ಹಿಂದೂಗಳ ಮಾರಣಹೋಮ ಆಗ್ತಿದ್ರೂ ಬಾಯ್ಬಿಟ್ತಿಲ್ಲ ಮೋದಿ: BJP ಕಚೇರಿ ಎದುರೇ ಮುತಾಲಿಕ್ ವಾಗ್ದಾಳಿ (ವಿಡಿಯೋ ನೋಡಿ)

ಹಿಂದೂಗಳ ಮಾರಣಹೋಮ ಆಗ್ತಿದ್ರೂ ಬಾಯ್ಬಿಟ್ತಿಲ್ಲ ಮೋದಿ: BJP ಕಚೇರಿ ಎದುರೇ ಮುತಾಲಿಕ್ ವಾಗ್ದಾಳಿ (ವಿಡಿಯೋ ನೋಡಿ)

ಬೆಂಗಳೂರು: ಹಿಂಸಾಚಾರ ಪೀಡಿತ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಹಾಗೂ ಅವರ ಆಸ್ತಿ-ಪಾಸ್ತಿ ಮಂದಿರಗಳ ಮೇಲಿನ ದಾಳಿ ಕುರಿತು ಬಿಜೆಪಿ ಸರ್ಕಾರ ರಕ್ಷಣೆಗೆ ನಿಲ್ಲದೆ ಸುಮ್ಮನಿದೆ ಎಂದು ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ (Pramod Mutalik) ಕಿಡಿಕಾರಿದ್ದಾರೆ.

ನಗರದ ಬಿಜೆಪಿ ಕಚೇರಿ ಆವರಣದಲ್ಲಿ ಶ್ರೀ ರಾಮ ಸೇನೆವತಿಯಿಂದ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಹಿಂದೂಗಳು, ಶ್ರೀ ರಾಮನನ್ನು ನಂಬಿ ಅಧಿಕಾರಕ್ಕೆ ಬಂದ ಪಕ್ಷ, ಆದರೆ ಇದೀಗ ನೆರೆಯ ರಾಷ್ಟ್ರದಲ್ಲಿ ಹಿಂದೂಗಳ ಮಾರಣಹೋಮ ನಡೆಯುತ್ತಿದ್ದರೂ ಕೂಡ ಕೈಕಟ್ಟಿ ಕುಳಿತಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ.

Join Our Telegram: https://t.me/dcgkannada

ಬಾಂಗ್ಲಾದಲ್ಲಿ ನಮ್ಮ ಸಮುದಾಯವನ್ನು ನಾಶ ಮಾಡಲು ಹೊರಟಿದ್ದಾರೆ. ಕನಿಷ್ಠ ಎಚ್ಚರಿಕೆ ಕೊಡಲು ಮೋದಿ ಸರ್ಕಾರಕ್ಕೆ ಆಗ್ತಾಇಲ್ಲ ಅಂದ್ರೆ ಏನ್ ಅರ್ಥ..? ಇವತ್ ಬಾಂಗ್ಲಾ, ನಾಳೆ ಪಶ್ಚಿಮ ಬಂಗಾಳ, ನಾಡಿದ್ದು ದೆಹಲಿ,ಆಚೆ ನಾಡಿದ್ದು ಕರ್ನಾಟಕ. ಎಷ್ಟಂತ ಸಹಿಸಬೇಕು..? ಹಿಂದೂಗಳ ರಕ್ಷಣೆ ಮಾಡಬೇಕಾದವರು ಯಾರು ಎಂದು ಪ್ರಮೋದ್ ಮುತಾಲಿಕ್ (Pramod mutalik) ಪ್ರತಿಭಟನೆಯಲ್ಲಿ ಆಗ್ರಹಿಸಿದರು.

ಶ್ರೀಮತಿ ಇಂದಿರಾ ಗಾಂಧಿಯವರು ಇದೇ ರೀತಿ ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದಾಗ, ಪಾಕಿಸ್ತಾನವನ್ನು ತುಂಡರಿಸಿ ಬಾಂಗ್ಲಾದೇವನ್ನು ರಚಿಸಿದರು. ಅಂತೆಯೇ ತ್ವರಿತವಾಗಿ ಕೇಂದ್ರ ಸರ್ಕಾರ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು.

