Release of Pedagogical Artist Appreciation Book: Social Work by Polish Teachers - Kudalasangama Shri

ಶಿಕ್ಷಣ ಶಿಲ್ಪಿ ಅಭಿನಂದನಾ ಗ್ರಂಥ ಬಿಡುಗಡೆ :ಪೊಲೇಶಿ ಶಿಕ್ಷಕರಿಂದ ಸಮಾಜಮುಖಿ ಕಾರ್ಯ- ಕೂಡಲಸಂಗಮ ಶ್ರೀ

ಶಿಕ್ಷಣ ಶಿಲ್ಪಿ ಅಭಿನಂದನಾ ಗ್ರಂಥ ಬಿಡುಗಡೆ :ಪೊಲೇಶಿ ಶಿಕ್ಷಕರಿಂದ ಸಮಾಜಮುಖಿ ಕಾರ್ಯ- ಕೂಡಲಸಂಗಮ ಶ್ರೀ

ಮುದ್ದೇಬಿಹಾಳ : ಪ್ರೀತಿ, ಸೇವೆ, ತ್ಯಾಗ,ಮಮತೆ ಮುಂತಾದ ಮಾನವೀಯ ಗುಣಗಳನ್ನು ಒಳಗೊಂಡಿರುವ ಪೋಲೇಶಿ ಶಿಕ್ಷಕರು ಬದುಕಿನುದ್ದಕ್ಕೂ ವಿದ್ಯಾರ್ಥಿಗಳಿಗೆ ಅಕ್ಷರ ದಾಸೋಹದ ಮೂಲಕ ಸಮಾಜಮುಖಿ ಕಾರ್ಯ ಮಾಡಿದ್ದಾರೆ ಎಂದು ಕೂಡಲಸಂಗಮ ಪಂಚಮಸಾಲಿ ಪೀಠದ ಬಸವ ಜಯಮೃತ್ಯುಂಜಯ ಸ್ವಾಮೀಜಿ ಹೇಳಿದರು.

ತಾಲ್ಲೂಕು ನೆರಬೆಂಚಿಯ ಎಚ್ಚರೇಶ್ವರ ದೇವಸ್ಥಾನದಲ್ಲಿ ನಿವೃತ್ತ ಶಿಕ್ಷಕ ನಾಗಪ್ಪ ಪೊಲೇಶ ಅವರ ಶಿಕ್ಷಣ ಶಿಲ್ಪಿ ಅಭಿನಂದನಾ ಗ್ರಂಥವನ್ನು ಬಿಡುಗಡೆ ಮಾಡಿ ಅವರು ಮಾತನಾಡಿದರು.

ಶಿಕ್ಷಣ ಶಿಲ್ಪಿ ಅಭಿನಂದನಾ ಗ್ರಂಥ ಸಂಶೋಧಕರಿಗೆ ಆಕರ ಗ್ರಂಥವಾಗಿದೆ. ಆದರ್ಶ ಶಿಕ್ಷಕರಾದ ನಾಗಪ್ಪ ಪೋಲೇಶಿ ಶಿಕ್ಷಕರ ಬದುಕು ಯುವ ಜನಾಂಗಕ್ಕೆ ಮಾದರಿಯಾದದು ಎಂದು ಹೇಳಿದರು.

ಮುದ್ದೇಬಿಹಾಳ ಎಸ್.ಜಿ.ವ್ಹಿ.ಸಿ ವಿದ್ಯಾ ಪ್ರಸಾರಕ ವಿಶ್ವಸ್ಥ ನಿಧಿಯ ಕಾರ್ಯದರ್ಶಿ ಅಶೋಕ ತಡಸದ ಕಾರ್ಯಕ್ರಮ ಉದ್ಘಾಟಿಸಿ, ಜಗತ್ತಿನಲ್ಲಿ ಶಿಕ್ಷಕರಿಗೆ ಕೊಡುವ ಗೌರವ ಅಪಾರವಾದದ್ದು, ಇಂಥವರ ಬದುಕಿನ ಬಗ್ಗೆ ಗ್ರಂಥ ಮಾಡಿ ಸಾಹಿತ್ಯ ಕ್ಷೇತ್ರಕ್ಕೆ ಕೊಡಮಾಡಿದ ಪ್ರಕಾಶ ನರಗುಂದ ಅವರಿಗೆ ಅಭಿನಂದಿಸುವುದಾಗಿ ತಿಳಿಸಿದರು.

