ಜಮಖಂಡಿ ತಾಲೂಕಿನ ಶೂರ್ಪಾಲಿ ಗ್ರಾಮದ ಶತಮಾನ ಕಂಡ ಸರ್ಕಾರಿ ಹಿರಿಯ ಮಾದರಿ ಶಾಲೆಯಲ್ಲಿ ನಡೆದ ನಲಿ – ಕಲಿ ವಿದ್ಯಾರ್ಥಿಗಳಿಗೆ ಡಿವೈಎಸ್ಪಿ ಶ್ರೀ ಶಾಂತವೀರ್ ಸರ್ ಹಾಗೂ ಸಿಂದಗಿ ತಾಲೂಕಿನ ತಹಸಿಲ್ದಾರ್ ಸಾಹೇಬರಾದ ಶ್ರೀ ಸಂಜು ಕುಮಾರ್ ದಾಸರ್ ಸರ್ ಇರುವರೂ ಕೂಡಿಕೊಂಡು ಶೂರ್ಪಾಲಿ ಶಾಲೆಯ ನಲಿ-ಕಲಿ ಮಕ್ಕಳಿಗೆ ಕುಳಿತುಕೊಳ್ಳಲು 70 ಸಾವಿರ ರೂಪಾಯಿಗಳ ಬೆಲೆಬಾಳುವ ಚೇರ್ ಹಾಗೂ ಟೇಬಲ್ ಗಳನ್ನು ಕಾಣಿಕೆಯಾಗಿ ನೀಡುವ ಕಾರ್ಯಕ್ರಮದಲ್ಲಿ ಅವರು ಮಾತನಾಡಿ ವಿದ್ಯಾರ್ಥಿಗಳು ಶಿಸ್ತು ರೂಡಿಸಿಕೊಂಡು ಮೌಲ್ಯಯುತ ಜೀವನ ನಡೆಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ತಹಸಿಲ್ದಾರ್ ಸಂಜು ಕುಮಾರ್ ದಾಸರ್ ಮಾತನಾಡಿ ವಿದ್ಯಾರ್ಥಿಗಳು ಯಶಸ್ಸು ಕಾಣಲು ಕಠಿಣ ಪರಿಶ್ರಮ, ಹಾಗೂ ಶ್ರದ್ಧೆ ಬಹಳ ಮುಖ್ಯವಾಗಿರುತ್ತದೆ, ಹಾಗೆ ನಾವು ಒಳ್ಳೆಯ ಪ್ರಜೆಗಳಾಗಿ ಜೀವನ ನಡೆಸಬೇಕು ಎಂದು ತಿಳಿಸಿದರು.
ಗ್ರಾಮದ ಹಿರಿಯರಾದ, ಗುರುಪಾದ ಕುಂಚನೂರ್, ಎಸ್ ಡಿ ಎಮ್ ಸಿ ಅಧ್ಯಕ್ಷ ಈಶ್ವರ ಕಂಕನವಾಡಿ, ಈಶ್ವರ ಕಲ್ಲೋಳಿ, ಸಂಗಪ್ಪ ಕಣಬೂರ, ಬಾವು ನಾವಿ, ನರಸಿಂಹ ಪಾಟೀಲ, ಶೇಖರ ಪಾಟೀಲ, ನರಸಿಂಹ ಹಂಡೆನವರ, ಗುರುಲಿಂಗ ಕೊಕ್ಕನವರ, ಬಸವರಾಜ ಕಟಗೇರಿ, ಅಣ್ಣು ಗೌಡ ಪಾಟೀಲ್,ರಾಜು ಹೊಸೂರು, ಸದಾಶಿವ್ ಕೋಕ್ಕನವರ, ಅನೇಕರು ಉಪಸ್ಥಿತರಿದ್ದರು.
ಎಸ್. ಐ. ಲೋನಿ ಸ್ವಾಗತಿಸಿದರು,ಬಿ. ಏನ್. ಜಮಖಂಡಿ ನಿರೂಪಿಸಿದರು, ಎಚ್. ಎಮ್. ಉಸ್ತಾದ್ ವಂದಿಸಿದರು.







