Murder Case Image of murder symbol

Murder case: ಆಸ್ತಿಗಾಗಿ ಮೂವರು ಅಕ್ಕಂದಿರೇ ತಮ್ಮನನ್ನು ಕೊಚ್ಚಿ.. ಕೊಚ್ಚಿ.. ಕೊಂದೆ ಬಿಟ್ರು..!

Murder case: ಆಸ್ತಿಗಾಗಿ ಮೂವರು ಅಕ್ಕಂದಿರೇ ತಮ್ಮನನ್ನು ಕೊಚ್ಚಿ.. ಕೊಚ್ಚಿ.. ಕೊಂದೆ ಬಿಟ್ರು..!

ಚಿಕ್ಕಮಗಳೂರು: ಬಾವನ ಜೊತೆ ಸೇರಿ ಅಕ್ಕಂದಿರೇ ತಮ್ಮನನ್ನು ಕೊಚ್ಚಿ ಕೊಲೆಗೈದ (Murder case) ಭೀಕರ ದುರ್ಘಟನೆ ಇಂದು ಕಾಫಿನಾಡು ಚಿಕ್ಕಮಗಳೂರಿನಲ್ಲಿ ಸಂಭವಿಸಿದೆ.

Join Our Telegram: https://t.me/dcgkannada

ತರೀಕೆರೆ ಪಟ್ಟಣದ ಚೌಡೇಶ್ವರಿ ಕಾಲೋನಿಯಲ್ಲಿ ಈ‌ ಅವಘಡ ನಡೆದಿದ್ದು, ರಾಘವೇಂದ್ರ (43) ಕೊಲೆಯಾದ ವ್ಯಕ್ತಿ ದುರ್ದೈವಿ ಎಂದು ತಿಳಿದು ಬಂದಿದೆ.

ಆಸ್ತಿಗಾಗಿ ಕುಟುಂಬಸ್ಥರ ಜೊತೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. ಇದೇ ಕಾರಣದಿಂದ ಇಂದು ಬೆಳ್ಳಂಬೆಳಗ್ಗೆ ಬಾವನ ಜೊತೆಗೂಡಿ ಮೂವರು ಸಹೋದರಿಯರೂ ಬಂದು, ಮಲಗಿದ್ದ ತಮ್ಮನ ಕಣ್ಣಿಗೆ ಖಾರದ ಪುಡಿ ಎರಚಿ ಮನಸೋ ಇಚ್ಛೆ ಕೊಚ್ಚಿ (Murder case) ಹಾಕಿದ್ದಾರೆ ಎನ್ನಲಾಗಿದೆ.

ಸ್ಥಳಕ್ಕೆ ಎಸ್ಪಿ ವಿಕ್ರಂ ಅಮಟೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತರೀಕೆರೆ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.

ಪವಿತ್ರ ಗೌಡಗೆ ಶಾಕಿಂಗ್ ನ್ಯೂಸ್!

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿ ನಂಬರ್ 1 ಆಗಿರುವ ಪವಿತ್ರ ಗೌಡ ಪಾಲಿಗೆ ಇದು ಶಾಕಿಂಗ್ ನ್ಯೂಸ್!

ಹೌದು, ಸದ್ಯ ಜೈಲಿನಲ್ಲಿರುವ ಪವಿತ್ರಗೌಡ ಜಾಮೀನಿಗಾಗಿ ಸಲ್ಲಿಸಿರುವ ಅರ್ಜಿ ವಜಾಗೊಂಡಿದೆ. ಇದರಿಂದ ಜೈಲಿನಿಂದ ಹೊರಬರುವ ಕನಸು ಕನಸಾಗಿಯೇ ಉಳಿದಿದ್ದು, ತೀವ್ರ ಆಘಾತಕ್ಕೆ ಒಳಗಾಗಿದ್ದಾರೆ.

