Brother murder Brother Murder: Stones, sticks for property; Anna's death in Gowribidanooru

Brother Murder: ಆಸ್ತಿಗಾಗಿ ಕಲ್ಲು, ದೊಣ್ಣೆಗಳಿಂದ ಬಡಿದಾಟ; ಅಣ್ಣನ ದುರ್ಮರಣ..!

Brother Murder: ಆಸ್ತಿಗಾಗಿ ಕಲ್ಲು, ದೊಣ್ಣೆಗಳಿಂದ ಬಡಿದಾಟ; ಅಣ್ಣನ ದುರ್ಮರಣ..!

ಗೌರಿಬಿದನೂರು: ಪೀತ್ರಾರ್ಜಿತ ಆಸ್ತಿ ವಿಚಾರದಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ (Brother Murder) ಘಟನೆ ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನಡುವಲಹಳ್ಳಿಯಲ್ಲಿ ಸಂಭವಿಸಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾಲನ್ ಗೆ ಸೇರಿಕೊಳ್ಳಿ.. https://t.me/dcgkannada

ನಡುವಲಹಳ್ಳಿ ಗ್ರಾಮ ನಂಜುಂಡಯ್ಯ ಹಾಗೂ ರಾಮಾಂಜಿನಪ್ಪ ನವರ ಆಸ್ತಿ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ದೊಣ್ಣೆ, ಕಲ್ಲುಗಳಿಂದ ಬಡೆದುಕೊಳ್ಳುವ ವಾತಾವರಣ ನಿರ್ಮಾಣವಾಗಿದೆ.

ಇದೇ ವೇಳೆ ತಮ್ಮ‌ನ ಮಕ್ಕಳು ದೊಡ್ಡಪ್ಪನ ಮೇಲೆ ವಿಕೋಪಕ್ಕೆ ಹೋಗಿದ್ದು ತಮ್ಮ ಹಾಗೂ ತಮ್ಮನ ಮಕ್ಕಳು ಸೇರಿ ಕಲ್ಲು, ದೊಣ್ಣೆಗಳಿಂದ ಅಣ್ಣ ನಂಜುಂಡಪ್ಪನ ಮೇಲೆ ದಾಳಿ ಮಾಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡ 55 ವರ್ಷದ ನಂಜುಂಡಪ್ಪನನ್ನು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗಿನ ಜಾವ ನಂಜುಂಡಪ್ಪ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉದ್ಯೋಗ ಸಿಗದ ