರನ್ನು ಕಾಣಲು ಸಾಧ್ಯವಾಗಲಿದೆ.ಬಿದ್ದಾಗ ಕೈ ಹಿಡಿದೆತ್ತಿಕೊಂಡು ಜೋಪಾನ ಮಾಡುವ ಸಂಸ್ಕಾರವನ್ನು ಮಕ್ಕಳಲ್ಲಿ ಪಾಲಕರು ಬಿತ್ತಬೇಕು ಎಂದು ಕಾರ್ಕಳದ ಖ್ಯಾತ ವಾಗ್ಮಿ ಅಕ್ಷಯಾ ಗೋಖಲೆ ಹೇಳಿದರು. ತಾಳಿಕೋಟಿ ತಾಲ್ಲೂಕಿನ ಮೈಲೇಶ್ವರದಲ್ಲಿ ಶನಿವಾರ ಬ್ರಿಲಿಯಂಟ್ ಕಲಾ ವೈಭವ-2026 ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ವಿಶೇಷ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಮುದ್ದೇಬಿಹಾಳ : ಸಿರಿವಂತರು ಸಿರಿವಂತಿಕೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರ ಕುರಿತು ಮಾತನಾಡುವುದು ಅಪರೂಪ.ಆದರೆ ಬಡವನ ಸ್ನೇಹ ಮಾಡಿದರೆ ಆತ ಬದುಕಿನ ಅನುಭವದ ಪಾಠ ಹೇಳುತ್ತಾನೆ ಎಂದು ಹಿರಿಯ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಹೇಳಿದರು. ಪಟ್ಟಣದ ಗಣೇಶ ನಗರದಲ್ಲಿ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಅವರ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದಾಶಿವ ಮಠ ಹಾಗೂ ಮೊಹ್ಮದ ರಫೀಕ ಶಿರೋಳ ಅವರ ತಂದೆಯವರು ನನಗೆ ಆಪ್ತರು.ಅವರ