
ಮುದ್ದೇಬಿಹಾಳ : ತಾಲ್ಲೂಕಿನ ಬಿದರಕುಂದಿ ಆದರ್ಶ ವಿದ್ಯಾಲಯದ (ಆರ್.ಎಮ್.ಎಸ್.ಎ) ಶಾಲೆಗೆ 6ನೇ ತರಗತಿಗೆ ಪ್ರವೇಶ ಪರೀಕ್ಷೆ ಮಾ.23ರಂದು ನಡೆಯಲಿದ್ದು ಈಗಾಗಲೇ ಅರ್ಜಿ ಸಲ್ಲಿಸಿದ ವಿದ್ಯಾರ್ಥಿಗಳು ಪ್ರವೇಶ ಪತ್ರಗಳನ್ನು ಕೆಳಗಿನ ವೆಬ್‌ಸೈಟ್‌ನಿಂದ ಡೌನ್‌ಲೌಡ್ ಮಾಡಿಕೊಂಡು ಪರೀಕ್ಷೆಗೆ ಹಾಜರಾಗಬಹುದಾಗಿದೆ.

www.schooleducation.kar.nic.in or www.vidyavahini.karnataka.gov.in,ಹೆಚ್ಚಿನ ಮಾಹಿತಿಗಾಗಿ ಅದರ್ಶ ವಿದ್ಯಾಲಯದ ಮುಖ್ಯಗುರು ಅನೀಲಕುಮಾರ ಜೆ. ರಾಠೋಡ (9945614301), ಪರೀಕ್ಷಾ ನೋಡಲ್ ಅಧಿಕಾರಿ ಎ.ಬಿ.ಬಗಲಿ (9611510632) ಅವರನ್ನು ಸಂಪರ್ಕಿಸಬಹುದು.ಪರೀಕ್ಷೆ ಮುದ್ದೇಬಿಹಾಳದ ಎಂ.ಜಿ.ಎಂ.ಕೆ.ಆಂಗ್ಲ ಮಾಧ್ಯಮ ಶಾಲೆ, ಎಂ.ಜಿ.ವಿ.ಸಿ. ಫಸ್ಟ್ ಗ್ರೇಡ್ ಕಾಲೇಜ್, ಚಿನ್ಮಯ ಜೆಸಿ ಪ್ರೌಢಶಾಲೆ, ಅಭ್ಯುದಯ ಇಂಟರ್ನ್ಯಾಷನಲ್ ಸ್ಕೂಲ್, ಸರ್ಕಾರಿ ಪದವಿಪೂರ್ವ ಕಾಲೇಜ ಮತ್ತು ಬಿ. ಎಸ್. ಸೆಂಟ್ರಲ್ ಸ್ಕೂಲ್‌ದಲ್ಲಿ ನಡೆಯಲಿವೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬಿ. ಎಸ್. ಸಾವಳಗಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.