Genius Student Award Competition: 172 medical students felicitated on April 5

ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆ:ಏ.5 ರಂದು 172 ಮೆಡಿಕಲ್ ವಿದ್ಯಾರ್ಥಿಗಳ ಸನ್ಮಾನ

ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆ:ಏ.5 ರಂದು 172 ಮೆಡಿಕಲ್ ವಿದ್ಯಾರ್ಥಿಗಳ ಸನ್ಮಾನ

Ad
Ad

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನಲ್ಲಿ ಏ.5 ರಂದು ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ-2025 ನ್ನು ಹಮ್ಮಿಕೊಳ್ಳಲಾಗಿದ್ದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಹೇಳಿದರು.

Ad
Ad

ಪಟ್ಟಣದಲ್ಲಿ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಗುರುವಾರ ಸುದ್ದಿಗೋಷ್ಠಿಯಲ್ಲಿ ಪರೀಕ್ಷೆಯ ವಿವರಗಳನ್ನು ಅವರು ನೀಡಿದರು. ಸಂಸ್ಥೆಯ ಚೇರಮನ್ ಎಂ. ಎಸ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ ಬಾರಿ ಎರಡು ಬಾರಿ ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ ನಡೆಸಲಾಗುತ್ತಿದ್ದು ಡಿ. 22, 2024 ರಂದು ಸ್ಕಾಲರ್‌ಶಿಪ್ ಪರೀಕ್ಷೆ ನಡೆಸಿ ಎರಡು ಕೋಟಿ ರೂ. ವರೆಗೂ ಉಚಿತ ಶಿಕ್ಷಣ ನೀಡಲಾಗುತ್ತಿದೆ. ಏ. 5 ರಂದು ಬೆಳಗ್ಗೆ 10ಕ್ಕೆ ನಡೆಯುವ ಪರೀಕ್ಷೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ 75 ಸಾವಿರ ರೂ., ಎರಡನೇ ಸ್ಥಾನ 50 ಸಾವಿರ ರೂ., ಮೂರನೇ ಸ್ಥಾನ 30 ಸಾವಿರ ರೂ., ನಾಲ್ಕನೇ ಸ್ಥಾನ 15 ಸಾವಿರ ರೂ., ಐದನೇ ಸ್ಥಾನ 10 ಸಾವಿರ ರೂ., ಆರನೇ ಸ್ಥಾನ ಪಡೆದುಕೊಳ್ಳುವ ವಿದ್ಯಾರ್ಥಿಗೆ ಐದು ಸಾವಿರ ರೂ. ಹಾಗೂ ಅತೀ ಹೆಚ್ಚು ಅಂಕ ಪಡೆದುಕೊಳ್ಳುವ ಮೊದಲ ಹತ್ತು ವಿದ್ಯಾರ್ಥಿಗಳಿಗೆ ತಲಾ 2500 ರೂ. ನಗದು ಬಹುಮಾನ ನೀಡಲಾಗುತ್ತದೆ ಎಂದು ತಿಳಿಸಿದರು.

ಪ್ರಶ್ನೆ ಪತ್ರಿಕೆ ಸ್ವರೂಪದ ಬಗ್ಗೆ ವಿವರಣೆ ನೀಡಿದ ಅಮೀತಗೌಡ ಅವರು, ಒಂದು ತಾಸಿನ ಅವಧಿಯ ಪರೀಕ್ಷೆ ಇದಾಗಿದ್ದು 60 ಅಂಕಗಳಿರುತ್ತವೆ. ಬಹುಆಯ್ಕೆ ವಸ್ತುನಿಷ್ಠ ಪ್ರಶ್ನೆಗಳಿರುತ್ತಿದ್ದು ಪ್ರತಿ ತಪ್ಪು ಉತ್ತರಕ್ಕೂ ಒಂದು ಅಂಕ ಕಡಿತಗೊಳಿಸಲಾಗುತ್ತದೆ. ಇಂಗ್ಲಿಷ್ ಗ್ರಾಮರ, ವಿಜ್ಞಾನ, ಗಣಿತ ವಿಷಯ ಒಳಗೊಂಡಿರುವ ಪ್ರಶ್ನೆ ಪತ್ರಿಕೆ ಕನ್ನಡ ಹಾಗೂ ಇಂಗ್ಲಿಷ್ ಭಾಷೆಯಲ್ಲಿರುತ್ತದೆ ಎಂದು ತಿಳಿಸಿದರು.

