Supporters, party leaders warn: We will not stand idly by if Nadahalli tries for Tejowadhe

ಬೆಂಬಲಿಗರು, ಪಕ್ಷದ ಮುಖಂಡರ ಎಚ್ಚರಿಕೆ: ನಡಹಳ್ಳಿ ತೇಜೋವಧೆಗೆ ಯತ್ನಿಸಿದರೆ ನಾವು ಸುಮ್ಮನಿರಲ್ಲ

ಬೆಂಬಲಿಗರು, ಪಕ್ಷದ ಮುಖಂಡರ ಎಚ್ಚರಿಕೆ: ನಡಹಳ್ಳಿ ತೇಜೋವಧೆಗೆ ಯತ್ನಿಸಿದರೆ ನಾವು ಸುಮ್ಮನಿರಲ್ಲ

Ad
Ad

ಮುದ್ದೇಬಿಹಾಳ : ಬಿಜೆಪಿಯಿಂದ ಶಾಸಕ ಯತ್ನಾಳರನ್ನು ಉಚ್ಚಾಟಿಸಿರುವ ಕ್ರಮವನ್ನು ಖಂಡಿಸಿ ಕೆಲವಡೆ ಪ್ರತಿಭಟನೆ ನಡೆಸುವ ಸಂದರ್ಭದಲ್ಲಿ ಬಿಜೆಪಿ ರೈತಮೋರ್ಚಾ ರಾಜ್ಯಾಧ್ಯಕ್ಷ, ಮಾಜಿ ಶಾಸಕ ಎ. ಎಸ್. ಪಾಟೀಲ್ ನಡಹಳ್ಳಿ ಅವರ ಹೆಸರಿಗೆ ಕಳಂಕ ತರಲು ಯತ್ನಿಸಿದರೆ ನಾವು ಸುಮ್ಮನಿರುವುದಿಲ್ಲ ಎಂದು ಬಿಜೆಪಿ ಮುಖಂಡರು ಹೇಳಿದರು.

Ad
Ad

ಪಟ್ಟಣದ ಬಿಜೆಪಿ ಮಂಡಲ ಕಚೇರಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ಮಲ್ಲಿಕಾರ್ಜುನ ತಂಗಡಗಿ, ಯತ್ನಾಳರ ಪರವಾಗಿ ಅವರ ಅಭಿಮಾನಿಗಳು ಪ್ರತಿಭಟನೆ ನಡೆಸುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಅದರ ನೆಪದಲ್ಲಿ ನಡಹಳ್ಳಿಯವರ ಹೆಸರನ್ನು ಮಧ್ಯೆ ಎಳೆದು ತಂದು ಅವಾಚ್ಯವಾಗಿ ಮಾತನಾಡುವುದು, ಬಿಜೆಪಿ ರಾಜ್ಯ ನಾಯಕರಾದ ಯಡಿಯೂರಪ್ಪ, ವಿಜಯೇಂದ್ರ ಹಾಗೂ ನಡಹಳ್ಳಿಯವರ ಚಿತ್ರಗಳಿಗೆ ಅಸಭ್ಯ ರೀತಿಯಲ್ಲಿ ವ್ಯಕ್ತಪಡಿಸುವ ಮೂಲಕ ತೇಜೋವಧೆಗೆ ಯತ್ನಿಸುತ್ತಿದ್ದಾರೆ. ಇದನ್ನು ಖಂಡಿಸುವುದಾಗಿ ಹೇಳಿದರು.

ಬಿಜೆಪಿ ಮುಖಂಡ ಸಿದ್ಧರಾಜ ಹೊಳಿ ಮಾತನಾಡಿ, ಈಚೇಗೆ ಮುದ್ದೇಬಿಹಾಳದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿರುವವರಲ್ಲಿ ಕಾಂಗ್ರೆಸ್ ಮುಖಂಡರೇ ಹೆಚ್ಚಿದ್ದು ಬಿಜೆಪಿಗೆ ಯತ್ನಾಳರನ್ನು ಮರು ಸೇರ್ಪಡೆ ಮಾಡಿಕೊಳ್ಳಿ ಎನ್ನುವ ಬದಲು ಕಾಂಗ್ರೆಸ್‌ಗೆ ಅವರನ್ನು ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಪ್ರತಿಭಟನೆ ನಡೆಸಿ ಎಂದು ಪಂಚಮಸಾಲಿ ಸಮಾಜದ ಕಾಂಗ್ರೆಸ್ ಮುಖಂಡರಿಗೆ ಸಲಹೆ ಮಾಡಿದರು.

ಮಂಡಲ ಅಧ್ಯಕ್ಷ ಜಗದೀಶ ಪಂಪಣ್ಣವರ ಮಾತನಾಡಿ, ಪ್ರತಿಭಟನೆಯ ನೆಪದಲ್ಲಿ ಯಾವುದೇ ನಾಯಕರ ಬ್ಯಾನರ, ಭಾವಚಿತ್ರಗಳಿಗೆ ಅವಮಾನಕರ ರೀತಿಯಲ್ಲಿ ಚಿತ್ರಿಸುವುದು, ಸುಡುವುದು, ನಡೆದುಕೊಳ್ಳುವುದಕ್ಕೆ ಕಾನೂನು ರೀತಿಯಲ್ಲಿ ಅಪರಾಧವಿದ್ದು ಬಿಜೆಪಿ ಕಾನೂನು ಘಟಕ ಜಿಲ್ಲೆಯಲ್ಲಿ ನಡೆದಿರುವ ಪ್ರತಿಭಟನೆಗಳ ಮೇಲೆ ನಿಗಾ ಇರಿಸಿದೆ. ಬಿಜೆಪಿ ನಾಯಕರ ಚಿತ್ರಗಳಿಗೆ ಅವಮಾನಕರವಾಗಿ ಪ್ರದರ್ಶಿಸಿದ್ದಲ್ಲಿ ಅಂತವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ. ಬೆಂಗಳೂರು ಕೋರ್ಟ್ನಲ್ಲಿ ಕೇಸು ವಿಚಾರಣೆ ನಡೆಯುತ್ತದೆ. ಇಂತಹ ಘಟನೆಗಳಿಗೆ ಯತ್ನಾಳರ ಅಭಿಮಾನಿಗಳು, ಪ್ರತಿಭಟನೆ ನಡೆಸುವವವರು ಆಸ್ಪದ ನೀಡಬಾರದು ಕಿವಿಮಾತು ಹೇಳಿದರು.

ಮುಖಂಡ ಹರೀಶ ನಾಟೀಕಾರ ಮಾತನಾಡಿದರು. ಸುದ್ದಿಗೋಷ್ಠಿಯಲ್ಲಿ ಯುವ ಘಟಕದ ಅಧ್ಯಕ್ಷ ಗಿರೀಶಗೌಡ ಪಾಟೀಲ್, ಪ್ರೇಮಸಿಂಗ ಚವ್ಹಾಣ, ಪರಶುರಾಮ ನಾಲತವಾಡ, ಗೌರಮ್ಮ ಹುನಗುಂದ,ಲಕ್ಷ್ಮಣ ಬಿಜ್ಜೂರ, ಶಂಕರಗೌಡ ಶಿವಣಗಿ, ಸಂಜೀವ ಬಾಗೇವಾಡಿ, ಸಿದ್ದು ಹಿರೇಮಠ, ನಿಖಿಲ್ ಮಲಗಲದಿನ್ನಿ, ಗುರುಪಾದ ವಡ್ಡರ ಮೊದಲಾದವರು ಇದ್ದರು.

