Muddebihal: ಚಿರತೆ ಹೆಜ್ಜೆ ಹೋಲುವ ಕಾಡುಪ್ರಾಣಿ ಹೆಜ್ಜೆ ಗುರುತು ಪತ್ತೆ? ಕಂದಗನೂರಿನಲ್ಲಿ ಆತಂಕ!

Muddebihal: ಚಿರತೆ ಹೆಜ್ಜೆ ಹೋಲುವ ಕಾಡುಪ್ರಾಣಿ ಹೆಜ್ಜೆ ಗುರುತು ಪತ್ತೆ? ಕಂದಗನೂರಿನಲ್ಲಿ ಆತಂಕ!

ಮುದ್ದೇಬಿಹಾಳ : ತಾಲ್ಲೂಕಿನ ಕಂದಗನೂರಿನ ಕಬ್ಬಿನ ಜಮೀನೊಂದರಲ್ಲಿ ಚಿರತೆಯಂತಹ ಕಾಡುಪ್ರಾಣಿಯದ್ದು ಎನ್ನಲಾದ ಹೆಜ್ಜೆ ಗುರುತು ಪತ್ತೆಯಾಗಿದ್ದು, ಈ ಭಾಗದ ಗ್ರಾಮಸ್ಥರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.

ಜು.29 ರಂದು ಕಂದಗನೂರ ಗ್ರಾಮದ ಬೀಯಪ್ಪ ಬೋಳಿ ಅವರ ಹೊಲದಲ್ಲಿ ಆಕಳು ಹಾಗೂ ಕರುವಿನ ಕಳೆಬರ ಪತ್ತೆಯಾಗಿದೆ. ಇದು ಕಾಡು ಪ್ರಾಣಿ ದಾಳಿಯಿಂದ ಎರಡು ಜಾನುವಾರುಗಳು ಮೃತಪಟ್ಟಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಏತನ್ಮಧ್ಯೆ, ಕಂದಗನೂರು ಭಾಗದಲ್ಲಿ ಚಿರತೆ ಬಂದಿದೆ ಎಂಬ ವಿಡಿಯೋ, ಫೋಟೊಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು ಅವು ಈ ಭಾಗದ್ದಲ್ಲ ಎಂಬುದನ್ನು ಅರಣ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ.

ಕಾಡುಪ್ರಾಣಿ ಸೆರೆಗೆ ಬಿ.ಎಸ್.ಬೋಳಿ ಅವರ ಹೊಲದಲ್ಲಿ ಬೋನು ಇರಿಸಲಾಗಿದೆ. ಆದರೆ ಜು.30 ರಂದು ಮೃತಪಟ್ಟ ಆಕಳ ಮಾಂಸ ತಿನ್ನುವುದಕ್ಕೆ ಕಾಡುಪ್ರಾಣಿ ಬಂದು ಹೋಗಿದೆ ಎಂದು ಪ್ರಾದೇಶಿಕ ಅರಣ್ಯ ಇಲಾಖೆಯ ಅಧಿಕಾರಿ ಬಸನಗೌಡ ಬಿರಾದಾರ ತಿಳಿಸಿದ್ದಾರೆ.

ಹೊಲದಲ್ಲಿ ಮಂಗಳವಾರ ಅವಲೋಕಿಸಿದಾಗ ಕಾಡುಪ್ರಾಣಿಯ ಹೆಜ್ಜೆಗಳು ಚಿರತೆಯದ್ದೆಂಬಂತೆ ಕಾಣುತ್ತಿವೆ.ಆದರೆ ಖಚಿತವಾಗಿ ಹೇಳಲು ಆಗದು.ಕತ್ತೆ ಕಿರುಬ ಕೂಡಾ ಜಾನುವಾರುಗಳನ್ನು ತಿಂದು ಹೋಗುತ್ತದೆ. ಮೇಲಧಿಕಾರಿಗಳ ಸೂಚನೆಯಂತೆ ಕಾಡುಪ್ರಾಣಿ ಸೆರೆ ಹಿಡಿಯಲು ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಅದರಲ್ಲಿ ಸೆರೆಯಾದರೆ ಯಾವ ಪ್ರಾಣಿ ಎಂಬುದು ಖಚಿತವಾಗಿ ತಿಳಿದು ಬರಲಿದೆ ಎಂದು ಮಾಹಿತಿ ನೀಡಿದರು.

