Persuasion of wife who asked for alimony: Lok Adalat united the couple

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

ಜೀವನಾಂಶ ಕೇಳಿದ್ದ ಪತ್ನಿಯ ಮನವೊಲಿಕೆ: ದಂಪತಿಗಳನ್ನು ಒಂದುಗೂಡಿಸಿದ ಲೋಕಅದಾಲತ್

Ad
Ad

ಮುದ್ದೇಬಿಹಾಳ : ಕೌಟುಂಬಿಕ ಹಿನ್ನೆಲೆಯ ದಂಪತಿಗಳಿಬ್ಬರ ಪ್ರಕರಣವನ್ನು ಇಲ್ಲಿನ ಲೋಕ ಅದಾಲತ್‌ನಲ್ಲಿ ರಾಜೀ ಸಂಧಾನದ ಮೂಲಕ ಪರಿಹರಿಸಲಾಗಿದ್ದು ನ್ಯಾಯಾಲಯ ಇಬ್ಬರನ್ನು ಒಂದುಗೂಡಿಸಿ ಸಹಬಾಳ್ವೆಗೆ ಅವಕಾಶ ಮಾಡಿಕೊಟ್ಟಿದೆ.

Ad
Ad

ತಾಲೂಕು ಕಾನೂನು ಸೇವಾ ಸಮಿತಿ ವತಿಯಿಂದ ಶನಿವಾರ ಇಲ್ಲಿನ ನ್ಯಾಯಾಲಯಗಳ ಸಂಕೀರ್ಣದಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಏರ್ಪಡಿಸಲಾಗಿತ್ತು.ಲೋಕ ಅದಾಲತ್‌ನಲ್ಲಿ ಸಿವಿಲ್ ನ್ಯಾಯಾಲಯದ ಒಂದು ಕೌಟುಂಬಿಕ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಕರಣವನ್ನು ರಾಜಿ ಸಂಧಾನದ ಮೂಲಕ ಗಂಡ ಹೆಂಡತಿಯನ್ನು ಒಂದುಗೂಡಿಸಿ ಪ್ರಕರಣವನ್ನು ಇತ್ಯರ್ಥಗೊಳಿಸಲಾಯಿತು. ಬ.ಬಾಗೇವಾಡಿ ತಾಲ್ಲೂಕು ಉಪ್ಪಲದಿನ್ನಿ ತಾಂಡಾದ ನಿವಾಸಿ ನಾಮದೇವ ಬಾಬು ರಾಠೋಡ ಹಾಗೂ ಕೋಳೂರು ತಾಂಡಾದ ಅಶ್ವಿನಿ ನಾಮದೇವ ರಾಠೋಡ ಮಧ್ಯೆ ಭಿನ್ನಾಭಿಪ್ರಾಯ ಉಂಟಾಗಿ ಅಶ್ವಿನಿ ಅವರು ತಮ್ಮ ವಕೀಲರ ಮೂಲಕ ನ್ಯಾಯಾಲಯಕ್ಕೆ ಜೀವನಾಂಶ ಕೊಡಿಸುವಂತೆ ಪ್ರಕರಣ ದಾಖಲಿಸಿದ್ದರು.

ಈ ಪ್ರಕರಣವನ್ನು ರಾಜೀ ಸಂಧಾನದ ಮೂಲಕ ಸಿವಿಲ್ ನ್ಯಾಯಾಧೀಶರಾದ ಸಂಪತ್ತಕುಮಾರ ಬಳೂಲಗಿಡದ ಅವರು ಪರಿಹರಿಸಿ ದಂಪತಿಗಳಿಬ್ಬರನ್ನು ಒಂದುಗೂಡಿಸಿದರು. ಅಲ್ಲದೇ ನ್ಯಾಯಾಲಯದಲ್ಲಿ ದಂಪತಿಗಳಿಬ್ಬರು ಪರಸ್ಪರ ಹೂವಿನ ಮಾಲೆ ಹಾಕಿ ಸಿಹಿ ತಿನ್ನಿಸಿ ಪ್ರಕರಣ ಇತ್ಯರ್ಥಕ್ಕೆ ಸಹಕಾರ ನೀಡಿದರು.ಉಭಯ ಕಕ್ಷಿದಾರರ ಪರ ವಕೀಲರಾದ ಎಸ್.ಎಸ್.ಮಾಲಗತ್ತಿ, ಎಸ್.ಸಿ.ಹಿರೇಮಠ ಇದ್ದರು.

