
ಇಂದು ಕರ್ನಾಟಕ ರಕ್ಷಣಾ ವೇದಿಕೆ ಹುಣಸಗಿ ತಾಲೂಕು ಘಟಕದ ವತಿಯಿಂದ ಏಪ್ರಿಲ್ 15 ರ ವರೆಗೆ ಕಾಲುವೆಗೆ ನೀರು ಹರಿಸುವಂತೆ ಆಗ್ರಹಿಸಿ ಅಮರಣಾ0ತ ಉಪವಾಸ ಸತ್ಯಾಗ್ರಹವನ್ನು ನಾರಾಯಣಪುರ ಮುಖ್ಯ ಅಭಿಯಂತರರ ಕಚೇರಿಯ ಎದುರುಗಡೆ ಹಮ್ಮಿಕೊಳ್ಳುವದಾಗಿ ಮಾನ್ಯ ಉಪ ತಹಶೀಲ್ದಾರರು ಕೊಡೇಕಲ್, ಹಾಗೂ ಮುಖ್ಯ ಅಭಿಯಂತರರು ನಾರಾಯಣಪುರ ಅವರಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಕರವೇ ಹುಣಸಗಿ ತಾಲೂಕು ಅಧ್ಯಕ್ಷರಾದ ಶ್ರೀ ಬಸವರಾಜ ಚನ್ನುರು, ಶಿವಲಿಂಗ ಸಾಹುಕಾರ್ ಪಟ್ಟಣಶೆಟ್ಟಿ, ರಾಜು ಅವರಾದಿ, ಶಿವಣಗೌಡ ಸದಬ, ಹನಮಗೌಡ ಮಾಲಿಪಾಟೀಲ್, ಬಸವರಾಜ ಕೊಂಡಗೂಳಿ, ಪ್ರಶಾಂತ್ ನಾಯಕ, ಹಣಮಂತ ದೊರಿ, ಸಂಗಮೇಶ್ ಕೊಡೇಕಲ್, ಬಸವರಾಜ್ ಕೊಡೇಕಲ್, ಬಸವರಾಜ ರಾಥೋಡ್, ಇನ್ನಿತರ ಉಪಸ್ಥಿತರಿದ್ದರು.