ಇಂದು ಸಿಟಿ ಸಿವಿಲ್ ಕೋರ್ಟ್‌ ಅವರ ಜಾಮೀನು ಅರ್ಜಿಯನ್ನು ವಜಾಗೊಳಿಸಿತು. ಜಾಮೀನು ಅರ್ಜಿ ವಿಚಾರಣೆ ನಡೆಸಿದ ನ್ಯಾ.ಜೈಶಂಕ‌ರ್ ಅವರು, ಅರ್ಜಿಯನ್ನು ಆಗಸ್ಟ್ 27ಕ್ಕೆ ಮುಂದೂಡಿ ಆದೇಶ ಹೊರಡಿಸಿದ್ದಾರೆ.

ಇತ್ತ, ಪವಿತ್ರಗೌಡಗೆ ಜಾಮೀನು ನೀಡಬಾರದು ಎಂದು SPP ವಾದ ಮಂಡಿಸಿರುವುದರಿಂದ ಭಾರೀ ಸಂಕಷ್ಟಕ್ಕೆ ಸಿಲುಕಿದ್ದು, ಮತ್ತಷ್ಟು ದಿನ ಜೈಲೂಟವೇ ಗತಿ ಎನ್ನಲಾಗಿದೆ.

ಇದನ್ನೂ ಓದಿ: Viral video: ಹೆಂಗಸಿನ ಮೇಲೆ ವ್ಯಾಮೋಹವಿದ್ದರೆ ನಮ್ಮ ಬಳಿ ಬನ್ನಿ: ರೆಡ್ ಲೈಟ್ ಏರಿಯಾ ಮಹಿಳೆಯ ಆಕ್ರೋಶ..!

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಚಾರ್ಚ್ ಶೀಟ್ ಸಲ್ಲಿಸಲು ತಯಾರಿ ಮಾಡಿಕೊಂಡಿದ್ದು, ಕೆಲ FSL ವರದಿಗಾಗಿ ಕಾಯುತ್ತಿದ್ದಾರೆ ಎಂದು ವರದಿಯಾಗಿದೆ.

Latest News

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ : ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ಸಮಗ್ರ ಪ್ರಶಸ್ತಿ

ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ : ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ಸಮಗ್ರ ಪ್ರಶಸ್ತಿ

ಮುದ್ದೇಬಿಹಾಳ : ತಾಲ್ಲೂಕಿನ ಕೊಪ್ಪ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಹುಲ್ಲೂರ ಕ್ಲಸ್ಟರ್

ಮನೆಮನೆಗೆ ಪೋಲಿಸ್ ಭೇಟಿ ನೀಡಿ ಕಾನೂನು ಅರಿವು ಕಾರ್ಯಕ್ರಮ

ಮನೆಮನೆಗೆ ಪೋಲಿಸ್ ಭೇಟಿ ನೀಡಿ ಕಾನೂನು ಅರಿವು ಕಾರ್ಯಕ್ರಮ

ನಾಲತವಾಡ: ಸ್ಥಳೀಯ ಹೊರ ಪೋಲಿಸ್ ಠಾಣೆ ಆರಕ್ಷಕ ಸಿಬ್ಬಂದಿ ಘಾಳಪೂಜಿ, ಬಿಜ್ಜೂರ, ಖಾನೀಕೇರಿ, ಲೊಟಗೇರಿ

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ಪ್ರತಿಭಾ ಕಾರಂಜಿಯಲ್ಲಿ ಮಕ್ಕಳ ಕಲರವ

ನಾಲತವಾಡ: ಸಮೀಪದ ಲೊಟಗೇರಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಂಸ್ಕೃತಿಯ ಕಾಂತಿ ಮಕ್ಕಳ ಮೂಲಕ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮಹಿಳೆಯರಿಗೆ ಋತುಚಕ್ರ ರಜೆ :ಸರ್ಕಾರದಿಂದ ಮಾನವೀಯ ಸಂವೇದನೆಯ ಆದೇಶ-ಸಂಗೀತಾ ನಾಡಗೌಡ

ಮುದ್ದೇಬಿಹಾಳ : ರಾಜ್ಯ ಸರ್ಕಾರ ಎರಡು ದಿನಗಳ ಹಿಂದಷ್ಟೇ ರಾಜ್ಯದ ಸರ್ಕಾರಿ,ಖಾಸಗಿ.ಗುತ್ತಿಗೆ,ಹೊರಗುತ್ತಿಗೆ ಕ್ಷೇತ್ರದಲ್ಲಿ ಸೇವೆ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸೋಣ

