
ಮುದ್ದೇಬಿಹಾಳ : ಆದ್ಯವಚನಕಾರರಾಗಿದ್ದ ದೇವರ ದಾಸಿಮಯ್ಯನವರು ಕಾಯಕ ಮಹತ್ವವನ್ನು ಸಾರಿದ್ದರು. ಅವರ ಬರೆದಿರುವ 178 ವಚನಗಳು ದೊರೆತಿವೆ ಎಂದು ಶಿಕ್ಷಕ ಜಿ. ಟಿ. ಮಂಗಳೂರು ಹೇಳಿದರು.

ತಹಶೀಲ್ದಾರ್ ಕಚೇರಿಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಆದ್ಯ ವಚನಕಾರ ದೇವರ ದಾಸಿಮಯ್ಯನವರ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ತಹಶೀಲ್ದಾರ್ ಬಲರಾಮ ಕಟ್ಟಿಮನಿ ಮಾತನಾಡಿ, ಶರಣ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಆಚರಣೆಗಷ್ಟೇ ಜಯಂತಿ ಸಿಮೀತವಾಗಬಾರದು ಎಂದರು.
ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಬಸಂತಿ ಮಠ, ಶಿರಸ್ತೇದಾರ ಎಂ. ಎಸ್. ಬಾಗೇವಾಡಿ, ಶಕುಂತಲಾ ಸಜ್ಜನ, ದೇವಾಂಗ ನೇಕಾರ ಸಮಾಜದ ಮುಖಂಡರಾದ ಸಿ. ಎಸ್. ಗುಡ್ಡದ, ಮುತ್ತಣ್ಣ ಪ್ಯಾಟಿಗೌಡ್ರ, ಬನಶಂಕರಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಬಸಪ್ಪ ಹೆಬ್ಬಾಳ, ನಿರ್ದೇಶಕ ಶಂಕರ ಹೆಬ್ಬಾಳ, ವ್ಯವಸ್ಥಾಪಕಿ ವಿಜಯಲಕ್ಷ್ಮಿ ಪ್ಯಾಟಿಗೌಡರ, ಎ. ಬಿ. ಡಂಬಳ, ಎಂ. ಬಿ. ಗುಡಗುಂಟಿ, ಸಿದ್ದಣ್ಣ ಚಿತ್ತರಗಿ, ಬಸಪ್ಪ ಅಗಸಬಾಳ, ಅನುರಾಧಾ ಪ್ಯಾಟಿಗೌಡರ, ಶಿವು ಪ್ಯಾಟಿಗೌಡರ, ಉದಯ ರಾಯಚೂರ ಸೇರಿದಂತೆ ಹಲವರು ಉಪಸ್ಥಿತರಿದ್ದರು.