ಇನ್ನುಳಿದಂತೆ ಲೋಕ ಅದಾಲತ್‌ನಲ್ಲಿ ಎರಡು ನ್ಯಾಯಾಲಯಗಳಿಗೆ ಸಂಬಂಧಿಸಿದಂತೆ ಒಟ್ಟು 7771 ಬಾಕಿ ಇರುವ ಪ್ರಕರಣಗಳಲ್ಲಿ 2370 ಪ್ರಕರಣಗಳನ್ನು ಕೈಗೆತ್ತಿಕೊಳ್ಳಲಾಗಿತ್ತು.ಒಟ್ಟು 1979 ಪ್ರಕರಣಗಳನ್ನು ರಾಜಿ ಸಂಧಾನದ ಮೂಲಕ ಇತ್ಯರ್ಥಪಡಿಸಲಾಯಿತು.
ಪೂರ್ವದಾವೆ ಪ್ರಕರಣಗಳಲ್ಲಿ ಒಟ್ಟು 1866 ಪ್ರಕರಣಗಳಲ್ಲಿ 897 ಪ್ರಕರಣಗಳು ರಾಜಿ ಸಂಧಾನದ ಮೂಲಕ ಇತ್ಯರ್ಥಗೊಳಿಸಲಾಯಿತು.

ಲೋಕ ಅದಾಲತ್‌ನಲ್ಲಿ ಸಿವಿಲ್ ನ್ಯಾಯಾಧೀಶರಾದ ರವೀಂದ್ರಕುಮಾರ ಕಟ್ಟೀಮನಿ, ಸಂಧಾನಕಾರರಾಗಿ ವಕೀಲರಾದ ಶೋಭಾ ಪಾಟೀಲ, ರೇಣುಕಾ ಪಾಟೀಲ, ವಕೀಲರ ಸಂಘದ ಅಧ್ಯಕ್ಷ ಶಶಿಕಾಂತ ಮಾಲಗತ್ತಿ, ತಾಲೂಕಾ ಕಾನೂನು ಸೇವಾ ಸಮಿತಿಯ ಆಡಳಿತ ಸಹಾಯಕರು, ನ್ಯಾಯಾಲಯ ಸಿಬ್ಬಂದಿ, ಹಿರಿಯ , ಕಿರಿಯ ವಕೀಲರು ಪಾಲ್ಗೊಂಡಿದ್ದರು.

Latest News

ರಂಜಾನ್ ಹಬ್ಬದ ಆಚರಣೆಗೆ ಕಿಟ್ ವಿತರಣೆ:ದಾನ, ಧರ್ಮ ಪ್ರಚಾರವಾಗದೇ ಪ್ರೇರಣೆಯಾಗಿರಲಿ: ಸತೀಶ ಓಸ್ವಾಲ್

ರಂಜಾನ್ ಹಬ್ಬದ ಆಚರಣೆಗೆ ಕಿಟ್ ವಿತರಣೆ:ದಾನ, ಧರ್ಮ ಪ್ರಚಾರವಾಗದೇ ಪ್ರೇರಣೆಯಾಗಿರಲಿ: ಸತೀಶ ಓಸ್ವಾಲ್

ಮುದ್ದೇಬಿಹಾಳ : ಸಮಾಜಕ್ಕೆ ಪ್ರೇರಣೆಯಾಗುವ ಸೇವೆಯನ್ನು ನಾವೆಲ್ಲ ಮಾಡಬೇಕು ಎಂದು ಕರ್ನಾಟಕ ಕೋ ಆಪರೇಟಿವ್

ವೀರಶೈವ, ಲಿಂಗಾಯತ ಬೇರೆ ಬೇರೆಯಲ್ಲ-ಶಂಕರ ಬಿದರಿ

ವೀರಶೈವ, ಲಿಂಗಾಯತ ಬೇರೆ ಬೇರೆಯಲ್ಲ-ಶಂಕರ ಬಿದರಿ

ಮುದ್ದೇಬಿಹಾಳ : ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ, ರಂಭಾಪುರಿ ಸ್ವಾಮೀಜಿಯವರು ಸೇರಿದಂತೆ ಹಲವು ಮಠಾಧೀಶರು

ಹಸಿರು ತೋರಣ ಗೆಳೆಯರ ಬಳಗದ ಕಾಳಜಿ:ಪಕ್ಷಿಗಳಿಗೆ ನೀರು ಇಡೋಣ

ಹಸಿರು ತೋರಣ ಗೆಳೆಯರ ಬಳಗದ ಕಾಳಜಿ:ಪಕ್ಷಿಗಳಿಗೆ ನೀರು ಇಡೋಣ

ಮುದ್ದೇಬಿಹಾಳ: ಬೇಸಿಗೆ ಕಾಲದಲ್ಲಿ ನೀರಿಗಾಗಿ ಪ್ರಾಣಿ, ಪಕ್ಷಿಗಳು ಬಹಳಷ್ಟು ಪರದಾಡಿ ಜೀವ ಕಳೆದುಕೊಳ್ಳುವ ಸಾಧ್ಯತೆ

ಮಕ್ಕಳ ಕಲಿಕೆಗೆ ಸಾಮಗ್ರಿ ಸಹಕಾರಿ-ಕುಪ್ಪಸ್ತ

ಮಕ್ಕಳ ಕಲಿಕೆಗೆ ಸಾಮಗ್ರಿ ಸಹಕಾರಿ-ಕುಪ್ಪಸ್ತ

ನಿಡಗುಂದಿ : ಕಲಿಕಾ ಸಾಮಗ್ರಿ ಸರ್ಕಾರಿ ಶಾಲೆಗಳ ಬಡ ಮಕ್ಕಳ ಕಲಿಕೆಗೆ ಸಹಕಾರಿಯಾಗಿವೆ ಎಂದು

ಎಸ್.ಎಸ್.ಎಲ್.ಸಿ ಪರೀಕ್ಷೆ:ಪರೀಕ್ಷಾ ಕೇಂದ್ರವಿರುವ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಮುಖ್ಯ ಅಧಿಕ್ಷಕರ ಜವಾಬ್ದಾರಿ..!