ಚಿರತೆ ಬಂದಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ ವಿಡಿಯೋ ಫೋಟೊಗಳ ಮಾಹಿತಿಯಿಂದ ಗ್ರಾಮಸ್ಥರು ತೀವ್ರ ಆತಂಕಗೊಂಡರು. ಸಂಜೆಯವ ಹೊತ್ತಿಗೆ ಚಿರತೆ ಕಂದಗನೂರಿನಲ್ಲಿ ಕಾಣಿಸಿದ್ದಲ್ಲ ಬೇರೆ ಸ್ಥಳದ್ದು ಎಂದು ಗೊತ್ತಾದ ಬಳಿಕ ಅಲ್ಪ ನಿರಾಳರಾಗಿದ್ದಾರೆ. ಆದರೆ, ಚಿರತೆಯೇ ಬಂದಿದೆ ಎಂಬುದನ್ನು ಯಾರೊಬ್ಬರು ನೋಡಿಲ್ಲ ಎಂದು ಗ್ರಾಮಸ್ಥ ರಾಜಾಭಕ್ಷಿ ಮಕಾಶಿ ತಿಳಿಸಿದರು.

ಕೃಷಿ ಚಟುವಟಿಕೆ ಕೈಗೊಳ್ಳಲು ಗ್ರಾಮಸ್ಥರ ಹಿಂದೇಟು: ಚಿರತೆ ಕಾಣಿಸಿಕೊಂಡಿದೆ ಎಂಬ ವದಂತಿಯಿಂದ ಭೀತಿಗೊಳಗಾಗಿರುವ ಈ ಭಾಗದ ಕಂದಗನೂರು, ಕಾಳಗಿ, ಬಳಬಟ್ಟಿ ಗ್ರಾಮದ ರೈತಾಪಿ ವರ್ಗದವರಲ್ಲಿ ಕೃಷಿ ಚಟುವಟಿಕೆ ಗೆ ಹೋಗುವುದನ್ನು ಬಿಟ್ಟು ಮನೆಯಲ್ಲಿ ಕೂರುವಂತಾಗಿದೆ. ಆದಷ್ಟು ಬೇಗ ತಾಲ್ಲೂಕಾಡಳಿತದ ಅಧಿಕಾರಿಗಳು ಕಾಡುಪ್ರಾಣಿ ಪತ್ತೆ ಹಚ್ಚಿ ಸೆರೆ ಹಿಡಿದು ರೈತರಲ್ಲಿ ಉಂಟಾಗಿರುವ ಆತಂಕವನ್ನು ದೂರ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Latest News

ಶ್ರೀಶೈಲ್‌ಗೆ ವಿಶೇಷ ಬಸ್ ವ್ಯವಸ್ಥೆ

ಶ್ರೀಶೈಲ್‌ಗೆ ವಿಶೇಷ ಬಸ್ ವ್ಯವಸ್ಥೆ

ಮುದ್ದೇಬಿಹಾಳ : ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದಿಂದ ಶ್ರೀಶೈಲ ಮಲ್ಲಿಕಾರ್ಜುನ ಜಾತ್ರೆಗೆ ತೆರಳುವ

ಸೌಹಾರ್ದತೆಯನ್ನು ಬೆಸೆಯುವ ಹಬ್ಬ ರಂಜಾನ್-ಸಿ.ಬಿ.ಅಸ್ಕಿ

ಸೌಹಾರ್ದತೆಯನ್ನು ಬೆಸೆಯುವ ಹಬ್ಬ ರಂಜಾನ್-ಸಿ.ಬಿ.ಅಸ್ಕಿ

ಮುದ್ದೇಬಿಹಾಳ : ವಿವಿಧತೆಯಲ್ಲಿ ಏಕತೆಯನ್ನು ಕಾಣುವ ಹಿಂದೂ ಮುಸ್ಲಿಂ ಬಾಂಧವರ ಮಧ್ಯೆ ಸೌಹಾರ್ದತೆಯನ್ನು ಬೆಸೆಯುವ

ಡಿ.ಕೆ.ಶಿವಕುಮಾರ ಆಕ್ಸಿಜನ್ ಮ್ಯಾನ್-ಸದ್ದಾಂ ಕುಂಟೋಜಿ

ಡಿ.ಕೆ.ಶಿವಕುಮಾರ ಆಕ್ಸಿಜನ್ ಮ್ಯಾನ್-ಸದ್ದಾಂ ಕುಂಟೋಜಿ

ಮುದ್ದೇಬಿಹಾಳ : ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರಲು ಡಿಸಿಎಂ ಡಿ.ಕೆ.ಶಿವಕುಮಾರ ಅವರದ್ದು ಪ್ರಧಾನ

ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ:                   ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣ-ಹಾಲಗಂಗಾಧರಮಠ

