ಮುದ್ದೇಬಿಹಾಳ : ಪಟ್ಟಣದ ವಿನಾಯಕ ನಗರದಲ್ಲಿ ನಿರ್ಮಿಸಿರುವ ನೂತನ ವಿನಾಯಕ, ಭದ್ರಕಾಳಿ ಸಮೇತ ಶ್ರೀ ವೀರಭದ್ರೇಶ್ವರ ದೇವಸ್ಥಾನದ ನೂತನ ಪಲ್ಲಕ್ಕಿ, ಮೂರ್ತಿಗಳನ್ನು ಭಾನುವಾರ ಮೆರವಣಿಗೆ ಮೂಲಕ ಕರೆತಂದ ವೇಳೆ ಪುರವಂತರು ಸೇವಾ ಕಾರ್ಯ ನಡೆಸಿದರು.
ಪಟ್ಟಣದ ಕಿಲ್ಲಾದ ಕಾಳಿಕಾದೇವಿ ಹಾಗೂ ವೀರಭದ್ರೇಶ್ವರ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ಸರಾಫ ಬಜಾರ್, ಇಂದಿರಾ ವೃತ್ತ, ಬನಶಂಕರಿ ವೃತ್ತದ ಮೂಲಕ ದೇವಸ್ಥಾನಕ್ಕೆ ತಲುಪಿತು. ಮೆರವಣಿಗೆಯಲ್ಲಿ 108 ಕುಂಭ ಕಳಸಗಳನ್ನು ಹೊತ್ತ ಮಹಿಳೆಯರು ಸಾಗಿದರು. ಮೇ.5 ರಂದು ನೂತನ ದೇವಸ್ಥಾನದ ಉದ್ಘಾಟನೆ, ಧರ್ಮಸಭೆ ಸಂಜೆ ನಡೆಯಲಿದೆ. ಮೆರವಣಿಗೆಯಲ್ಲಿ ವಿವಿಧ ಕಡೆಗಳಿಂದ ಆಗಮಿಸಿದ್ದ ಪುರವಂತರು ಸೇವಾ ಕಾರ್ಯ ನಡೆಸಿಕೊಟ್ಟರು. ದೇವಸ್ಥಾನ ಕಮೀಟಿ ಪದಾಧಿಕಾರಿಗಳು ಇದ್ದರು.