ಎಸ್.ಎಸ್.ಎಲ್.ಸಿ ಪರೀಕ್ಷೆ:ಪರೀಕ್ಷಾ ಕೇಂದ್ರವಿರುವ ಪ್ರೌಢಶಾಲೆಗಳ ಮುಖ್ಯಶಿಕ್ಷಕರಿಗೆ ಮುಖ್ಯ ಅಧಿಕ್ಷಕರ ಜವಾಬ್ದಾರಿ..!

ಮುದ್ದೇಬಿಹಾಳ : ಪರೀಕ್ಷೆ ನಡೆಯುವ ಶಿಕ್ಷಣ ಸಂಸ್ಥೆ, ಪ್ರೌಢಶಾಲೆ ಮುಖ್ಯಗುರುಗಳು ಎಸ್.ಎಸ್.ಎಲ್.ಸಿ ಪರೀಕ್ಷೆಯ ಮುಖ್ಯ ಅಧೀಕ್ಷಕರಾಗಿ ಅದೇ ಶಾಲೆಯಲ್ಲಿರುವ ಕೇಂದ್ರದಲ್ಲಿ ಕರ್ತವ್ಯ ನಿರ್ವಹಿಸುವುದಕ್ಕೆ ಶಿಕ್ಷಣ ಇಲಾಖೆ ನಿರ್ಬಂಧ ವಿಧಿಸಿದೆ.ಆದರೆ ಇಲ್ಲಿನ ತಾಲ್ಲೂಕು ಶಿಕ್ಷಣಾಧಿಕಾರಿಗಳು ನಿಯೋಜಿಸಿರುವ ಶಾಲೆಯ ವೇಳಾ ಪಟ್ಟಿಯಲ್ಲಿ ಸ್ಥಳೀಯ ಪರೀಕ್ಷಾ ಕೇಂದ್ರದ ಶಾಲೆಯ ಮುಖ್ಯಶಿಕ್ಷಕರಿಗೆ ಮುಖ್ಯ ಅಧೀಕ್ಷಕರ ಜವಾಬ್ದಾರಿಯನ್ನು ನೀಡಿರುವುದು ಚರ್ಚೆಗೆ ಗ್ರಾಸವಾಗಿದೆ. ತಾಳಿಕೋಟಿಯ ಎರಡು ಪರೀಕ್ಷಾ ಕೇಂದ್ರಗಳು ಹಾಗೂ ಮುದ್ದೇಬಿಹಾಳ ತಾಲ್ಲೂಕಿನ ಮೂರು ಪರೀಕ್ಷಾ ಕೇಂದ್ರಗಳಿಗೆ ಆಯಾ

ಪ್ರಕಾಶ್ ರಾಜ್ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್

ಪ್ರಕಾಶ್ ರಾಜ್ ಸೇರಿ 25 ಸೆಲೆಬ್ರಿಟಿಗಳ ವಿರುದ್ಧ ಎಫ್ಐಆರ್

ಹೈದರಾಬಾದ್: ಬೆಟ್ಟಿಂಗ್ ಅಪ್ಲಿಕೇಶನ್ ಪ್ರಚಾರ ಮಾಡಿದ ಆರೋಪದ ಮೇಲೆ ಕನ್ನಡ ಚಿತ್ರರಂಗದ ಖ್ಯಾತ ನಟ ಪ್ರಕಾಶ್‌ ರಾಜ್, ನಟರಾದ ವಿಜಯ್‌ ದೇವರಕೊಂಡ, ರಾಣಾ ದಗ್ಗುಭಾಟಿ ಸೇರಿದಂತೆ 25ಕ್ಕೂ ಹೆಚ್ಚು ನಟ-ನಟಿಯರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಸಂಬಂಧ 25 ನಟ,ನಟಿಯರ ವಿರುದ್ದ ತೆಲಂಗಾಣದಲ್ಲಿ ಪೊಲೀಸ್ ಕೇಸ್ ಎದುರಿಸುತ್ತಿದ್ದಾರೆ. ಉದ್ಯಮಿ ಫಣೀಂದ್ರ ಶರ್ಮಾ ದೂರು ನೀಡಿದ ನಂತರ ಎಫ್‌ಐಆರ್ ದಾಖಲಿಸಲಾಗಿದೆ. ಎಫ್‌ಐಆರ್‌ನಲ್ಲಿ ಹೆಸರಿಸಲಾದ ಸಂಬ್ರಿಟಿಗಳು ಮತ್ತು ಪ್ರಭಾವಿಗಳಲ್ಲಿ ಪ್ರಣೀತಾ, ನಿಧಿ ಅಗರ್‌ವಾಲ್,