SSLC Exam in Bigi Bandobast

ಬಿಗಿ ಬಂದೋಬಸ್ತ್ ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಾವ ಪರೀಕ್ಷಾ ಕೇಂದ್ರದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಗೈರು ?

ಬಿಗಿ ಬಂದೋಬಸ್ತ್ ನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಾವ ಪರೀಕ್ಷಾ ಕೇಂದ್ರದಲ್ಲಿ ಅತೀ ಹೆಚ್ಚು ವಿದ್ಯಾರ್ಥಿಗಳು ಗೈರು ?

ಮುದ್ದೇಬಿಹಾಳ : ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲೂ ವೆಬ್‌ಕಾಸ್ಟಿಂಗ್ ನಿಗಾ ವಹಿಸಿದ ಹಿನ್ನೆಲೆಯಲ್ಲಿ ಈ ಸಲದ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಬಿಗಿ ಬಂದೋಬಸ್ತ್ ನಲ್ಲಿ ಆರಂಭಗೊಂಡಿವೆ. ತಾಲ್ಲೂಕಿನ 19 ಪರೀಕ್ಷಾ ಕೇಂದ್ರಗಳಲ್ಲಿ ಪರೀಕ್ಷೆ ಸುಸೂತ್ರವಾಗಿ ಆರಂಭಗೊಂಡಿದೆ.

ತಾಳಿಕೋಟಿಯ ಎಸ್.ಕೆ. ಪಿಯು ಕಾಲೇಜಿನಲ್ಲಿ 5, ಮಿಣಜಗಿ ಕ್ರಾಸ್‌ನ ಕನಕ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 17, ಸಂಗಮೇಶ್ವರ ಪ್ರೌಢಶಾಲೆಯಲ್ಲಿ 6, ಸರ್ವಜ್ಞ ವಿದ್ಯಾಪೀಠದಲ್ಲಿ 12, ಮುದ್ದೇಬಿಹಾಳದ ವಿಬಿಸಿಯಲ್ಲಿ 20, ಅಭ್ಯುದಯ ಇಂಟರ್‌ನ್ಯಾಶನಲ್ ಶಾಲೆಯಲ್ಲಿ 39, ಜ್ಞಾನ ಭಾರತಿ ಪ್ರೌಢಶಾಲೆಯಲ್ಲಿ 14, ಬಸರಕೋಡದ ಪವಾಡ ಬಸವೇಶ್ವರ ಪ್ರೌಢಶಾಲೆಯಲ್ಲಿ 12, ಮುದ್ದೇಬಿಹಾಳದ ಚಿನ್ಮಯ ಜೆಸಿ ಶಾಲೆಯಲ್ಲಿ 15, ಇಂಗಳಗೇರಿ ಸರ್ಕಾರಿ ಪ್ರೌಢಶಾಲೆಯಲ್ಲಿ 9, ನಾಲತವಾಡದ ವೀರೇಶ್ವರ ಪಿಯು ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ 11, ಮೈಲೇಶ್ವರದ ಬ್ರಿಲಿಯಂಟ್ ಶಾಲೆಯಲ್ಲಿ 1, ನಾಗರಬೆಟ್ಟದ ಎಸ್.ಡಿ.ಕೆ ಪ್ರೌಢಶಾಲೆಯಲ್ಲಿ 4, ಕೊಡಗಾನೂರದ ಬ್ಯಾಲ್ಯಾಳ ಕ್ರಾಸ್‌ನ ಜೆಎಸ್‌ಎಸ್ ಪ್ರೌಢಶಾಲೆಯಲ್ಲಿ 15, ರಕ್ಕಸಗಿ ಕೆಪಿಎಸ್ ಶಾಲೆಯಲ್ಲಿ 17, ಬಳಬಟ್ಟಿ ಸರ್ಕಾರಿ ಪ್ರೌಢಶಾಲೆಯಲ್ಲಿ 3, ಹಿರೂರ ಭೋಗೇಶ್ವರ ಪ್ರೌಢಶಾಲೆಯಲ್ಲಿ 8, ನಾಗರಬೆಟ್ಟದ ಆಕ್ಸಫರ್ಡ್ ಪ್ರೌಢಶಾಲೆಯಲ್ಲಿ 1 ವಿದ್ಯಾರ್ಥಿಗಳು ಗೈರು ಉಳಿದಿದ್ದು ಒಟ್ಟು 6531 ವಿದ್ಯಾರ್ಥಿಗಳ ಪೈಕಿ 6302 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದಾರೆ ಎಂದು ಶಿಕ್ಷಣ ಇಲಾಖೆಯ ಮೂಲಗಳು ಮಾಹಿತಿ ನೀಡಿವೆ.