ಎಷ್ಟಂತ ಸಹಿಸುವುದು, ಓಟಾಕಿದ್ದೀವಿ, ಅಧಿಕಾರಕ್ಕೆ ತಂದಿದ್ದೀವಿ.. ಆದರೂ ನಮ್ಮವರೇ ಸಾಯುತ್ತಿದ್ದಾರೆ.. ಇಡೀ ದೇಶ ಆಕ್ರೋಶದಿಂದ ಕುದಿಯುತ್ತಿದೆ. ಮೋದಿ ಅವರೇ ನಿಮ್ಮ ಕಡೆ ಇಡೀ ದೇಶ ನೋಡ್ತಾ ಇದೆ. ಆ ಹೆಣ್ಣುಮಕ್ಕಳ ಅಳಲು ನಿಮಗೂ ಕೇಳುಸ್ತಾ ಇದೆ. ಹೆಣ್ಣುಮಕ್ಕಳ ರಕ್ತಪಾತ ನಿಮಗೂ ಗೊತ್ತಾಗ್ತಾ ಇದೆ. ಆದರೂ ಕೂಡ ಏನೂ ಮಾಡ್ತಾ ಇಲ್ಲ.

ಇದನ್ನೂ ಓದಿ: BJP Rebel Leaders: ಬಿಜೆಪಿಯಲ್ಲೀಗ 20 ಬಣ! ಕೂಡಲಸಂಗಮ to ಬಳ್ಳಾರಿ ಪಾದಯಾತ್ರೆಗೆ ಡೇಟ್ ಫಿಕ್ಸ್?

ಇಂದು ಕರ್ನಾಟಕ ಬಿಜೆಪಿ ಕಚೇರಿಯ ಮುಂದೆ ಪ್ರತಿಭಟನೆ ಮೂಲಕ ಮೋದಿ ಸರ್ಕಾರಕ್ಕೆ, ಕೇಂದ್ರ ಸರಕಾರಕ್ಕೆ ಒಂದು ಸಂದೇಶ ಕೊಡಲು ಇದು ಆರಂಭ.

ಒಂದು ವೇಳೆ ಕೇಂದ್ರ ಹಿಂದೂಗಳ ರಕ್ಷಣೆಗೆ ಹಿಂದೇಟು ಹಾಕಿದರೆ ರಾಜ್ಯವ್ಯಾಪಿ ಉಗ್ರ ಹೋರಾಟ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಈ ವೇಳೆ ಮುಖಂಡರಾದ ಸುಂದರೇಶ್, ಅಮರನಾಥ್, ಗಂಗಾಧರ್, ಕುಲಕರ್ಣಿ ಮತ್ತಿತರರಿದ್ದರು.

Latest News

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

1ನೇ ರಾಜ್ಯಮಟ್ಟದ ಪೆಂಕಾಕ್ ಸಿಲಾಸ್ ಕ್ರೀಡಾಕೂಟ

ಮುದ್ದೇಬಿಹಾಳದ ಶಕುಂತಲಾಗೆ ಬೆಳ್ಳಿ, ವಿಕ್ರಾಂತಗೆ ಕಂಚಿನ ಪದಕ ಮುದ್ದೇಬಿಹಾಳ : ಕೊಪ್ಪಳ ಜಿಲ್ಲಾ ಹನುಮಸಾಗರ

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ನಮ್ಮ ನಗರ, ಸ್ವಚ್ಛ ನಗರ ವಿಶೇಷ ಅಭಿಯಾನಕ್ಕೆ ಚಾಲನೆ ನೀಡಿದ ಸಚಿವ ಸಂತೋಷ್‌ ಲಾಡ್‌

ಧಾರವಾಡ, ಜೂ.30: ನಗರದ ಸ್ವಚ್ಛತೆ ಪಾಲಿಕೆ, ನಗರ ಸಭೆ ಕೆಲಸ ಮಾತ್ರವಲ್ಲ ಸಾರ್ವಜನಿಕರ ಸಹಕಾರವೂ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಪ್ರೌಢಶಾಲಾ ಸಹ ಶಿಕ್ಷಕರ ಸಂಘಕ್ಕೆ ಆಯ್ಕೆ:ಪಿಂಜಾರ್ ಅಧ್ಯಕ್ಷ, ಕೊಣ್ಣೂರು ಉಪಾಧ್ಯಕ್ಷ