ವಿಶ್ವಭಾರತಿ ಪಬ್ಲಿಕ್ ಸ್ಕೂಲ್ ವಾರ್ಷಿಕೋತ್ಸವ: ಶಿಕ್ಷಣ ಕ್ಷೇತ್ರವೂ ವ್ಯಾಪಾರೀಕರಣ-ಹಾಲಗಂಗಾಧರಮಠ

ಮುದ್ದೇಬಿಹಾಳ : ಮಕ್ಕಳಿಗೆ ಬಾಲ್ಯದಲ್ಲಿ ಗುರುಕುಲ ಮಾದರಿ ಶಿಕ್ಷಣದಿಂದ ಸಂಸ್ಕಾರ,ಸAಸ್ಕೃತಿಯ ಅರಿವು ದೊರೆಯುತ್ತದೆ ಎಂದು

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮೀನುಗಾರರಿಗೆ ಸಿಹಿಗಿಂತ ಕಹಿಯೇ ಹೆಚ್ಚು-ಡಾ.ಗೌತಮ್ ಚೌಧರಿ

ಮುದ್ದೇಬಿಹಾಳ : ಕರಾವಳಿ ಮತ್ತು ಒಳನಾಡು ಮೀನುಗಾರರ ಮೂಲಸೌಕರ್ಯ ಅಭಿವೃದ್ಧಿಗಾಗಿ ರಾಜ್ಯ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳನ್ನು ರಾಷ್ಟ್ರೀಯ ಮೀನುಗಾರರ ಸಂಘ ಸ್ವಾಗತಿಸುತ್ತದೆ ಎಂದು ಸಂಘದ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ. ಗೌತಮ್ ಚೌಧರಿ ತಿಳಿಸಿದ್ದಾರೆ.ಪತ್ರಿಕಾ ಹೇಳಿಕೆ ನೀಡಿರುವ ಅವರು, ಮೀನುಗಾರರಿಗೆ ನೀಡುವ ಕಿಟ್ ದರವನ್ನು ₹10,000 ದಿಂದ ₹20,000ಕ್ಕೆ ಹೆಚ್ಚಿಸಿರುವುದು, ಮಂಗಳೂರು ಮೀನುಗಾರಿಕಾ ಮಹಾವಿದ್ಯಾಲಯದಲ್ಲಿ 'ಸೆಂಟರ್ ಆಫ್ ಎಕ್ಸಲೆನ್ಸ್' ಸ್ಥಾಪನೆ, ಹಾಗೂ ಹೊಸ 'ಮತ್ಸ್ಯದರ್ಶಿನಿ'ಗಳು ಮತ್ತು ಸುಸಜ್ಜಿತ ಮೀನು ಮಾರುಕಟ್ಟೆಗಳನ್ನು ನಿರ್ಮಿಸುತ್ತಿರುವ

ಶಾಸಕ ನಾಡಗೌಡ,ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ:           ಮಾ.11 ರಿಂದ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಶಾಸಕ ನಾಡಗೌಡ,ತಹಶೀಲ್ದಾರ್‌ಗೆ ಮನವಿ ಸಲ್ಲಿಕೆ: ಮಾ.11 ರಿಂದ ಆರೋಗ್ಯ ಇಲಾಖೆ ನೌಕರರ ಅನಿರ್ದಿಷ್ಟಾವಧಿ ಮುಷ್ಕರ

ಮುದ್ದೇಬಿಹಾಳ : ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಅಧಿಕಾರಿ-ನೌಕರರ ವಿವಿಧ ಬೇಡಿಕೆಗಳನ್ನು ರಾಜ್ಯ ಸರ್ಕಾರ ಈಡೇರಿಸದಿದ್ದರೆ ಮಾ.11ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳುವುದಾಗಿ ಕರ್ನಾಟಕ ಸರ್ಕಾರಿ ವೈದ್ಯಾಧಿಕಾರಿಗಳ ಸಂಘ ಹಾಗೂ ಕರ್ನಾಟಕ ರಾಜ್ಯ ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖಾ ನೌಕರರ ಕೇಂದ್ರ ಸಂಘದ ತಾಲ್ಲೂಕು ಪದಾಧಿಕಾರಿಗಳು ಶಾಸಕ ಸಿ.ಎಸ್.ನಾಡಗೌಡ ಹಾಗೂ ತಹಶೀಲ್ದಾರ್ ಅವರಿಗೆ ಶುಕ್ರವಾರ ಮನವಿ ಪತ್ರ ಸಲ್ಲಿಸಿದರು. ರಾಜ್ಯದ ಎಲ್ಲ ಸರ್ಕಾರಿ ಆಸ್ಪತ್ರೆಗಳಿಗೆ ಕಾಲಕಾಲಕ್ಕೆ ಇಲಾಖೆಯಿಂದ ಔಷಧಿ