
ತಾಳಿಕೋಟೆ: ಕೇಂದ್ರ ಮಾಜಿ ಸಚಿವ ವಿಜಯಪುರ ನಗರದ ಹಾಲಿ ಶಾಸಕ ಬಸನಗೌಡ ಪಾಟೀಲ(ಯತ್ನಾಳ) ಅವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸಿರುವದನ್ನು ಖಂಡಿಸಿ ಮಿಣಜಗಿ ಗ್ರಾಮದ ಹಿಂದೂಪರ ಸಂಘಟಿಕರು ಗ್ರಾಮದಲ್ಲಿ ಬೃಹತ್ ಪ್ರತಿಭಟನೆ ನಡೆಸಿದರಲ್ಲದೇ ಬಿ.ಎಸ್.ಯಡಿಯೂರಪ್ಪ, ವಿಜೇಂದ್ರ ಯಡಿಯೂರಪ್ಪ ಹಾಗೂ ಮಾಜಿ ಶಾಸಕ ಎ.ಎಸ್.ಪಾಟೀಲ(ನಡಹಳ್ಳಿ) ಅವರ ಭಾವಚಿತ್ರಕ್ಕೆ ಚಪ್ಪಲಿ ಹಾರ ಹಾಕುವದರೊಂದಿಗೆ ಗ್ರಾಮದಲ್ಲಿ ಮೆರವಣಿಗೆ ನಡೆಸಿ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.

ಮಿಣಜಗಿ ಗ್ರಾಮದಲ್ಲಿ ಬೆಳಿಗ್ಗೆಯಿಂದಲೇ ಎಲ್ಲ ಅಂಗಡಿ ಮುಗ್ಗಟ್ಟುಗಳನ್ನು ಸ್ವಯಂ ಪ್ರೇರಿತವಾಗಿ ಬಂದ್ ಮಾಡುವದರೊಂದಿಗೆ ಪ್ರತಿಭಟನಾ ಮೇರವಣಿಗೆಗೆ ಬೆಂಬಲಿಸಿದ ಸಾವಿರಾರು ಜನ ಗ್ರಾಮಸ್ಥರರು ಸುಮಾರು ೬ ಗಂಟೆ ಕಾಲ ರಾಜ್ಯ ಹೆದ್ದಾರಿಯಲ್ಲಿ ಪ್ರತಿಭಟನೆ ನಡೆಸಿದರಲ್ಲದೇ ಬಸನಗೌಡ ಪಾಟೀಲ ಯತ್ನಾಳ ಅವರನ್ನು ಬಿಜೆಪಿ ಪಕ್ಷಕ್ಕೆ ಗೌರವವಿತವಾಗಿ ಮರು ಸೇರ್ಪಡೆ ಮಾಡಿಕೊಳ್ಳಬೇಕು ಇಲ್ಲದಿದ್ದರೆ ಹಿಂದೂ ಸಮಾಜ ಬಿಜೆಪಿ ಪಕ್ಷದಿಂದ ಸಂಪೂರ್ಣ ಹಿಂದಕ್ಕೆ ಸರಿಯಲಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು ಗ್ರಾಮದ ಸುಮಾರು ಹತ್ತಾರು ಕಡೆಗಳನ್ನು ಯಡಿಯೂರಪ್ಪನವರ ಹಾಗೂ ಮಾಜಿ ಶಾಸಕ ನಡಹಳ್ಳಿ ಅವರ ಭಾವಚಿತ್ರಕ್ಕೆ ಬೆಂಕಿ ಹಚ್ಚಿ ಆಕ್ರೋಶ ಹೊರ ಹಾಕಿದರು.
ಮಿಣಜಗಿ ಗ್ರಾಮದ ದ್ವಾರ ಭಾಗಿಲಿನಿಂದ ಪ್ರಾರಂಭಗೊಂಡ ಬೃಹತ್ ಪ್ರತಿಭಟನಾ ಮೇರವಣಿಗೆಯೂ ತಾಳಿಕೋಟೆ ರಸ್ತೆಯ ತೆರಳಿ ಮರಳಿ ಸಂತ ಸೇವಾಲಾ ವೃತ್ತದವರೆಗೆ ಹೋಗಿ ಮರಳಿ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ಗಂಟೆಕಾಲ ರಸ್ತೆ ತಡೆ ನಡೆಸಿ ನಂತರ ಭಹಿರಂಗ ಸಭೆಯಾಗಿ ಮಾರ್ಪಟ್ಟಿತು.