2013ರಲ್ಲಿ ನಿಮ್ಮದೇ ಸಮಾಜದ ನಾಯಕಿ ವಿಮಲಾಬಾಯಿ ದೇಶಮುಖ ಅವರಿಗೆ ಬಿಜೆಪಿ ಟಿಕೇಟ್ ಕೊಡದೇ ಅನ್ಯಾಯ ಮಾಡಿದಾಗ ಯಾಕೆ ಪ್ರತಿಭಟನೆ ನಡೆಸಲಿಲ್ಲ. ಈಚೇಗೆ ಬೆಳಗಾವಿಯಲ್ಲಿ ನಿಮ್ಮ ಸಮಾಜದ ಸ್ವಾಮೀಜಿಗಳು, ಹೋರಾಟಗಾರರು, ಸಮಾಜದವರ ಮೇಲೆ ಕಾಂಗ್ರೆಸ್ ಸರ್ಕಾರ ಲಾಠಿ ಚಾರ್ಜ್ ಮಾಡಿದ್ದಾಗ ಯಾಕೆ ಪ್ರತಿಭಟನೆ ನಡೆಸಲಿಲ್ಲ. ಯತ್ನಾಳ ಅವರು ಈ ಹಿಂದೆ ದಲಿತ ಮುಖಂಡರನ್ನು ಪೇಮೆಂಟ್ ಗಿರಾಕಿಗಳು ಎಂದು ಜರಿದಿದ್ದರು. ಅವರು ಮುಂದೊಂದು ದಿನ ಸಿಎಂ ಆಗುತ್ತಾರೆ ಎಂದು ಕನಸು ಕಂಡಿದ್ದೇವು. ಆದರೆ ಅವರು ತಮ್ಮ ಮಾತುಗಳಿಂದಲೇ ಎಲ್ಲವನ್ನೂ ಹಾಳು ಮಾಡಿಕೊಂಡಿದ್ದಾರೆ. ಪಕ್ಷದ ವಿಚಾರವನ್ನು ಸಮಾಜಕ್ಕೆ ಥಳಕು ಹಾಕುವುದನ್ನು ಕೆಲವು ಮುಖಂಡರು ನಿಲ್ಲಿಸಬೇಕು. ತಾಳಿಕೋಟೆಯಲ್ಲಿ ಅಭಿಮಾನ ಯಾತ್ರೆ ನಡೆಸಿ ಬಿಜೆಪಿ ನಾಯಕರ ಚಿತ್ರಗಳಿಗೆ ಕ್ಷೀರಾಭಿಷೇಕ ಮಾಡುತ್ತೇವೆ.

Latest News

ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆಗೆ ಅರ್ಜಿ ಆಹ್ವಾನ

ಕಾರ್ಮಿಕರಿಗೆ ಟೂಲ್ ಕಿಟ್ ವಿತರಣೆಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಕಾರ್ಮಿಕ ಇಲಾಖೆ, ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ

ಯತ್ನಾಳ ಉಚ್ಚಾಟನೆಗೆ ಆಕ್ರೋಶ: ಯತ್ನಾಳರಿಗಾಗಿ ಪ್ರಾಣ ಕೊಡಲು ಸಿದ್ಧ- ದೇಸಾಯಿ

ಯತ್ನಾಳ ಉಚ್ಚಾಟನೆಗೆ ಆಕ್ರೋಶ: ಯತ್ನಾಳರಿಗಾಗಿ ಪ್ರಾಣ ಕೊಡಲು ಸಿದ್ಧ- ದೇಸಾಯಿ

ಮುದ್ದೇಬಿಹಾಳ : ಬಸನಗೌಡ ಪಾಟೀಲ ಯತ್ನಾಳರು ಯಾವ ಪಕ್ಷದಲ್ಲಿರುತ್ತಾರೆಯೋ ಸಾಯುವವರಿಗೂ ಅವರ ಜೊತೆಗೆ ಇದ್ದು

ಭಾವಚಿತ್ರಗಳಿಗೆ ಅಪಮಾನ ತಡೆಗಟ್ಟಲು ಪೊಲೀಸರಿಗೆ ಬಿಜೆಪಿ ಪತ್ರ

ಭಾವಚಿತ್ರಗಳಿಗೆ ಅಪಮಾನ ತಡೆಗಟ್ಟಲು ಪೊಲೀಸರಿಗೆ ಬಿಜೆಪಿ ಪತ್ರ

ಯತ್ನಾಳ ಆಪ್ತ, ಜಿಪಂ ಮಾಜಿ ಉಪಾಧ್ಯಕ್ಷ ದೇಸಾಯಿ ವಿರುದ್ಧ ಕ್ರಮಕ್ಕೆ ಆಗ್ರಹ ಮುದ್ದೇಬಿಹಾಳ :

ರೇವಣಸಿದ್ದಪ್ಪಗೆ ಟ್ಯಾಲೆಂಟ್ ಅವಾರ್ಡ್ ಪ್ರಶಸ್ತಿಶಿಕ್ಷಣದೊಂದಿಗೆ ಸಂಸ್ಕಾರವೂ ಹೆಚ್ಚಲಿ- ಅಮರೇಶ್ವರ ಸ್ವಾಮೀಜಿ

ರೇವಣಸಿದ್ದಪ್ಪಗೆ ಟ್ಯಾಲೆಂಟ್ ಅವಾರ್ಡ್ ಪ್ರಶಸ್ತಿಶಿಕ್ಷಣದೊಂದಿಗೆ ಸಂಸ್ಕಾರವೂ ಹೆಚ್ಚಲಿ- ಅಮರೇಶ್ವರ ಸ್ವಾಮೀಜಿ

