ಕೊಲಂಬೊ: ಭಾರತ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲೂ ಶ್ರೀಲಂಕಾ ತಂಡ ಅಲ್ಪ ಮೊತ್ತ ಕಲೆಹಾಕಿದ್ದು, ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಲಂಕಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿದೆ.
ಅವಿಷ್ಕ ಫೆರ್ನಾಂಡೋ 40, ಕುಶಾಲ್ ಮೆಂಡಿಸ್ 30, ವೆಲ್ಲಲಾಗೆ 39, ಕಮಿಂಡು ಮೆಂಡಿಸ್ ರನ್ ಗಳಿಸಿದರು. ಭಾರತ ಪರ ವಾಷಿಂಗ್‌ಟನ್ ಸುಂದರ್ 3, ಕುಲದೀಪ್ 2, ಸಿರಾಜ್ 1, ಅಕ್ಸರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿ ಎಡವಿದ್ದ ಭಾರತ, ಮೊದಲ ಪಂದ್ಯದಲ್ಲಾದ ತಪ್ಪುಗಳನ್ನು ತಿದ್ದಿಕೊಂಡು, ಈ ಪಂದ್ಯವನ್ನು ಗೆಲ್ಲುತ್ತಾ ನೋಡಬೇಕಿದೆ. ರೋಹಿತ್ ಮತ್ತು ರಾಹುಲ್ ಅವರಂತೆ ಉಳಿದ ಬ್ಯಾಟರ್‌ಗಳು ಸಹ ಉತ್ತಮ ಪ್ರದರ್ಶನ ನೀಡಬೇಕಿದೆ. ಮೊದಲ ಮ್ಯಾಚ್‌ನಲ್ಲಿ ಕಡಿಮೆ ಮೊತ್ತ ದಾಖಲಾಗಿಯೂ ಪಂದ್ಯ ಡ್ರಾ ಆಗಿತ್ತು.