ಶುಕ್ರವಾರ ಪ್ರಥಮ ಭಾಷೆಯ ಪರೀಕ್ಷೆಗೆ ಹಾಜರಾಗಿ ಪರೀಕ್ಷೆ ಎದುರಿಸಿದ ವಿದ್ಯಾರ್ಥಿಗಳು ಖುಷಿಯಿಂದಲೇ ಪರೀಕ್ಷೆ ಬರೆದಿದ್ದಾರೆ. ಪರೀಕ್ಷೆಯ ಬಳಿಕ ವಿದ್ಯಾರ್ಥಿಗಳು ಗುಂಪು ಗುಂಪಾಗಿ ನಿಂತು ಪರೀಕ್ಷೆ ವ್ಯವಸ್ಥೆಯ ಕುರಿತು ಚರ್ಚೆ ಮಾಡಿದರು. ಪ್ರಾಮಾಣಿಕವಾಗಿ ಓದಿದ ವಿದ್ಯಾರ್ಥಿಗಳು ಪರೀಕ್ಷೆ ಒಳ್ಳೆಯ ರೀತಿಯಲ್ಲಿ ನಡೆದಿದೆ ಎಂಬ ಅಭಿಪ್ರಾಯ ವ್ಯಕ್ತಪಡಿಸಿದರೆ, ನಕಲನ್ನು ನಂಬಿದ್ದ ವಿದ್ಯಾರ್ಥಿಗಳಿಗೆ ಈ ಪರೀಕ್ಷೆ ನಿರಾಸೆಯನ್ನುಂಟು ಮಾಡಿತು ಎಂದು ಪರೀಕ್ಷಾ ಕಾರ್ಯದಲ್ಲಿ ತೊಡಗಿದ್ದ ಶಿಕ್ಷಕರೊಬ್ಬರು ತಿಳಿಸಿದರು.

Latest News

ತಾಯಿ-ಮಗನನ್ನು ಮಧ್ಯರಾತ್ರಿ ಊರಿಗೆ ತಲುಪಿಸಿ ಮಾನವೀಯತೆ ಮೆರೆದ ‘112’ ಪೊಲೀಸರು..!

ತಾಯಿ-ಮಗನನ್ನು ಮಧ್ಯರಾತ್ರಿ ಊರಿಗೆ ತಲುಪಿಸಿ ಮಾನವೀಯತೆ ಮೆರೆದ ‘112’ ಪೊಲೀಸರು..!

ಮುದ್ದೇಬಿಹಾಳ : ತಮ್ಮೂರಿಗೆ ಹೋಗುವ ಬಸ್ ತಪ್ಪಿಸಿಕೊಂಡಿದ್ದ ಕನ್ನಡ ಅಸ್ಪಷ್ಟವಾಗಿ ಮಾತನಾಡುವ ತಾಯಿ ಹಾಗೂ

ಎ.ಎಸ್.ಎನ್ ಕಾನೂನು ಮಾಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ

ಎ.ಎಸ್.ಎನ್ ಕಾನೂನು ಮಾಹಾವಿದ್ಯಾಲಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ

ನಾಲತವಾಡ : ನವೆಂಬರ್ 1ರಂದು ಎ.ಎಸ್.ಎನ್. ಕಾನೂನು ಮಾಹಾವಿದ್ಯಾಲಯ ನಾಲತವಾಡದಲ್ಲಿ 70ನೇ ಕನ್ನಡ ರಾಜ್ಯೋತ್ಸವ

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ ಬಂದ್ ಸಂಪೂರ್ಣ ಯಶಸ್ವಿ

ಮುದ್ದೇಬಿಹಾಳ : ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರಿಗೆ ಶೂ ಎಸೆತ ಪ್ರಕರಣ,

