ಉದ್ಯೋಗ ಸಿಗದ ಹತಾಶೆ; ಯುವಕ ಆತ್ಮಹತ್ಯೆ..! “I am a big failure” ಎಂದು ಡೆತ್ ನೋಟ್

ಉದ್ಯೋಗ ಸಿಗದ ಹತಾಶೆ; ಯುವಕ ಆತ್ಮಹತ್ಯೆ..! “I am a big failure” ಎಂದು ಡೆತ್ ನೋಟ್

ದೊಡ್ಡಬಳ್ಳಾಪುರ: ದೇಶದಲ್ಲಿ ನಿರುದ್ಯೋಗ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದ್ದು, ಲಕ್ಷಾಂತರ ರೂಪಾಯಿ ಖರ್ಚು ಮಾಡಿ, ಶ್ರಮ ಪಟ್ಟು ಉತ್ತಮ ಅಂಕಗಳನ್ನು ಪಡೆದರೂ ಅರ್ಹತೆಗೆ ತಕ್ಕ ಉದ್ಯೋಗ ದೊರಕುತ್ತಿಲ್ಲ ಎಂಬ ಆಕ್ರೋಶ ಯುವ ಸಮುದಾಯದ್ದಾಗಿದೆ. ಇದು ರಾಜಕೀಯ ಆರೋಪ ಪ್ರತ್ಯಾರೋಪಕ್ಕೆ ಕಾರಣವಾದರು, ಯುವ ಸಮುದಾಯದ ಅಳಲು ಕೇಳುವವರು ಇಲ್ಲವಾಗಿದೆ.

ಇದಕ್ಕೆ ಪೂರಕವೆಂಬಂತೆ ಉನ್ನತ ವ್ಯಾಸಂಗ ಮಾಡಿದರು ಉದ್ಯೋಗ ಸಿಗದ ಕಾರಣ ಬೇಸತ್ತ ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೊಡ್ಡಬಳ್ಳಾಪುರ ನಗರದ ವಿದ್ಯಾನಗರದಲ್ಲಿ ಭಾನುವಾರ ಸಂಜೆ ಸಂಭವಿಸಿದೆ.

ಮೃತ ಯುವಕನನ್ನು 29 ವರ್ಷದ ಭರತ್ ಕುಮಾರ್ ಎಂದು ಗುರುತಿಸಲಾಗಿದ್ದು, ಬಿಎ ಮೆಕಾನಿಕಲ್ ಇಂಜಿನಿಯರ್ ಮುಗಿಸಿ 7 ವರ್ಷ ಕಳೆದರು ಅರ್ಹತೆಗೆ ತಕ್ಕ ಉದ್ಯೋಗ ಸಿಗದ ಕಾರಣ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಮೃತನ ತಂದೆ ನಿಧನ ಹೊಂದಿದ್ದು, ಅಕ್ಕ ಮತ್ತು ತಾಯಿಯೊಂದಿಗೆ ವಿದ್ಯಾನಗರದಲ್ಲಿ ವಾಸವಿದ್ದ, ಭಾನುವಾರ ಬೆಂಗಳೂರಿನಲ್ಲಿ ಸಂಬಂಧಿಕರ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಅಕ್ಕ ಮತ್ತು ತಾಯಿ ತೆರಳಿದ್ದ ವೇಳೆ ಭರತ್ ಕುಮಾರ್ ಮನೆಯಲ್ಲಿ ನೇಣು ಬಿಗಿದು ಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಾವಿಗೂ ಮುನ್ನ ಡೆತ್ ನೋಟ್ ಬರೆದಿರುವ ಭರತ್ ಕುಮಾರ್, ನನ್ನ ಸಾವಿಗೆ ಯಾರು ಕಾರಣರಲ್ಲ, ನನ್ನ ಸಾವಿಗೆ ನಾನೆ ಕಾರಣ, ನಾ ಸೋತವ (No one is Responsible for My Death. I am Solely Responsible I am a big failure) ಎಂದು ಬರೆದಿಟ್ಟಿದ್ದಾರೆ.

ಸ್ಥಳಕ್ಕೆ ದೊಡ್ಡಬಳ್ಳಾಪುರ ನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪ್ರಕರಣ ದಾಖಲಾಗಿದೆ.

