If you study hard, you will achieve your desired goal: Awarded to the student who stands third in the state

ಕಷ್ಟಪಟ್ಟು ಓದಿದರೆ ಇಚ್ಛೆಯ ಗುರಿ ಸಾಧನೆ:ರಾಜ್ಯಕ್ಕೆ ಮೂರನೇ ಸ್ಥಾನ ಬಂದ ವಿದ್ಯಾರ್ಥಿಗೆ ಸನ್ಮಾನ

ಕಷ್ಟಪಟ್ಟು ಓದಿದರೆ ಇಚ್ಛೆಯ ಗುರಿ ಸಾಧನೆ:ರಾಜ್ಯಕ್ಕೆ ಮೂರನೇ ಸ್ಥಾನ ಬಂದ ವಿದ್ಯಾರ್ಥಿಗೆ ಸನ್ಮಾನ

ಮುದ್ದೇಬಿಹಾಳ : ಎಸ್.ಎಸ್.ಎಲ್.ಸಿ ಪರೀಕ್ಷೆ-1ರಲ್ಲಿ ಕನ್ನಡ ಮಾಧ್ಯಮದಲ್ಲಿ 623 ಅಂಕ ಪಡೆದಿರುವ ನಮ್ಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅಕ್ಷತಾ ಆಸಂಗಿ ಅವಳ ಪಿಯುಸಿ ಎರಡು ವರ್ಷದ ಶಿಕ್ಷಣವನ್ನು ಸಂಸ್ಥೆಯಿಂದ ಉಚಿತವಾಗಿ ನೀಡಲಾಗುವುದು ಎಂದು ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆ ಚೇರಮನ್ ಬಿ.ಜಿ.ಮಠ ಹೇಳಿದರು.

ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಮಠ್ಸ್ ಸಮೂಹ ಶಿಕ್ಷಣ ಸಂಸ್ಥೆಯ ಎಸ್.ಡಿ.ಕೆ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದ ವಿದ್ಯಾರ್ಥಿನಿಗೆ ಸನ್ಮಾನಿಸಿ ಅವರು ಮಾತನಾಡಿದರು.

ಕನ್ನಡ ಮಾಧ್ಯಮದಲ್ಲಿ ತಾಲ್ಲೂಕಿಗೆ ಪ್ರಥಮ, ದ್ವಿತೀಯ ಹಾಗೂ ತೃತೀಯ ಸ್ಥಾನವನ್ನು ನಮ್ಮ ಶಾಲೆಯ ವಿದ್ಯಾರ್ಥಿಗಳೇ ಪಡೆದುಕೊಂಡಿರುವುದು ಖುಷಿ ತಂದಿದೆ. ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಸಂಸ್ಥೆಯಲ್ಲಿ ಆದ್ಯತೆ ಮೇರೆಗೆ ಉಚಿತ ಶಿಕ್ಷಣ ನೀಡುವುದಾಗಿ ಹೇಳಿದರು.

ವಿದ್ಯಾರ್ಥಿನಿ ಅಕ್ಷತಾ ಆಸಂಗಿ ಮಾತನಾಡಿ, ಹೆತ್ತವರ ಪ್ರೋತ್ಸಾಹ, ತಮ್ಮ ಕುಟುಂಬದ ಸದಸ್ಯರಂತೆ ಕಾಣುವ ಶಿಕ್ಷಣ ಸಂಸ್ಥೆಯವರ ಪ್ರೀತಿ, ಕಾಳಜಿ ಹಾಗೂ ಶಿಕ್ಷಕರ ಅಮೂಲ್ಯ ಮಾರ್ಗದರ್ಶನದಿಂದ ರಾಜ್ಯಕ್ಕೆ ಮೂರನೇ ಸ್ಥಾನ ಪಡೆದುಕೊಳ್ಳಲು ಸಾಧ್ಯವಾಗಿದೆ ಎಂದು ಎಸ್.ಎಸ್.ಎಲ್.ಸಿ ಟಾಪರ್ ಹೇಳಿದರು.

ವಿದ್ಯಾರ್ಥಿನಿಯ ತಂದೆ ಜಗದೀಶ ಆಸಂಗಿ, ತಾಯಿ ಹೇಮಾ ಆಸಂಗಿ, ಮುಖ್ಯ ಶಿಕ್ಷಕ ಹೀರೂ ನಾಯಕ ಮಾತನಾಡಿದರು. ಸಂಸ್ಥೆಯ ಸದಸ್ಯ ಲಾಲಸಾ ನದಾಫ, ಶಿಕ್ಷಕರು, ಸಿಬ್ಬಂದಿ ಇದ್ದರು.

ಕಣ್ಣೀರು ಹಾಕಿದ ತಾಯಿ:

ತಮ್ಮ ಮಗಳ ಸಾಧನೆ ಕುರಿತು ಅಕ್ಷತಾ ಆಸಂಗಿ ಅವರ ತಾಯಿ ಮಾತನಾಡುವಾಗ ತಮ್ಮನ್ನು ಅಗಲಿದ್ದ ಪುತ್ರನನ್ನು ನೆನೆಸಿಕೊಂಡು ಗದ್ಗದಿತರಾದರು. ಮಗ ಇಲ್ಲ ಎಂಬ ನೋವನ್ನು ಮಗಳು ತನ್ನ ಸಾಧನೆಯ ಮೂಲಕ ಮರೆಸಿದ್ದಾಳೆ ಎಂದು ಹೇಳಿ ಕಣ್ಣೀರಾದರು.

Latest News

Free Slots Enjoy 32,178+ Slot Demonstrations Galera Bet app No Install

BlogsWhat are the secret differences when considering totally free ports and

Troll casino Eucasino 50 free spins Seekers Position ️ Play On line Free

ContentCasino Eucasino 50 free spins | Blood Moonlight WildsHigh-Investing SignsFederal CasinoDon’t

ಗ್ರಾಪಂ ಮಟ್ಟದ ಸೇವೆ ಅಸ್ತವ್ಯಸ್ತ ಸಾಧ್ಯತೆ:ಗ್ರಾ.ಪಂ ನೌಕರರನ್ನು ಸಮೀಕ್ಷೆಯಿಂದ ಕೈಬಿಡಲು ಒತ್ತಾಯ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ವತಿಯಿಂದ ಸಾಮಾಜಿಕ,ಶೈಕ್ಷಣಿಕ ಹಾಗೂ ಆರ್ಥಿಕ

ಬಿದ್ದಾಗ ಕೈ ಹಿಡಿದು ಮೇಲೆತ್ತಿ ಜೋಪಾನ ಮಾಡುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಿ-ಅಕ್ಷಯಾ ಗೋಖಲೆ

ಬಿದ್ದಾಗ ಕೈ ಹಿಡಿದು ಮೇಲೆತ್ತಿ ಜೋಪಾನ ಮಾಡುವ ಸಂಸ್ಕಾರ ಮಕ್ಕಳಲ್ಲಿ ಬೆಳೆಸಿ-ಅಕ್ಷಯಾ ಗೋಖಲೆ

ತಾಳಿಕೋಟಿ : ತಂದೆ ತಾಯಿ ಹುಟ್ಟಿನಿಂದ ನೀಡುವ ಸಂಸ್ಕಾರವು ಮಗುವಿನ ಭವಿಷ್ಯ ನಿರ್ಧರಿಸುತ್ತದೆ. ಈ ಮಣ್ಣಿನ ಸಂಸ್ಕೃತಿಯನ್ನು ಅಳವಡಿಸುವಂತಹ ಕಾರ್ಯ ಮಾಡಿದರೆ ಪ್ರತಿ ಮನೆಯಲ್ಲಿಯೂ ರಾಜ ಮಹಾರಾಜರನ್ನು ಕಾಣಲು ಸಾಧ್ಯವಾಗಲಿದೆ.ಬಿದ್ದಾಗ ಕೈ ಹಿಡಿದೆತ್ತಿಕೊಂಡು ಜೋಪಾನ ಮಾಡುವ ಸಂಸ್ಕಾರವನ್ನು ಮಕ್ಕಳಲ್ಲಿ ಪಾಲಕರು ಬಿತ್ತಬೇಕು ಎಂದು ಕಾರ್ಕಳದ ಖ್ಯಾತ ವಾಗ್ಮಿ ಅಕ್ಷಯಾ ಗೋಖಲೆ ಹೇಳಿದರು. ತಾಳಿಕೋಟಿ ತಾಲ್ಲೂಕಿನ ಮೈಲೇಶ್ವರದಲ್ಲಿ ಶನಿವಾರ ಬ್ರಿಲಿಯಂಟ್ ಕಲಾ ವೈಭವ-2026 ಕಾರ್ಯಕ್ರಮದ ಎರಡನೇ ದಿನದ ಕಾರ್ಯಕ್ರಮದಲ್ಲಿ ಅವರು ವಿಶೇಷ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಬಡವರ ಸ್ನೇಹದಿಂದ ಬದುಕಿನ ಪಾಠ-ಇಬ್ರಾಹಿಂ ಮುಲ್ಲಾ

ಮುದ್ದೇಬಿಹಾಳ : ಸಿರಿವಂತರು ಸಿರಿವಂತಿಕೆಯ ಬಗ್ಗೆ ಮಾತನಾಡುತ್ತಾರೆಯೇ ಹೊರತು ಬಡವರ ಕುರಿತು ಮಾತನಾಡುವುದು ಅಪರೂಪ.ಆದರೆ ಬಡವನ ಸ್ನೇಹ ಮಾಡಿದರೆ ಆತ ಬದುಕಿನ ಅನುಭವದ ಪಾಠ ಹೇಳುತ್ತಾನೆ ಎಂದು ಹಿರಿಯ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಹೇಳಿದರು. ಪಟ್ಟಣದ ಗಣೇಶ ನಗರದಲ್ಲಿ ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಅವರ ನೇತೃತ್ವದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಸದಾಶಿವ ಮಠ ಹಾಗೂ ಮೊಹ್ಮದ ರಫೀಕ ಶಿರೋಳ ಅವರ ತಂದೆಯವರು ನನಗೆ ಆಪ್ತರು.ಅವರ