ಗೊಂದಲದ ಗೂಡಾದ ಮಲಗಲದಿನ್ನಿ ವಾರ್ಡ ಸಭೆ.

ಗೊಂದಲದ ಗೂಡಾದ ಮಲಗಲದಿನ್ನಿ ವಾರ್ಡ ಸಭೆ.


ನಾಲತವಾಡ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ, ಹದಗೆಟ್ಟ ರಸ್ತೆಗಳಲ್ಲಿ ನಿತ್ಯ ಗಲೀಜು ನೀರು ಹರಿದು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ, ರಾತ್ರಿ ನಿದ್ರೆಗೆಡುವಂತಾಗಿದೆ, ಚರಂಡಿಗಳ ಸ್ವಚ್ಚತೆಯಿಲ್ಲ, ಕಪ್ಪೆ ಜಂಡಿನ ನೀರಲ್ಲೇ ಮಹಿಳೆಯರು ಬಟ್ಟೆ ತೊಳೆಯುತ್ತಿದ್ದಾರೆ ಮೊದಲು ಸ್ವಚ್ಚತೆಗೆ ಆದ್ಯತೆ ಕೊಡಿ ಎಂದ ನಾಗರಬೆಟ್ಟ ಗ್ರಾ.ಪಂ ವ್ಯಾಪ್ತಿಯ ಮಲಗಲದಿನ್ನಿ ಗ್ರಾಮದ ವಾರ್ಡ ಸಭೆಯಲ್ಲಿ ಸೇರಿದ್ದ ಸಾರ್ವಜನೀಕರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು.

