
ಯಾದಗಿರಿ : ನೆರವು ಕಟ್ಟಡ ಮತ್ತು ಅಸಂಘಟಿತ ಕಾರ್ಮಿಕರ ಸಂಘದ ರಾಜ್ಯಾಧ್ಯಕ್ಷರಾದ ಅಶ್ವಥ್ ಟಿ ಮರಿಗೌಡ ಅಣ್ಣ ರವರ ಆದೇಶದ ಮೇರೆಗೆ ಇಂದು ಯಾದಗಿರಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭೀಮರಾಯ ಹತ್ತಿಕುಣಿ ಮತ್ತು ತಾಲೂಕು ಅಧ್ಯಕ್ಷರು ವೀರೇಶ್ ಗಣಪುರ್ ನೇತೃತ್ವದಲ್ಲಿ ತಾಲೂಕಿನ ಮಲಾರ್ ಗ್ರಾಮದಲ್ಲಿ ಶ್ರೀ ಆಂಜನೇಯ ದೇವಸ್ಥಾನದ ಆವರಣದಲ್ಲಿ ಮಲಾರ್ ಗ್ರಾಮ ಘಟಕದ ನೂತನ ಅಧ್ಯಕ್ಷರಾಗಿ ವಿಜಯ್ ಮತ್ತು ಗೌರವಾಧ್ಯಕ್ಷರಾಗಿ ಗೋಪಾಲ್, ಪ್ರಧಾನ ಕಾರ್ಯದರ್ಶಿಯಾಗಿ ಈರಪ್ಪ, ಸಂಘಟನೆ ಕಾರ್ಯದರ್ಶಿಯಾಗಿ ವೆಂಕಟರಾಯ ರಾಜಶೇಖರ್ ಮತ್ತು ಹನುಮಂತ ಚಂದ್ರಪ್ಪ ರವರನ್ನು ನೂತನ ಪದಾಧಿಕಾರಿಗಳಾಗಿ ನೇಮಕ ಮಾಡಲಾಯಿತು. ಈ ಸಂಧರ್ಭದಲ್ಲಿ ಊರಿನ ಮುಖಂಡರು, ಕಾರ್ಮಿಕರು, ಗ್ರಾಮಸ್ಥರು ಉಪಸ್ಥಿತರಿದ್ದರು.

ವರದಿ : ಶಿವು ರಾಠೋಡ





