
ಬಾಗಲಕೋಟೆ: ಕೆಎಸ್ಆರ್ಟಿಸಿ ಬಸ್ ಹಾಗೂ ಬೈಕ್ ಮುಖಾಮುಖಿ ಡಿಕ್ಕಿಯಾಗಿ ದಂಪತಿಗಳು ಸ್ಥಳದಲ್ಲಿ ಸಾವನಪ್ಪಿರುವ ಘಟನೆ ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲೂಕಿನ ಮುಗಳಖೋಡ ಕ್ರಾಸ್ ಬಳಿ ನಡೆದಿದೆ. ಅಪಘಾತದಲ್ಲಿ ಬಸ್ ನಲ್ಲಿದ್ದ 15 ಕ್ಕೂ ಹೆಚ್ಚು ಜನರಿಗೆ ಗಾಯಗಳಾಗಿವೆ.

ಮೃತ ದಂಪತಿಗಳನ್ನು ಶಂಕ್ರಪ್ಪ ಲಕ್ಷ್ಮೇಶ್ವರ(55), ಶ್ರೀದೇವಿ ಲಕ್ಷ್ಮೇಶ್ವರ (50) ಎಂದು ಗುರುತಿಸಲಾಗಿದ್ದು, ಸ್ಥಳದಲ್ಲೇ ಸಾವನಪ್ಪಿದ್ದಾರೆ.
ಯುಗಾದಿ ಅಮವಾಸ್ಯೆ ಇದ್ದಿದ್ದರಿಂದ ಮಳಲಿ ಗ್ರಾಮ ವ್ಯಾಪ್ತಿಯಲ್ಲಿ ಇರುವ ಹೊಲಕ್ಕೆ ಪೂಜೆ ಸಲ್ಲಿಸಲು ಹೊರಟಿದ್ದರು. ಬಸ್ ನಲ್ಲಿದ್ದ ಗಾಯಾಳುಗಳನ್ನು ಸ್ಥಳೀಯರ ಸಹಾಯದಿಂದ ಮುಧೋಳ ತಾಲೂಕಾ ಆಸ್ಪತ್ರಗೆ ದಾಖಲು ಮಾಡಲಾಗಿದೆ.
ಸ್ಥಳಕ್ಕೆ ಮುಧೋಳ ಸಿಪಿಐ ಭೇಟಿ ಪರಿಶೀಲಿಸಿದ್ದಾರೆ. ಬೈಕ್ ಡಿಕ್ಕಿ ಹೊಡದ ರಭಸಕ್ಕೆ ರಸ್ತೆ ಬದಿ ಇದ್ದ ಕಬ್ಬಿಣದ ಬೃಹತ್ ಹೆದ್ದಾರಿ ನಾಮಫಲಕಕ್ಕೆ ಬಸ್ ಗುದ್ದಿದರಿಂದ ನೆಲಕ್ಕೆ ಉರುಳಿದೆ.
ಸ್ಥಳಕ್ಕೆ ಸಂಸದ ಗೋವಿಂದ ಕಾರಜೋಳ ಭೇಟಿ:
ಬೆಂಗಳೂರು-ಚಿಕ್ಕೋಡಿ ಬಸ್ ಆಕಸ್ಮಿಕವಾಗಿ ಅಪಘಾತಕ್ಕೀಡಾಗಿದ್ದು, ಇಬ್ಬರು ಮೃತ ಪಟ್ಟಿದ್ದಾರೆ, ಬಸ್ ನಳಿದ್ದ 20 ಜನರಿಗೆ ಗಾಯವಾಗಿದೆ. ಸರ್ಕಾರ ಕೂಡಲೇ ಮೃತರ ಕುಟುಂಬಕ್ಕೆ ಪರಿಹಾರ ಕೊಡಬೇಕು. ಗಾಯಾಳುಗಳಿಗೂ ಪರಿಹಾರ ಕೊಡಬೇಕು ಜೊತೆಗೆ ಚಿಕಿತ್ಸೆ ವೆಚ್ಚ ಭರಿಸಬೇಕು ಎಂದು ಚಿತ್ರದುರ್ಗದ ಸಂಸದ ಗೋವಿಂದ ಕಾರಜೋಳ ಹೇಳಿದರು.