ಮಲಗಲದಿನ್ನಿ ಸಭೆಯಲ್ಲಿ ಪಿಡಿಓ ಮತ್ತು ಸಾರ್ವಜನೀಕರೊಂದಿಗೆ ನಡೆದ ವಾದ ವಿವಾದ.
ನರೇಗಾದಡಿ ಕ್ರೀಯಾ ಯೋಜನೆಯಲ್ಲಿ ನಾನಾ ಕಾಮಗಾರಿ ಮತ್ತು ರೈತರಿಗೆ ಸಂಭAದಿಸಿದ ಜಮೀನುಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳುವ ನಿಟ್ಟಿನಲ್ಲಿ ಕರೆದಿದ್ದ ಸಭೆಯಲ್ಲಿ ರೊಚ್ಚಿಗೆದ್ದ ಮಹಿಳೆಯರು ಸಮೇತ ಗ್ರಾಮದಲ್ಲಿ ನಿಜವಾದ ಬಡವರಿಗೆ ಮನೆಗಳಿಲ್ಲ, ಇದ್ದವರಿಗೇ ಮನೆ ಕೊಟ್ಟಿದ್ದೀರಿ, ರಸ್ತೆಗಳ ಹೆಸರಲ್ಲಿ ಮೇಲಿಂದ ಮೇಲೆ ಬಿಲ್ ತಗೆಯಲಾಗಿದೆ ಹಿಂದಿನ ವರ್ಷ ಹಲವು ಕಾಮಗಾರಿಗೆ ರೈತರು ಅರ್ಜಿ ಸಲ್ಲಿಸಿದ್ದಾರೆ ಅವುಗಳನ್ನು ತಗೆದುಹಾಕಲಾಗಿದೆ ಮೊದಲು ಉತ್ತರ ನೀಡಿ ಎಂದು ಪಟ್ಟು ಹಿಡಿದರು.
ದರ್ಶನ: ಗ್ರಾಮದ ಅಂಗನವಾಡಿ ಕೇಂದ್ರದ ಸುತ್ತಲೂ ಅನೈರ್ಮಲ್ಯವಿದೆ, ನಿತ್ಯ ಮಕ್ಕಳು ಕಲಿಯಲು ಹಿಂಜೆರೆಯುವAತಾಗಿದೆ,ಚರAಡಿ ನೀರು ರಸ್ತೆಯಲ್ಲೇ ಹರಿದು ಮನೆಯೊಳಗೆ ನುಂಗುತ್ತಿದೆ, ಕೆಸರು ಗದ್ದೆಯಂತಾದ ಗ್ರಾಮದಲ್ಲಿ ವಾಸ ಮಾಡುತ್ತಿದ್ದು ಈವರೆಗೂ ನಮ್ಮ ಸಂಕಷ್ಟ ಯಾರೂ ಆಲಿಸಿಲ್ಲ ಎಂದು ಅಳಲು ತೋಡಿಕೊಂಡರು.
ಭರವಸೆ: ಗ್ರಾಮದ ಹಲವು ನಿವಾಸಿಗಳು ಹೊಸದಾಗಿ ಮನೆ ನಿರ್ಮಿಸಿಕೊಂಡಿದ್ದರು ರಸ್ತೆಗಳ ನಿರ್ಮಾಣವಾಗಿಲ್ಲ ಎಂದ ಸ್ಥಳಕ್ಕೆ ಪರಿಶೀಲನೆ ನಡೆಸಿದ ಗ್ರಾ.ಪಂ ಅಧ್ಯಕ್ಷರಾದ ಸಿದ್ರಾಮಪ್ಪ ಮೇಟಿ, ಉಪಾಧ್ಯಕ್ಷರು ಹಾಗೂ ಪಿಡಿಓ ಅವರು ತಕ್ಷಣವೇ ಈ ವರ್ಷ ರಸ್ತೆಗಳ ನಿರ್ಮಾಣಕ್ಕೆ ಕ್ರೀಯಾ ಯೋಜನೆ ಹಾಕಿಕೊಳ್ಳುತ್ತೇವೆ ಎಂದು ಭರವಸೆ ನಿಡಿದರು.
ಈ ವೇಳೆ ಪಿಡಿಓ ರಾಜು ನಾರಾಯಣ, ಅಧ್ಯಕ್ಷರಾದ ಸಿದ್ದರಾಮಪ್ಪ ಮೇಟಿ, ಉಪಾದ್ಯಕ್ಷರಾದ ಪ್ರೇಮಾ ಚಲವಾದಿ, ಪರಮವ್ವ ಪಾಟೀಲ, ಕಾರ್ಯದರ್ಶಿ ಅಯ್ಯಪ್ಪ ಮಲಗಲದಿನ್ನಿ ಸೇರಿದಂತೆ ಗ್ರಾಮಸ್ಥರಿದ್ದರು.

ವರದಿ: ಶಿವು ರಾಠೋಡ

Latest News

ಜಯ ಕರ್ನಾಟಕ ಸಂಘಟನೆಗೆ ಸಿಂಧೆ ನೇಮಕ

ಜಯ ಕರ್ನಾಟಕ ಸಂಘಟನೆಗೆ ಸಿಂಧೆ ನೇಮಕ

ಮುದ್ದೇಬಿಹಾಳ : ಪಟ್ಟಣದ ನಿವಾಸಿ ಪರಶುರಾಮ ಸಿಂಧೆ ಅವರನ್ನು ಜಯ ಕರ್ನಾಟಕ ಸಂಘಟನೆಯ ವಿಜಯಪುರ

ಹುಲುಸಾದ ಪೈರು: ಸಂಭ್ರಮದ ಚರಗ ಚೆಲ್ಲಿದ ರೈತರು

ಹುಲುಸಾದ ಪೈರು: ಸಂಭ್ರಮದ ಚರಗ ಚೆಲ್ಲಿದ ರೈತರು

ಮುದ್ದೇಬಿಹಾಳ : ಎಳ್ಳ ಅಮವಾಸ್ಯೆಯ ನಿಮಿತ್ಯ ಶುಕ್ರವಾರ ತಾಲ್ಲೂಕಿನೆಲ್ಲೆಡೆ ರೈತರು ಸಂಭ್ರಮದಿAದ ಚರಗ ಚೆಲ್ಲಿದರು.

ಗೊಂದಲದ ಗೂಡಾದ ಮಲಗಲದಿನ್ನಿ ವಾರ್ಡ ಸಭೆ.