ಮುದ್ದೇಬಿಹಾಳ : ಅಂಜುಮನ್ ಸಂಸ್ಥೆಯ ಅಭಿವೃದ್ಧಿಗೆ ಕೈ ಜೋಡಿಸೋಣ

ಮುದ್ದೇಬಿಹಾಳ : ಮುಸ್ಲಿಂ ಸಮಾಜದ ಪ್ರಾತಿನಿಧಿಕ ಸಂಸ್ಥೆ ಅಂಜುಮನ್ ಇಸ್ಲಾಂ ಕಮೀಟಿಗೆ ಆಡಳಿತ ಮಂಡಳಿ ರಚನೆಗೊಂಡರೆ ಸಮಾಜದ ಶೈಕ್ಷಣಿಕ ಹಾಗೂ ಔದ್ಯೋಗಿಕ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಆದ್ಯತೆ ದೊರೆಯುತ್ತದೆ ಎಂದು ಕಾರ್ಮಿಕ ಮುಖಂಡ ಇಬ್ರಾಹಿಂ ಮುಲ್ಲಾ ಹೇಳಿದರು. ಪಟ್ಟಣದ ಅಂಜುಮನ್ ಇಸ್ಲಾಂ ಕಮೀಟಿ ಕಚೇರಿಯಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹರನಾಳ ಪಿಕೆಪಿಎಸ್ ಅಧ್ಯಕ್ಷ ಕಾಶೀಂಪಟೇಲ್ ಮೂಕಿಹಾಳ ಹಾಗೂ ಅಂಜುಮನ್ ಸಂಸ್ಥೆಯ ಮತದಾರ ಸದಸ್ಯರ ದಾಖಲಾತಿ ಅಧಿಕಾರಿಯಾಗಿ ನೇಮಕವಾದ ಹುಸೇನ ನಾಯಕೋಡಿ ಅವರ

ಬಸರಕೋಡ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ : ಮತ್ತೆ ಹೇಮರೆಡ್ಡಿ ಮೇಟಿ ಪೆನಲ್‌ಗೆ ಮುನ್ನಡೆ

ಬಸರಕೋಡ ಪಿಕೆಪಿಎಸ್‌ಗೆ ಅವಿರೋಧ ಆಯ್ಕೆ : ಮತ್ತೆ ಹೇಮರೆಡ್ಡಿ ಮೇಟಿ ಪೆನಲ್‌ಗೆ ಮುನ್ನಡೆ

ಮುದ್ದೇಬಿಹಾಳ : ತಾಲ್ಲೂಕಿನ ಬಸರಕೋಡದ ವಿವಿಧೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 12 ಸ್ಥಾನಗಳಿಗೆ ಸೋಮವಾರ ಅವಿರೋಧ ಆಯ್ಕೆ ನಡೆದಿದ್ದು ಹಿಂದಿನ ಅಧ್ಯಕ್ಷ ಹೇಮರೆಡ್ಡಿ ಮೇಟಿ ಪೆನಲ್‌ಗೆ ಮುನ್ನಡೆ ದೊರೆತಿದೆ. ಚುನಾವಣಾಧಿಕಾರಿ, ಸಹಕಾರ ಅಭಿವೃದ್ಧಿ ಅಧಿಕಾರಿ ವಿ.ಎಸ್.ಉತ್ನಾಳ ಅವರು 12 ನಿರ್ದೇಶಕರು ಅವಿರೋಧ ಆಯ್ಕೆಯಾಗಿದ್ದಾರೆ ಎಂದು ಘೋಷಿಸಿದರು. ಸಾಮಾನ್ಯ ವರ್ಗದಿಂದ ಹಿಂದಿನ ಅಧ್ಯಕ್ಷ ಹೇಮಣ್ಣ ಮೇಟಿ, ಬಸವರಾಜ ಪಾಟೀಲ, ಶಾಂತಪ್ಪ ಸಂಕನಾಳ, ಬಾಬು ಸೂಳಿಭಾವಿ,ಸಿಂದೂಬಲ್ಲಾಳ ನಾಡಗೌಡ, ಹಿಂದುಳಿದ ಅ