ಕೊಲಂಬೊ: ಭಾರತ ವಿರುದ್ಧ ಎರಡನೇ ಏಕದಿನ ಪಂದ್ಯದಲ್ಲೂ ಶ್ರೀಲಂಕಾ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 240 ರನ್ ಗಳಿಸಿತ್ತು. ಸುಲಭ ಗುರಿ ಬೆನ್ನು ಹತ್ತಿದ್ದ ಭಾರತ ತಂಡ ಉತ್ತಮ ಆರಂಭ ಕಂಡರೂ ಗುರಿ ತಲುಪುವಲ್ಲಿ ವಿಫಲವಾಗಿದೆ.
241 ರನ್‌ಗಳ ಟಾರ್ಗೆಟ್ ಬೆನ್ನು ಹತ್ತಿದ ಭಾರತ ತಂಡ ಉತ್ತಮ ಆರಂಭ ಕಂಡರೂ ರೋಹಿತ್, ಗಿಲ್ ಔಟಾದ ಮೇಲೆ ಪತನ ಕಂಡಿತು. ನಡುವೆ ಅಕ್ಸರ್ ಪಟೇಲ್ 44 ರನ್ ಗಳಿಸಿ ಗೆಲುವಿನ ಆಸೆ ಮೂಡಿಸಿದರು. ಆದರೆ ಕೊನೆವರೆಗೂ ಕೊಂಡೊಯ್ಯಲಿಲ್ಲ.
ರೋಹಿತ್ 64, ಗಿಲ್ 35, ಕೊಹ್ಲಿ 14, ದುಬೆ 0, ಶ್ರೇಯಸ್ 7, ರಾಹುಲ್ 0, ಸುಂದರ್ 15, ಸಿರಾಜ್ 4, ಕುಲದೀಪ್ 7, ಅರ್ಶದೀಪ್ 3 ರನ್ ಗಳಿಸಿದರು. ಈ ಮೂಲಕ 2ನೇ ಏಕದಿನ ಪಂದ್ಯದಲ್ಲಿ ಭಾರತ ವಿರುದ್ಧ ಶ್ರೀಲಂಕಾ 32 ರನ್‌ಗಳ ಗೆಲುವು ಕಂಡಿತು.
ಅವಿಷ್ಕ ಫೆರ್ನಾಂಡೋ 40, ಕುಶಾಲ್ ಮೆಂಡಿಸ್ 30, ವೆಲ್ಲಲಾಗೆ 39, ಕಮಿಂಡು ಮೆಂಡಿಸ್ ರನ್ ಗಳಿಸಿದರು. ಭಾರತ ಪರ ವಾಷಿಂಗ್‌ಟನ್ ಸುಂದರ್ 3, ಕುಲದೀಪ್ 2, ಸಿರಾಜ್ 1, ಅಕ್ಸರ್ ಪಟೇಲ್ 1 ವಿಕೆಟ್ ಪಡೆದಿದ್ದಾರೆ.
ಮೊದಲ ಏಕದಿನ ಪಂದ್ಯದಲ್ಲಿ ಗೆಲುವಿನ ಹೊಸ್ತಿಲಲ್ಲಿ ಎಡವಿದ್ದ ಭಾರತ, ಮೊದಲ ಪಂದ್ಯದಲ್ಲಿ ಮಾಡಿದ ತಪ್ಪುಗಳನ್ನು ಮತ್ತೆ ಮಾಡಿ ಎರಡನೇ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಮೊದಲನೇ ಪಂದ್ಯ ಟೈ ಆಗಿತ್ತು.