ಧಾರವಾಡದ ಸಾಹಿತಿ ಸಂಗಮನಾಥ ಲೋಕಾಪುರ ಮಾತನಾಡಿ, ವಿಜಯಪುರ ಜಿಲ್ಲೆಯ ಶೈಕ್ಷಣಿಕ ಕ್ಷೇತ್ರಕ್ಕೆ ಹಲವಾರು ಮಹನೀಯರ ಕೊಡುಗೆ ಇದೆ. ಬದುಕಿನುದ್ದಕ್ಕೂ ಹಲವಾರು ಕಷ್ಟಗಳನ್ನು ಅನುಭವಿಸಿ ವಿದ್ಯಾರ್ಥಿಗಳಿಗೆ ನೈತಿಕತೆಯ ಬೋಧನೆ ಮಾಡುವುದರ ಮೂಲಕ ವಿದ್ಯಾರ್ಥಿಗಳನ್ನು ದೇಶದ ಸತ್ಪ್ರಜೆಯನ್ನಾಗಿ ರೂಪಿಸಿದ್ದಾರೆ ಎಂದರು.

ಗ್ರಂಥದ ಸಂಪಾದಕರಾದ ಎಂ.ಜಿ.ವಿ.ಸಿ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಪ್ರಕಾಶ ನರಗುಂದ ಶಿಕ್ಷಣ ಶಿಲ್ಪಿ ಕೃತಿಯ ಬಗ್ಗೆ ವಿವರಿಸಿದರು. ಇಟಗಿ ಗುರುಶಾಂತವೀರ ಶಿವಾಚಾರ್ಯರು, ತಾಲ್ಲೂಕು ಗ್ಯಾರಂಟಿ ಸಮೀತಿ ಅಧ್ಯಕ್ಷ ಶಿವಶಂಕರ ಹಿರೇಗೌಡರ, ಗ್ರಾಪಂ ಮಾಜಿ ಅಧ್ಯಕ್ಷ ಸಂಗಯ್ಯ ಹಾಲಗಂಗಾಧರಮಠ, ಆಲೂರಿನ ಗುರುಲಿಂಗಪ್ಪಗೌಡ ಹಿರೇಗೌಡರ, ಪ್ರೊ. ಎಸ್. ಎಸ್. ಹೂಗಾರ, ನಿವೃತ್ತ ಶಿಕ್ಷಕ ನಾಗಪ್ಪ ಪೊಲೇಶಿ, ಎಂ. ಜಿ. ವಿ. ಸಿ ಕಾಲೇಜಿನ ಪ್ರಾಚಾರ್ಯ ಎಸ್. ಎನ್. ಪೊಲೇಶಿ, ನಾಲತವಾಡದ ನಿವೃತ್ತ ಪ್ರಾಚಾರ್ಯ ಎಸ್. ಎನ್. ಕಂಗಳ, ಪರಶುರಾಮ ಪವಾರ, ಬಿ. ಎ. ಗೂಳಿ ಉಪಸ್ಥಿತರಿದ್ದರು.

Latest News

ತಾಯಿ-ಮಗನನ್ನು ಮಧ್ಯರಾತ್ರಿ ಊರಿಗೆ ತಲುಪಿಸಿ ಮಾನವೀಯತೆ ಮೆರೆದ ‘112’ ಪೊಲೀಸರು..!