ಇಂಗಳಗೇರಿ ಗ್ರಾಪಂ ನೂತನ ಕಟ್ಟಡಕ್ಕೆ ಅನುದಾನ – ಶಾಸಕ ಸಿ.ಎಸ್.ನಾಡಗೌಡ

ಇಂಗಳಗೇರಿ ಗ್ರಾಪಂ ನೂತನ ಕಟ್ಟಡಕ್ಕೆ ಅನುದಾನ – ಶಾಸಕ ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಗ್ರಾಮ ಪಂಚಾಯಿತಿ ಚುನಾವಣೆಗಳು ಸ್ಥಳೀಯ ಮಟ್ಟದಲ್ಲಿ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿದ್ದು ಇದರಲ್ಲಿಪಕ್ಷದ ಪಾತ್ರ

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಯೋಜನಾ ವರದಿ ದಿಕ್ಸೂಚಿ ಆಗಿರಲಿ: ಸಚಿವ ಸಂತೋಷ್ ಲಾಡ್

ಧಾರವಾಡ ಅ.27: ಸುಮಾರು ವರ್ಷಗಳ ನಂತರ ಪ್ರಥಮ ಬಾರಿಗೆ ಜಿಲ್ಲಾ ಅಭಿವೃದ್ಧಿ ಯೋಜನೆ ರೂಪಿಸಲು ಸರಕಾರ ಅವಕಾಶ ನೀಡಿದ್ದು, ಧಾರವಾಡ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್‌ನಿಂದ ರಾಜ್ಯದಲ್ಲಿಯೇ ಮೊದಲನೇಯದಾಗಿ ಅಭಿವೃದ್ಧಿ ಯೋಜನಾ ವರದಿ ಕುರಿತ ಸಭೆ ಆಯೋಜಿಸಲಾಗಿದೆ. ಅಭಿವೃದ್ಧಿ ಯೋಜನಾ ವರದಿ ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ದಿಕ್ಸೂಚಿ ಆಗಿರಬೇಕು ಎಂದು ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಎಸ್‌ ಲಾಡ್ ಅವರು ಹೇಳಿದರು. ಧಾರವಾಡ ಜಿಲ್ಲಾ ಪಂಚಾಯತ ಸಭಾಂಗಣದಲ್ಲಿ

ಮುದ್ದೇಬಿಹಾಳ : TAPCMS  ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : TAPCMS ಆಡಳಿತ ಮತ್ತೆ ಮನೋಹರ ಮೇಟಿ ‘ಕೈ’ಗೆ

ಮುದ್ದೇಬಿಹಾಳ : ಇಲ್ಲಿನ ಟಿ.ಎ.ಪಿ.ಸಿ.ಎಂ.ಎಸ್ ಆಡಳಿತ ಮತ್ತೆ ಎರಡನೇ ಬಾರಿಗೆ ಅಧ್ಯಕ್ಷರಾಗಿ ಮನೋಹರ ಮೇಟಿ ಅವರು ಅವಿರೋಧವಾಗಿ ಆಯ್ಕೆಯಾಗಿದ್ದು ಟಿಎಪಿಸಿಎಂಎಸ್‌ನಲ್ಲಿ ತಮ್ಮ ಹಿಡಿತ ಸಡಿಲಗೊಂಡಿಲ್ಲ ಎಂಬ ಸಂದೇಶವನ್ನು ತಮ್ಮ ವಿರೋಧಿಗಳಿಗೆ ರವಾನಿಸಿದ್ದಾರೆ. ಪಟ್ಟಣದ ಏಪಿಎಂಸಿಯಲ್ಲಿರುವ ಸಂಘದ ಕಚೇರಿಯಲ್ಲಿ ಅಧ್ಯಕ್ಷ ಹಾಗೂ ಉಪಾಧ್ಯಕ್ಷರ ಆಯ್ಕೆಗೆ ಚುನಾವಣೆ ನಡೆಸಲಾಯಿತು.ಅಧ್ಯಕ್ಷ ಸ್ಥಾನಕ್ಕೆ ಮನೋಹರ ಎಸ್.ಮೇಟಿ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಚಿದಾನಂದ ಎಂ.ಸೀತಿಮನಿ ಎರಡೂ ಸ್ಥಾನಗಳಿಗೆ ತಲಾ ಒಬ್ಬೊಬ್ಬರೇ ನಾಮಪತ್ರ ಸಲ್ಲಿಸಿದ್ದರಿಂದ ಚುನಾವಣಾಧಿಕಾರಿ ಆರ್.ಎನ್.ಆಳೂರ ಅವಿರೋಧ