ಮುಂಬೈ: ಸತತ 5 ಪಂದ್ಯಗಳ ಭರ್ಜರಿ ಗೆಲುವು ಸಾಧಿಸುವ ಮೂಲಕ ಮುಂಬೈ ಇಂಡಿಯನ್ಸ್ ತಂಡ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಜಿಗಿತ ಕಂಡಿದೆ.
ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ಲಖನೌ ವಿರುದ್ಧದ ಪಂದ್ಯದಲ್ಲಿ, ಟಾಸ್ ಗೆದ್ದ ಲಖನೌ ಜೈಂಟ್ಸ್ ನಾಯಕ ರಿಷಭ್ ಪಂತ್ ಬ್ಯಾಟಿಂಗ್ ಆಯ್ದುಕೊಂಡರು.
ರಿಯಾನ್ ರಿಕೆಲ್ಟನ್ ಮತ್ತು ಸೂರ್ಯಕುಮಾರ್ ಯಾದವ್ ಬಾರಿಸಿದ ಅಮೋಘ ಅರ್ಧಶತಕಗಳ ಬಲದಿಂದ ಮುಂಬೈ 7 ವಿಕೆಟ್ ಗಳ ನಷ್ಟಕ್ಕೆ 215 ರನ್ ಕಲೆ ಹಾಕಿತು.
ಟಾರ್ಗೆಟ್ ಬೆನ್ನತ್ತಿದ್ದ ಲಖನೌ 20 ಓವರ್ ಗಳಲ್ಲಿ 161 ರನ್ ಗಳಿಗೆ ಸರ್ವಪತನ ಕಂಡಿತ್ತು. ಮುಂಬೈ ತಂಡ 54 ರನ್ ಗಳ ಗೆಲುವು ಸಾಧಿಸಿತು.
ಮುಂಬೈ ಆಟಗಾರ ಸೂರ್ಯಕುಮಾರ್ ಯಾದವ್ ಐಪಿಎಲ್‌ನಲ್ಲಿ 4000 ರನ್ ಗಳಿಸಿದ ವಿಶ್ವದ ಅತ್ಯಂತ ವೇಗದ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.