ವಿದ್ಯಾರ್ಥಿಗಳು, ಪಾಲಕರು ತಮಗೆ ಸರಿ ಎನ್ನಿಸುವ ಶಿಕ್ಷಣ ಸಂಸ್ಥೆ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಒಳ್ಳೆಯ ಸಂಸ್ಥೆ ಎಂದರೆ ಒಳ್ಳೆಯ ಫಲಿತಾಂಶ ಕೊಟ್ಟಿರುವುದನ್ನು ಗಮನಿಸಬೇಕು. 2024ರಲ್ಲಿ 172 ವಿದ್ಯಾರ್ಥಿಗಳು ಮೆಡಿಕಲ್ ಸೀಟು ಪಡೆದುಕೊಂಡಿದ್ದು ಅವರಿಗೆ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ ಎಂದರು.

ಆಸಕ್ತ ವಿದ್ಯಾರ್ಥಿಗಳು ತಮ್ಮ ಹೆಸರುಗಳನ್ನು ಮೊ. 9380095756ಗೆ ವಾಟ್ಸಾಪ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ. 9380095756, 7483147040 ನ್ನು ಸಂಪರ್ಕಿಸಬಹುದಾಗಿದೆ ಎಂದು ತಿಳಿಸಿದರು.

ಸಂಸ್ಥೆಯ ನಿರ್ದೇಶಕ ದರ್ಶನಗೌಡ ಪಾಟೀಲ್, ಶಿಕ್ಷಕರಾದ ರಾಜಶೇಖರ ಹಿರೇಮಠ, ಪರಶುರಾಮ ಹೂಗಾರ ಉಪಸ್ಥಿತರಿದ್ದರು.

Latest News

ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆಗೆ ಅರ್ಜಿ ಆಹ್ವಾನ

ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ

ಯತ್ನಾಳ ಉಚ್ಚಾಟನೆಗೆ ಆಕ್ರೋಶ: ಯತ್ನಾಳರಿಗಾಗಿ ಪ್ರಾಣ ಕೊಡಲು ಸಿದ್ಧ- ದೇಸಾಯಿ

ಯತ್ನಾಳ ಉಚ್ಚಾಟನೆಗೆ ಆಕ್ರೋಶ: ಯತ್ನಾಳರಿಗಾಗಿ ಪ್ರಾಣ ಕೊಡಲು ಸಿದ್ಧ- ದೇಸಾಯಿ

ಮುದ್ದೇಬಿಹಾಳ : ಬಸನಗೌಡ ಪಾಟೀಲ ಯತ್ನಾಳರು ಯಾವ ಪಕ್ಷದಲ್ಲಿರುತ್ತಾರೆಯೋ ಸಾಯುವವರಿಗೂ ಅವರ ಜೊತೆಗೆ ಇದ್ದು

ಭಾವಚಿತ್ರಗಳಿಗೆ ಅಪಮಾನ ತಡೆಗಟ್ಟಲು ಪೊಲೀಸರಿಗೆ ಬಿಜೆಪಿ ಪತ್ರ

ಭಾವಚಿತ್ರಗಳಿಗೆ ಅಪಮಾನ ತಡೆಗಟ್ಟಲು ಪೊಲೀಸರಿಗೆ ಬಿಜೆಪಿ ಪತ್ರ

ಯತ್ನಾಳ ಆಪ್ತ, ಜಿಪಂ ಮಾಜಿ ಉಪಾಧ್ಯಕ್ಷ ದೇಸಾಯಿ ವಿರುದ್ಧ ಕ್ರಮಕ್ಕೆ ಆಗ್ರಹ ಮುದ್ದೇಬಿಹಾಳ :

