
ಮುದ್ದೇಬಿಹಾಳ : ಧಾರ್ಮಿಕ ಕ್ಷೇತ್ರಗಳ ಪುನರುಜ್ಜೀವನ, ಅಭಿವೃದ್ಧಿಗೆ ತಮ್ಮದೇಯಾದ ಕೊಡುಗೆಯನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮಾಡುತ್ತಿದೆ ಎಂದು ಸಾಮಾಜಿಕ ಕಾರ್ಯಕರ್ತೆ ಸಂಗೀತಾ ನಾಡಗೌಡ ಹೇಳಿದರು.
ಪಟ್ಟಣದ ವಿನಾಯಕ ನಗರದಲ್ಲಿರುವ ವಿನಾಯಕ ಹಾಗೂ ಭದ್ರಕಾಳಿ ಸಮೇತ ವೀರಭದ್ರೇಶ್ವರ ದೇವಸ್ಥಾನದ ಅಭಿವೃದ್ಧಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಚೆಕ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾ ನಿರ್ದೇಶಕ ಸಂತೋಷಕುಮಾರ, ತಾಲ್ಲೂಕು ಯೋಜನಾಧಿಕಾರಿ ನಾಗೇಶ ಎನ್. ಪಿ ಮಾತನಾಡಿ, ವೀರಭದ್ರೇಶ್ವರ, ಭದ್ರಕಾಳಿ ಹಾಗೂ ವಿನಾಯಕ ದೇವಸ್ಥಾನದ ಅಭಿವೃದ್ಧಿಗೆ ಟ್ರಸ್ಟ್ನಿಂದ ನೆರವು ನೀಡುವಂತೆ ಕೋರಲಾಗಿತ್ತು. ಅದಕ್ಕೆ ಸಂಸ್ಥೆಯ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರು ಸ್ಪಂದಿಸಿ ಆರ್ಥಿಕ ನೆರವು ಒದಗಿಸಿದ್ದಾರೆ ಎಂದರು.
ಕರ್ನಾಟಕ ಕೋ ಆಪರೇಟಿವ್ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್ ಮಾತನಾಡಿದರು. ರಾಜ್ಯ ಸರ್ಕಾರಿ ನೌಕರರ ಸಂಘದ ತಾಲ್ಲೂಕು ಅಧ್ಯಕ್ಷ ಅರವಿಂದ ಹೂಗಾರ,ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಜಿಓಸಿಸಿ ಬ್ಯಾಂಕ್ ಅಧ್ಯಕ್ಷ ಆನಂದಗೌಡ ಬಿರಾದಾರ, ಡಾ.ವೀರೇಶ ಪಾಟೀಲ, ದೇವಸ್ಥಾನ ಕಮೀಟಿ ಅಧ್ಯಕ್ಷ ಶಾಹೀಲ್ ನಾಗಠಾಣ, ಪ್ರಧಾನ ಆರ್ಚಕ ಕಾಂತು ಹೆಬ್ಬಾಳ,ಪುರಸಭೆ ಸದಸ್ಯ ಬಸಪ್ಪ ತಟ್ಟಿ, ಅನುರಾಧಾ ಪ್ಯಾಟಿಗೌಡರ, ಸದಸ್ಯರಾದ ಚೇತನ ಕಲ್ಲುಂಡಿ, ವಿನೋದ ನಾಗಠಾಣ, ಬಸವಂತರಾಯ ದೇಶಪಾಂಡೆ, ಕಿರಣ ನಾಗಠಾಣ, ಪ್ರಮೋದ ನಾಗಠಾಣ,ಗಂಗಪ್ಪ ಹೆಬ್ಬಾಳ ಮೊದಲಾದವರು ಇದ್ದರು.