ನಾಲತವಾಡ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ, ಹದಗೆಟ್ಟ ರಸ್ತೆಗಳಲ್ಲಿ ನಿತ್ಯ ಗಲೀಜು ನೀರು ಹರಿದು

ನನ್ನ ಹಕ್ಕುಬಿಟ್ಟುಕೊಡಲು ಸಿದ್ದನಿದ್ದೇನೆ, ಆರೋಪದ ಚರ್ಚೆಗೆ ಸಿದ್ಧ: ಕೃಷ್ಣ ಬೈರೇಗೌಡರ ಸವಾಲ್..!

ಬೆಳಗಾವಿ ಡಿಸೆಂಬರ್ 18: ಸದನದ ಸದಸ್ಯನಾಗಿ ನನ್ನ ಹಕ್ಕನ್ನು ಬಿಟ್ಟುಕೊಡಲು ಸಿದ್ದನಿದ್ದೇನೆ. ನನ್ನ ಬಗ್ಗೆ

17.5 ಕೋಟಿ ರೂ. ವಂಚನೆ ಪ್ರಕರಣ: ಸಿಎಂ ಸಿದ್ದರಾಮಯ್ಯ OSD ಪುತ್ರ ಸೇರಿ ಮೂವರ ವಿರುದ್ಧ NRI ದೂರು!

17.5 ಕೋಟಿ ರೂ. ವಂಚನೆ ಪ್ರಕರಣ: ಸಿಎಂ ಸಿದ್ದರಾಮಯ್ಯ OSD ಪುತ್ರ ಸೇರಿ ಮೂವರ ವಿರುದ್ಧ NRI ದೂರು!

​ಬೆಂಗಳೂರು: ​ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಶೇಷ ಕರ್ತವ್ಯಾಧಿಕಾರಿ (OSD) ವೆಂಕಟೇಶಯ್ಯ ಅವರ ಪುತ್ರ ರಜತ್ ವೆಂಕಟೇಶ್ ಅವರು ₹17.5 ಕೋಟಿ ಮೌಲ್ಯದ ವಂಚನೆ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಅನಿವಾಸಿ ಭಾರತೀಯರೊಬ್ಬರು (NRI) ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ಘಟನೆಯು ಮುಖ್ಯಮಂತ್ರಿ ಕಚೇರಿಯನ್ನೂ ಸಾರ್ವಜನಿಕ ಚರ್ಚೆಗೆ ಗ್ರಾಸವಾಗುವಂತೆ ಮಾಡಿದೆ. ಪ್ರಕರಣದ ವಿವರ: ​ಆರೋಪಿಗಳು: ರಜತ್ ವೆಂಕಟೇಶ್, ಉದ್ಯಮಿಗಳಾದ ಸ್ನೇಹಾ ರಾಕೇಶ್ ಮತ್ತು ರಾಬಿನ್

​🌅 ಶುಭೋದಯದ ಪದ್ಯ

​🌅 ಶುಭೋದಯದ ಪದ್ಯ

​ಹೊಸ ಆಸೆಯ ಹೊತ್ತು ಸೂರ್ಯ ಮೂಡಿದ,ಹೊಸ ಕನಸಿನ ಬುತ್ತಿ ಹಕ್ಕಿ ಹಾಡಿದ.ಮಬ್ಬು ಮರೆತು, ಬೆಳಕು ಅರಳುತಿದೆ,ಹೊಸ ದಿನ ನಿಮಗಾಗಿ ಕಾಯುತಿದೆ.​ಮನಸಿನಲಿ ನೆಮ್ಮದಿ ಇರಲಿ,ಕೆಲಸದಲಿ ಯಶಸ್ಸು ಸಿಗಲಿ.ಪ್ರತಿ ಹೆಜ್ಜೆಯಲಿ ಸಂತಸ ತುಂಬಿರಲಿ,ಮುಂಜಾನೆಯ ಶುಭಾಶಯಗಳು!