ಮುದ್ದೇಬಿಹಾಳ : ತುಮಕೂರು ಸಿದ್ಧಗಂಗಾ ಮಠದ ಡಾ.ಶಿವಕುಮಾರ ಮಹಾಸ್ವಾಮೀಜಿ ಅವರ ಜನ್ಮದಿನೋತ್ಸವ ಹಾಗೂ ಮಡಿಕೇಶ್ವರದ ದಿ.ಚೆನ್ನಣ್ಣ ದೇಸಾಯಿ ಅವರ ಐದನೇ ಪುಣ್ಯಸ್ಮರಣೋತ್ಸವದ ಅಂಗವಾಗಿ ಜ.19 ರಿಂದ 21ರವರೆಗೆ ವಿವಿಧ ಧಾರ್ಮಿಕ,ಆಧ್ಯಾತ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಕುಂಟೋಜಿ ಭಾವೈಕ್ಯತಾ ಮಠದ ಚೆನ್ನವೀರ ಶಿವಾಚಾರ್ಯರು ಹೇಳಿದರು.
ಪಟ್ಟಣದ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ ಅವರ ನಿವಾಸದಲ್ಲಿ ಕರೆದಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ದಾಸೋಹ ದಿನಾಚರಣೆಯ ಅಂಗವಾಗಿ ಸಾರ್ವಜನಿಕರಿಗೆ ಅನ್ನಸಂತರ್ಪಣೆ,ಭಕ್ತ ಹಿತಚಿಂತನಾ ಸಭೆ,ರಾಷ್ಟಿçÃಯ ನಾಟಕೋತ್ಸವ,ಎಸ್.ಎಸ್.ಎಲ್.ಸಿ,ಪಿಯುಸಿ ಸಾಧಕ ವಿದ್ಯಾರ್ಥಿಗಳಿಗೆ ,ಪೌರಕಾರ್ಮಿಕರಿಗೆ ಸನ್ಮಾನ ನಡೆಯಲಿದ್ದು ಹುಡ್ಕೋದ ಗವಿಸಿದ್ದೇಶ್ವರ ವೇದಿಕೆಯಲ್ಲಿ ಈ ಎಲ್ಲ ಕಾರ್ಯಕ್ರಮಗಳು ಜರುಗಲಿವೆ ಎಂದರು.
ಮುದ್ದೇಬಿಹಾಳ ನಗರವನ್ನು ಸ್ವಚ್ಛಗೊಳಿಸುವ ಪೌರಕಾರ್ಮಿಕರಿಗೆ ಸನ್ಮಾನ ಏರ್ಪಡಿಸಲಾಗಿದೆ.ಎಸ್.ಎಸ್.ಎಲ್.ಸಿ ಪಿಯುಸಿಯಲ್ಲಿ ಪ್ರಥಮ ದ್ವಿತೀಯ ಬಂದವರಿಗೆ ಚಾರಿಟೇಬಲ್ ಟ್ರಸ್ಟ್ ಅಡಿಯಲ್ಲಿ ಇಟ್ಟಿರುವ ಬಡ್ಡಿ ಹಣದಲ್ಲಿ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡಲಾಗುವುದು.60 ವರ್ಷ ಆದವರಿಗೆ ವಾಕಿಂಗ್ ಸ್ಟಿಕ್ ನೀಡಲು ಯೋಜಿಸಲಾಗಿದೆ ಎಂದರು.
ಮೂರು ದಿನಗಳ ಕಾಲ ಉಚಿತವಾಗಿ ನಾಟಕೋತ್ಸವ ನಡೆಯಲಿದೆ. ಟಿವಿ,ಮೊಬೈಲ್‌ದಿಂದ ದೂರವಾಗಿ ಸಾಂಪ್ರದಾಯಿಕ ನಾಟಕ ಕಲೆಯತ್ತ ಜನರನ್ನು ಸೆಳೆಯುವ ಸಲುವಾಗಿ ಸಾಣೇಹಳ್ಳಿ ಮಠದ ಶಿವಕುಮಾರ ಕಲಾಸಂಘದ (ಶಿವಸಂಚಾರ) ತಂಡದಿಂದ ಮೂರು ದಿನಗಳ ನಾಟಕೋತ್ಸವ ಆಯೋಜಿಸಲಾಗಿದೆ. ಜ.19 ರಂದು ಜಂಗಮದೆಡೆಗೆ, ಜ.20 ರಂದು ಕಳ್ಳರಸಂತೆ, ಜ.21 ಶಿವಯೋಗಿ ಸಿದ್ಧರಾಮ ನಾಟಕಗಳು ಜರುಗಲಿವೆ.ಪ್ರತಿ ದಿನ ಸಂಜೆ 7ಕ್ಕೆ ಗವಿಸಿದ್ದೇಶ್ವರ ವೇದಿಕೆಯಲ್ಲಿ ಈ ನಾಟಕಗಳ ಪ್ರದರ್ಶನ ಇರಲಿದೆ ಎಂದು ತಿಳಿಸಿದರು.ಜ.21 ರಂದು ಬೆಳಗ್ಗೆ 8ಕ್ಕೆ ಹಡಲಗೇರಿಯ ಹುಲಿಗೆಮ್ಮ ದೇವಿ ಭಜನಾ ಮಂಡಳಿಯಿದ ತತ್ವಪದಗಳ ಭಜನಾಂಜಲಿ ಕಾರ್ಯಕ್ರಮ ನಡೆಯಲಿದೆ.ಪೂಜ್ಯರು ಬಿಟ್ಟರೆ ಬೇರೆ ಯಾವ ವ್ಯಕ್ತಿಗಳ ವೈಭವೀಕರಣ ಇರುವುದಿಲ್ಲ.ಧಾರ್ಮಿಕ ಆಧ್ಯಾತ್ಮಿಕ ಕಾರ್ಯಕ್ರಮ ಇದಾಗಿದೆ ಎಂದು ಹೇಳಿದರು.
ಪೂರ್ವಭಾವಿ ಸಭೆಯಲ್ಲಿ ಜಿಪಂ ಮಾಜಿ ಉಪಾಧ್ಯಕ್ಷ ಪ್ರಭುಗೌಡ ದೇಸಾಯಿ, ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ಆರ್.ಎಸ್.ಪಾಟೀಲ ಕೂಚಬಾಳ, ಗಣ್ಯರಾದ ಎಂ.ಬಿ.ನಾವದಗಿ, ಬಿ.ವಿ.ಕೋರಿ, ಮಾತನಾಡಿದರು.
ಕೆಯುಸಿ ಬ್ಯಾಂಕ್ ನಿರ್ದೇಶಕ ಸತೀಶ ಓಸ್ವಾಲ್,ಜಿಒಸಿಸಿ ಬ್ಯಾಂಕ್ ನಿರ್ದೇಶಕ ಅರವಿಂದ ಹೂಗಾರ,ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ವೀರಶೈವ ಲಿಂಗಾಯತ ಸಮಾಜದ ಅಧ್ಯಕ್ಷ ಪ್ರಭುರಾಜ ಕಲ್ಬುರ್ಗಿ, ಪಂಚಮಸಾಲಿ ಸಮಾಜದ ಅಧ್ಯಕ್ಷ ಅಮರೇಶ ಗೂಳಿ, ಶರಣು ಸಜ್ಜನ,ಬಸವರಾಜ ದಡ್ಡಿ, ಬಸವರಾಜ ಲಿಂಗದಳ್ಳಿ , ರಾಮಚಂದ್ರ ಹೆಗಡೆ,ಬಾಪುಗೌಡ ಪೀರಾಪೂರ,ಎಂ.ಡಿ.ಕುಂಬಾರ,ರಾಜುಗೌಡ ಗೌಡರ,ಅರವಿಂದ ಕಾಶಿನಕುಂಟಿ,ವೀರೇಶ ಢವಳಗಿ ಇದ್ದರು.