ತಾಯಿ-ಮಗನನ್ನು ಮಧ್ಯರಾತ್ರಿ ಊರಿಗೆ ತಲುಪಿಸಿ ಮಾನವೀಯತೆ ಮೆರೆದ ‘112’ ಪೊಲೀಸರು..!

ಮುದ್ದೇಬಿಹಾಳ : ತಮ್ಮೂರಿಗೆ ಹೋಗುವ ಬಸ್ ತಪ್ಪಿಸಿಕೊಂಡಿದ್ದ ಕನ್ನಡ ಅಸ್ಪಷ್ಟವಾಗಿ ಮಾತನಾಡುವ ತಾಯಿ ಹಾಗೂ

ಎ.ಎಸ್.ಎನ್ ಕಾನೂನು ಮಾಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ

ಎ.ಎಸ್.ಎನ್ ಕಾನೂನು ಮಾಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ

ನಾಲತವಾಡ : ನವೆಂಬರ್ 1ರಂದು ಎ.ಎಸ್.ಎನ್. ಕಾನೂನು ಮಾಹಾವಿದ್ಯಾಲಯ ನಾಲತವಾಡದಲ್ಲಿ 70ನೇ ಕನ್ನಡ ರಾಜ್ಯೋತ್ಸವ

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಶೂ ಎಸೆತ ಪ್ರಕರಣ,

ಇಂಗಳಗೇರಿ ಗ್ರಾಪಂ ನೂತನ ಕಟ್ಟಡಕ್ಕೆ ಅನುದಾನ – ಶಾಸಕ ಸಿ.ಎಸ್.ನಾಡಗೌಡ

ಇಂಗಳಗೇರಿ ಗ್ರಾಪಂ ನೂತನ ಕಟ್ಟಡಕ್ಕೆ ಅನುದಾನ – ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಗ್ರಾಮ ಪಂಚಾಯಿತಿ ಚುನಾವಣೆಗಳು ಸ್ಥಳೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು ಇದರಲ್ಲಿಪಕ್ಷದ ಪಾತ್ರ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಧಾರವಾಡ ಅ.27: ಸುಮಾರು ವರ್ಷಗಳ ನಂತರ ಪ್ರಥಮ ಬಾರಿಗೆ ಜಿಲ್ಲಾ ಅಭಿವೃದ್ಧಿ ಯೋಜನೆ ರೂಪಿಸಲು ಸರಕಾರ ಅವಕಾಶ ನೀಡಿದ್ದು, ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ನಿಂದ ರಾಜ್ಯದಲ್ಲಿಯೇ ಮೊದಲನೇಯದಾಗಿ ಅಭಿವೃದ್ಧಿ ಯೋಜನಾ ವರದಿ ಕುರಿತ ಸಭೆ ಆಯೋಜಿಸಲಾಗಿದೆ. ಅಭಿವೃದ್ಧಿ ಯೋಜನಾ ವರದಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿ ಆಗಿರಬೇಕು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್ ಅವರು ಹೇಳಿದರು. ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ

ಮುದ್ದೇಬಿಹಾಳ : TAPCMS  ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು ಟಿಎಪಿಸಿಎಂಎಸ್‌ನಲ್ಲಿ ತಮ್ಮ ಹಿಡಿತ ಸಡಿಲಗೊಂಡಿಲ್ಲ ಎಂಬ ಸಂದೇಶವನ್ನು ತಮ್ಮ ವಿರೋಧಿಗಳಿಗೆ ರವಾನಿಸಿದ್ದಾರೆ. ಪಟ್ಟಣದ ಏಪಿಎಂಸಿಯಲ್ಲಿರುವ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲಾಯಿತು.ಅಧ್ಯಕ್ಷ ಸ್ಥಾನಕ್ಕೆ ಮನೋಹರ ಎಸ್.ಮೇಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಿದಾನಂದ ಎಂ.ಸೀತಿಮನಿ ಎರಡೂ ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಆರ್.ಎನ್.ಆಳೂರ ಅವಿರೋಧ