ರೇವಣಸಿದ್ದಪ್ಪಗೆ ಟ್ಯಾಲೆಂಟ್ ಅವಾರ್ಡ್ ಪ್ರಶಸ್ತಿಶಿಕ್ಷಣದೊಂದಿಗೆ ಸಂಸ್ಕಾರವೂ ಹೆಚ್ಚಲಿ- ಅಮರೇಶ್ವರ ಸ್ವಾಮೀಜಿ

ರೇವಣಸಿದ್ದಪ್ಪಗೆ ಟ್ಯಾಲೆಂಟ್ ಅವಾರ್ಡ್ ಪ್ರಶಸ್ತಿಶಿಕ್ಷಣದೊಂದಿಗೆ ಸಂಸ್ಕಾರವೂ ಹೆಚ್ಚಲಿ- ಅಮರೇಶ್ವರ ಸ್ವಾಮೀಜಿ

ಮುದ್ದೇಬಿಹಾಳ : ಮೊದಲು ಸಂಸ್ಕಾರ ಹೆಚ್ಚಾಗಿತ್ತು,ಶಿಕ್ಷಣ ಕಡಿಮೆ ಇತ್ತು. ಆದರೆ ಇಂದು ಶಿಕ್ಷಣ ಹೆಚ್ಚಿದಂತೆ

ಯತ್ನಾಳ ಉಚ್ಚಾಟನೆ ವಾಪಸಾತಿಗೆ ಪಂಚಮಸಾಲಿಗರ ಆಗ್ರಹ

ಯತ್ನಾಳ ಉಚ್ಚಾಟನೆ ವಾಪಸಾತಿಗೆ ಪಂಚಮಸಾಲಿಗರ ಆಗ್ರಹ

ಮುದ್ದೇಬಿಹಾಳ : ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಳಗಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಗೌರವಯುತವಾಗಿ ಮರಳಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ಮುಖಂಡರು ಇಂದಿಲ್ಲಿ ಆಗ್ರಹಿಸಿದರು. ಪಟ್ಟಣದ ಏಪಿಎಂಸಿಯಲ್ಲಿರುವ ಬಸಲಿಂಗಪ್ಪ ರಕ್ಕಸಗಿ ಅವರ ಅಡತಿ ಅಂಗಡಿಯಲ್ಲಿ ಗುರುವಾರ ಪಂಚಮಸಾಲಿ ಸಮಾಜದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡರಾದ ಶಿವಶಂಕರಗೌಡ ಹಿರೇಗೌಡರ, ಸಮಾಜದ ತಾಲ್ಲೂಕು ಅಧ್ಯಕ್ಷ ಅಮರೇಶ ಗೂಳಿ, ಕಾಮರಾಜ ಬಿರಾದಾರ ಮೊದಲಾದವರು,

ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆ:ಏ.5 ರಂದು 172 ಮೆಡಿಕಲ್ ವಿದ್ಯಾರ್ಥಿಗಳ ಸನ್ಮಾನ

ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆ:ಏ.5 ರಂದು 172 ಮೆಡಿಕಲ್ ವಿದ್ಯಾರ್ಥಿಗಳ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನಲ್ಲಿ ಏ.5 ರಂದು ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ-2025 ನ್ನು ಹಮ್ಮಿಕೊಳ್ಳಲಾಗಿದ್ದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಹೇಳಿದರು. ಪಟ್ಟಣದಲ್ಲಿ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಗುರುವಾರ ಸುದ್ದಿಗೋಷ್ಠಿಯಲ್ಲಿ ಪರೀಕ್ಷೆಯ ವಿವರಗಳನ್ನು ಅವರು ನೀಡಿದರು. ಸಂಸ್ಥೆಯ ಚೇರಮನ್ ಎಂ. ಎಸ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