ಮುದ್ದೇಬಿಹಾಳ : ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ತಾಲ್ಲೂಕು ಘಟಕದ ನೂತನ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಯೋಗ ರತ್ನ -2025 ಪ್ರಶಸ್ತಿ ಪ್ರದಾನ ಸಮಾರಂಭ

ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಶ್ವಾಸಯೋಗ ಸಂಸ್ಥೆ ಹಾಗೂ ಸಂತೋಷ್ ಲಾಡ್ ಫೌಂಡೇಶನ್ ಸಹಯೋಗದಲ್ಲಿ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಸಚಿವ ಲಾಡ್ ಅವರಿಂದ ಕಾರ್ಖಾನೆಗಳ ಕಾರ್ಮಿಕರ ಸಮಸ್ಯೆಗಳ ಕುರಿತು ಚರ್ಚೆ

ಬೆಂಗಳೂರು, ಜೂನ್‌ 26: ಕಾರ್ಮಿಕ ಹಾಗೂ ಧಾರವಾಡ ಜಿಲ್ಲಾ ಉಸ್ತುವಾರಿ ಸಚಿವರಾದ ಸಂತೋಷ್‌ ಲಾಡ್‌ ಅವರು ಇಂದು ಬೆಂಗಳೂರಿನ ವಿಕಾಸಸೌಧದಲ್ಲಿ ವಿವಿಧ ಕಾರ್ಖಾನೆಗಳು ಹಾಗೂ ಮನೆ ಕೆಲಸದ ಕಾರ್ಮಿಕರ ಸಮಸ್ಯೆಗಳ ಬಗ್ಗೆ ಸಭೆ ನಡೆಸಿ ಚರ್ಚಿಸಿದರು. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಕಾರ್ಮಿಕರ ಸಮಸ್ಯೆ ಚರ್ಚೆ:ಕರ್ನಾಟಕ ಜನರಲ್ ಲೇಬರ್ ಯೂನಿಯನ್ ಬೆಂಗಳೂರು ಇವರ ಮನವಿ ಮೇರೆಗೆ ಮೆ. ನುವೋಕೋ ವಿನ್ವಾಸ್ ಕಾರ್ಪೊರೇಷನ್ ಲಿಮಿಟೆಡ್.. ಕಾರ್ಮಿಕರ ಸಮಸ್ಯೆಗಳ ಕುರಿತು ಸಭೆ ನಡೆಸಿ ಚರ್ಚಿಸಿದರು.

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಶಾಂತಿಸಭೆ : ಪಿಎಸ್‌ಐ ತಿಪರೆಡ್ಡಿ ಸಲಹೆಶಾಂತಿಯುತವಾಗಿ ಮೊಹರಂ ಆಚರಿಸಿ

ಮುದ್ದೇಬಿಹಾಳ : ಜೂ.27 ರಿಂದ ಮೊಹರಂ ಹಬ್ಬದ ಆಚರಣೆ ಆರಂಭಗೊಳ್ಳಲಿದ್ದು ಶಾಂತಿಯುತವಾಗಿ ಆಚರಿಸುವಂತೆ ಪಿಎಸ್‌ಐ ಸಂಜಯ ತಿಪರೆಡ್ಡಿ ಹೇಳಿದರು. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಮೊಹರಂ ಶಾಂತಿಸಭೆಯಲ್ಲಿ ಅವರು ಮಾತನಾಡಿದರು. ಜೂ.27 ರಂದು ಮೊಹರಂ ಹಬ್ಬದ ಆಚರಣೆ ಆರಂಭಗೊಂಡು 29 ರಂದು ದಫನ್ ಮಾಡಲಾಗುತ್ತದೆ. ಈ ಸಮಯದಲ್ಲಿ ಅಲಾಯ್ ದೇವರುಗಳನ್ನು ಪ್ರತಿಷ್ಠಾಪಿಸುವ ಸಮಿತಿಯವರು ಪೊಲೀಸ್ ಠಾಣೆಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಮೊಹರಂ ಹಬ್ಬ ಭಾವೈಕ್ಯತೆಯ ಸಂಕೇತವಾಗಿದ್ದು ಉಭಯ