
ಮುದ್ದೇಬಿಹಾಳ : ಸಮಾಜ ವಿಘಟಿಸುವ ಶಕ್ತಿಗಳಿಗೆ ಮೊದಲ ಆದ್ಯತೆ ಇಂದು ದೊರೆಯುತ್ತಿದ್ದು ಒಂದಾಗಿ ಬಾಳುವ ಕಲ್ಪನೆಯೇ ದೂರವಾಗುತ್ತಿದೆ ಎಂದು ಶಾಸಕ ಸಿ. ಎಸ್. ನಾಡಗೌಡ ಹೇಳಿದರು.

ಪಟ್ಟಣದ ಎಪಿಎಂಸಿ ಹತ್ತಿರ ಇರುವ ರೇಣುಕಾಚಾರ್ಯರ ದೇವಸ್ಥಾನದ ಜಾಗೆಯಲ್ಲಿ ಭಾನುವಾರ ಹಮ್ಮಿಕೊಂಡಿದ್ದ ರೇಣುಕಾಚಾರ್ಯರ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಭಾರತದ ಪರಂಪರೆಯಲ್ಲಿ ಲಿಂಗಾಯತ ಸಮಾಜ ಭಿನ್ನತೆಗಳಿಂದ ಭಾರತದ ಪರಂಪರೆಯಲ್ಲಿ ಅರಾಜಕತೆಯತ್ತ ಸಾಗುತ್ತಿದ್ದೇವೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾಜಿ ಸೈನಿಕ ರಾಚಯ್ಯ ಹಿರೇಮಠ ಮಾತನಾಡಿ, ಮಕ್ಕಳಿಗೆ ಶಿಕ್ಷಣದೊಂದಿಗೆ ಸಂಸ್ಕಾರ ಕೊಡುವ ಕಾರ್ಯ ಆಗಬೇಕು ಎಂದರು.
ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಕಾಂಗ್ರೆಸ್ ಮುಖಂಡ ಶಾಂತಗೌಡ ಪಾಟೀಲ್ ನಡಹಳ್ಳಿ ಮಾತನಾಡಿದರು.
ಬಿಲ್‌ಕೆರೂರ ಬಿಲ್ವಾಶ್ರಮದ ಸಿದ್ಧಲಿಂಗ ಶಿವಾಚಾರ್ಯರು. ಹೊಸಮಠದ ಅಮರೇಶ್ವರ ದೇವರು, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಮುಖಂಡರಾದ ಸೋಮನಗೌಡ ಪಾಟೀಲ, ಜಂಗಮ ಸಮಾಜದ ತಾಲ್ಲೂಕು ಅಧ್ಯಕ್ಷ ದಾನಯ್ಯಸ್ವಾಮಿ ಹಿರೇಮಠ, ಪುರಸಭೆ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಖಾಸ್ಗತೇಶ್ವರ ಮಠದ ನೀಲಮ್ಮ ವಿರಕ್ತಮಠ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಬಸಂತಿ ಮಠ, ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕರಾದ ಸಂಗನಗೌಡ ಬಿರಾದಾರ, ವಿಜಯಲಕ್ಷ್ಮಿ ಬೂದಿಹಾಳಮಠ, ಸರ್ವೆಯರ್ ಶೈಲಶ್ರೀ ಹಿರೇಮಠ, ಮಹಿಳಾ ಘಟಕದ ಅಧ್ಯಕ್ಷೆ ಗೌರಮ್ಮ ಶಿವಯೋಗಿಮಠ, ಜಂಗಮ ಸಮಾಜದ ನೌಕರ ಸಂಘದ ಅಧ್ಯಕ್ಷ ಎಂ. ಎಸ್. ತೆಗ್ಗಿನಮಠ ಇದ್ದರು. ಶ್ರಾವಣಿ ಮಹಾಂತೇಶ ಮಠಪತಿ ರೇಣುಕಾಚಾರ್ಯ ವೇಷಧಾರಿಯಾಗಿ ಗಮನ ಸೆಳೆದಳು.