ಮುದ್ದೇಬಿಹಾಳ : ಮೊದಲು ಸಂಸ್ಕಾರ ಹೆಚ್ಚಾಗಿತ್ತು,ಶಿಕ್ಷಣ ಕಡಿಮೆ ಇತ್ತು. ಆದರೆ ಇಂದು ಶಿಕ್ಷಣ ಹೆಚ್ಚಿದಂತೆ

ಯತ್ನಾಳ ಉಚ್ಚಾಟನೆ ವಾಪಸಾತಿಗೆ ಪಂಚಮಸಾಲಿಗರ ಆಗ್ರಹ

ಯತ್ನಾಳ ಉಚ್ಚಾಟನೆ ವಾಪಸಾತಿಗೆ ಪಂಚಮಸಾಲಿಗರ ಆಗ್ರಹ

ಮುದ್ದೇಬಿಹಾಳ : ಬಿಜೆಪಿಯಿಂದ ಆರು ವರ್ಷಗಳ ಕಾಲ ಉಚ್ಚಾಟನೆಗೊಳಗಾಗಿರುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರನ್ನು ಗೌರವಯುತವಾಗಿ ಮರಳಿ ಬಿಜೆಪಿಗೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ಪಂಚಮಸಾಲಿ ಸಮಾಜದ ಮುಖಂಡರು ಇಂದಿಲ್ಲಿ ಆಗ್ರಹಿಸಿದರು. ಪಟ್ಟಣದ ಏಪಿಎಂಸಿಯಲ್ಲಿರುವ ಬಸಲಿಂಗಪ್ಪ ರಕ್ಕಸಗಿ ಅವರ ಅಡತಿ ಅಂಗಡಿಯಲ್ಲಿ ಗುರುವಾರ ಪಂಚಮಸಾಲಿ ಸಮಾಜದ ವತಿಯಿಂದ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಾಜದ ಮುಖಂಡರಾದ ಶಿವಶಂಕರಗೌಡ ಹಿರೇಗೌಡರ, ಸಮಾಜದ ತಾಲ್ಲೂಕು ಅಧ್ಯಕ್ಷ ಅಮರೇಶ ಗೂಳಿ, ಕಾಮರಾಜ ಬಿರಾದಾರ ಮೊದಲಾದವರು,

ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆ:ಏ.5 ರಂದು 172 ಮೆಡಿಕಲ್ ವಿದ್ಯಾರ್ಥಿಗಳ ಸನ್ಮಾನ

ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಸ್ಪರ್ಧೆ:ಏ.5 ರಂದು 172 ಮೆಡಿಕಲ್ ವಿದ್ಯಾರ್ಥಿಗಳ ಸನ್ಮಾನ

ಮುದ್ದೇಬಿಹಾಳ : ತಾಲ್ಲೂಕಿನ ನಾಗರಬೆಟ್ಟದ ಆಕ್ಸಫರ್ಡ್ ಪಾಟೀಲ್ಸ್ ಪಿಯು ಸೈನ್ಸ್ ಕಾಲೇಜಿನಲ್ಲಿ ಏ.5 ರಂದು ಜೀನಿಯಸ್ ಸ್ಟೂಡೆಂಟ್ ಅವಾರ್ಡ್ ಪರೀಕ್ಷೆ-2025 ನ್ನು ಹಮ್ಮಿಕೊಳ್ಳಲಾಗಿದ್ದು ಆಯ್ಕೆಯಾದ ವಿದ್ಯಾರ್ಥಿಗಳಿಗೆ ನಗದು ಬಹುಮಾನ ನೀಡಲಾಗುತ್ತದೆ ಎಂದು ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಹೇಳಿದರು. ಪಟ್ಟಣದಲ್ಲಿ ಆಕ್ಸಫರ್ಡ್ ಪಾಟೀಲ್ಸ್ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಅಮಿತಗೌಡ ಪಾಟೀಲ ಗುರುವಾರ ಸುದ್ದಿಗೋಷ್ಠಿಯಲ್ಲಿ ಪರೀಕ್ಷೆಯ ವಿವರಗಳನ್ನು ಅವರು ನೀಡಿದರು. ಸಂಸ್ಥೆಯ ಚೇರಮನ್ ಎಂ. ಎಸ್. ಪಾಟೀಲ್ ಅವರ ಮಾರ್ಗದರ್ಶನದಲ್ಲಿ ಈ