Latest News

Shocking News: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಪುಟಾಣಿ ದುರ್ಮರಣ

Shocking News: ಬಿಸಿನೀರಿನ ಪಾತ್ರೆಗೆ ಬಿದ್ದು 2 ವರ್ಷದ ಪುಟಾಣಿ ದುರ್ಮರಣ

ಮೈಸೂರು: ರಾಜ್ಯದಲ್ಲಿ ಘೋರ ದುರಂತ ಎನ್ನುವಂತೆ ಬಿಸಿನೀರಿನ ಪಾತ್ರೆಗೆ ಬಿದ್ದು ಎರಡು ವರ್ಷದ ಮಗು

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಮುದ್ದೇಬಿಹಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ

ಸೂಕ್ತ ಸಮಯದಲ್ಲಿ ಹೈಕಮಾಂಡ್ ಕರೆ; ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

ಸೂಕ್ತ ಸಮಯದಲ್ಲಿ ಹೈಕಮಾಂಡ್ ಕರೆ; ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

ಬೆಂಗಳೂರು: “ನಮ್ಮ ಹೈಕಮಾಂಡ್ ನಾಯಕರು ಸಿಎಂ ಮತ್ತು ನನಗೆ ಇಬ್ಬರಿಗೂ ಏನೋ ಹೇಳಿದ್ದಾರೆ. ಸೂಕ್ತ

ಡಿ.24 ರಂದು ದಲಿತ ಚಳವಳಿಯ ನಾಯಕ ಡಿ.ಬಿ.ಮುದೂರ ನುಡಿನಮನ

ಡಿ.24 ರಂದು ದಲಿತ ಚಳವಳಿಯ ನಾಯಕ ಡಿ.ಬಿ.ಮುದೂರ ನುಡಿನಮನ

ಮುದ್ದೇಬಿಹಾಳ ; ಕರ್ನಾಟಕ ದಲಿತ ಸಂಘರ್ಷ ಸಮೀತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ ಅವರ

ಜಯ ಕರ್ನಾಟಕ ಸಂಘಟನೆಗೆ ಸಿಂಧೆ ನೇಮಕ

ಜಯ ಕರ್ನಾಟಕ ಸಂಘಟನೆಗೆ ಸಿಂಧೆ ನೇಮಕ

ಮುದ್ದೇಬಿಹಾಳ : ಪಟ್ಟಣದ ನಿವಾಸಿ ಪರಶುರಾಮ ಸಿಂಧೆ ಅವರನ್ನು ಜಯ ಕರ್ನಾಟಕ ಸಂಘಟನೆಯ ವಿಜಯಪುರ ಜಿಲ್ಲಾ ಸಂಘಟನಾ ಕಾರ್ಯದರ್ಶಿಯನ್ನಾಗಿ ನೇಮಿಸಲಾಗಿದೆ ಎಂದು ಜಿಲ್ಲಾಧ್ಯಕ್ಷ ಸಂಗಮೇಶಗೌಡ ದಾಶ್ಯಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಹುಲುಸಾದ ಪೈರು: ಸಂಭ್ರಮದ ಚರಗ ಚೆಲ್ಲಿದ ರೈತರು

ಹುಲುಸಾದ ಪೈರು: ಸಂಭ್ರಮದ ಚರಗ ಚೆಲ್ಲಿದ ರೈತರು

ಮುದ್ದೇಬಿಹಾಳ : ಎಳ್ಳ ಅಮವಾಸ್ಯೆಯ ನಿಮಿತ್ಯ ಶುಕ್ರವಾರ ತಾಲ್ಲೂಕಿನೆಲ್ಲೆಡೆ ರೈತರು ಸಂಭ್ರಮದಿAದ ಚರಗ ಚೆಲ್ಲಿದರು. ಬೆಳಗ್ಗೆಯಿಂದಲೇ ಚಕ್ಕಡಿ,ಟ್ರಾö್ಯಕ್ಟರ್, ಜೀಪು,ಕಾರು,ಬೈಕುಗಳಲ್ಲಿ ತಮ್ಮ ಹೊಲಗಳಿಗೆ ತೆರಳಿದ ರೈತರು ಭೂಮಿ ತಾಯಿಗೆ ಪೂಜೆ ಸಲ್ಲಿಸಿದರು.ಬಳಿಕ ವಿವಿಧ ಖಾದ್ಯಗಳನ್ನು ಚರಗದೂಟದಲ್ಲಿ ಸವಿದರು.ಜೋಳ,ಕಡಲೆ,ಕಬ್ಬು,ಸೂರ್ಯಕಾಂತಿ ಬೆಳೆಗಳು ಹೊಲದಲ್ಲಿದ್ದು ರೈತರು ತುಸು ಮಂದಹಾಸದಿAದ ಈ ವರ್ಷದ ಚರಗ ಚೆಲ್ಲಿದರು. ಮುದ್ದೇಬಿಹಾಳ ತಾಲ್ಲೂಕಿನ ಗೆದ್ದಲಮರಿಯ ರೈತ ಮಹದೇವಪ್ಪ ಕನ್ನೂರ ಅವರ ಹೊಲದಲ್ಲಿ ಅವರ ಸ್ನೇಹಿತರು, ಚರಗ ಚೆಲ್ಲಿದರು.ಪೊಲೀಸ್ ಇಲಾಖೆಯ ಪ್ರಕಾಶ ಪೂಜಾರಿ,