ಈ ಬೃಹತ್ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಭುಗೌಡ ದೇಸಾಯಿ ಅವರು ಮಾತನಾಡಿ ಬಸನಗೌಡ ಪಾಟೀಲ(ಯತ್ನಾಳ) ಅವರು ಉತ್ತರ ಕರ್ನಾಟಕ ಭಾಗದಲ್ಲಿ ಬಿಜೆಪಿ ಪಕ್ಷವನ್ನು ಗಟ್ಟಿಯಾಗಿ ಕಟ್ಟಿ ನೆಲೆ ನಿಲ್ಲಿಸಿದ್ದಾರೆ. ಸದ್ಯ ಇಡೀ ಕರ್ನಾಟಕದ ತುಂಬೆಲ್ಲಾ ಪಕ್ಷ ಸಂಘಟನೆ ಮಾಡುತ್ತಾ ಸಾಗಿದ್ದರು ಪಕ್ಷಕ್ಕೆ ಮುಳ್ಳವಾಗಿ ಪರಿಣಮಿಸುವದರೊಂದಿಗೆ ಅಪ್ಪ ಮಕ್ಕಳು ಇಬ್ಬರೂ ಕೂಡಿ ಬಿಜೆಪಿ ಪಕ್ಷವನ್ನು ಮೂಲಿ ಗುಂಪು ಮಾಡಲು ಹೋರಟಿದ್ದಾರೆ. ಅವರ ವಿರುದ್ದ ದ್ವನಿ ಎತ್ತಿದ್ದಾರೆ. ಇದನ್ನು ಪಕ್ಷದ ಹೈಕಮಾಂಡನವರು ನೋಡಬೇಕಿತ್ತು. ಆದರೆ ಯಾರದೋ ಮಾತಿಗೆ ಯತ್ನಾಳ ಅವರನ್ನು ಉಚ್ಚಾಟನೆ ಮಾಡಿರುವದು ಸರಿಯಲ್ಲಾ. ಕೂಡಲೇ ಅವರನ್ನು ಬಿಜೆಪಿ ಪಕ್ಷಕ್ಕೆ ಗೌರವಿತವಾಗಿ ಸೇರ್ಪಡೆ ಮಾಡಿಕೊಳ್ಳಬೇಕೆಂದು ಒತ್ತಾಯಿಸಿದರು.
ಮಾಜಿ ಶಾಸಕ ನಡಹಳ್ಳಿ ಅವರು ತೊಗಲಿನ ನಾಲಿಗೆ ಇದೆ ಎಂದು ಯತ್ನಾಳ ಅವರ ಬಗ್ಗೆ ಬಹಳ ಹಗುರವಾಗಿ ಮಾತನಾಡಿದ್ದಾರೆ. ಅವರಿಗೆ ಏಚ್ಚರಿಕೆಯನ್ನು ಕೊಡುತ್ತೇನೆ. ಯತ್ನಾಳ ಅವರು ಕರ್ನಾಟಕದ ಹಿಂದೂ ಹುಲಿ ಎಂದು ಜನರೇ ಬಿರುದುಕೊಟ್ಟಿದ್ದಾಗಿದೆ. ಇನ್ನ ನೀನು ಯಾವ ಲೆಕ್ಕ ಇದೇ ಮುದ್ದೇಬಿಹಾಳದಲ್ಲಿಯೇ 1 ಲಕ್ಷ ಜನರನ್ನು ಸೇರಿಸಿ ಬೃಹತ್ ಹೋರಾಟ ಮಾಡಿ ತೋರಿಸುತ್ತೇವೆ ಬೇಕಿದ್ದರೆ ಜನರ ಲೆಕ್ಕ ಹಾಕಿಕೊಂಡು ಹೋಗಲಿ ಎಂದು ಗುಡುಗಿದರು. ನಡಹಳ್ಳಿ ಅವರಿಗೆ ಅಳಗಾಲ ಬಂದಿದೆ ಹೀಗಾಗಿ ಯತ್ನಾಳ ಅವರ ಹಗುರವಾಗಿ ಮಾತನಾಡುತ್ತಿದ್ದಾರೆ. ಇದರ ಪರಿಣಾಮ ಒಮ್ಮೇ ಈಗಾಗಲೇ ಚುನಾವಣೆಯಲ್ಲಿ ಸೋಲಿಸಿ ತೋರಿಸಿದ್ದೇವೆ ಇನ್ನೊಮ್ಮೇ ಮಾಡಿ ತೋರಿಸುತ್ತೇವೆಂದು ಏಚ್ಚರಿಸಿದರು.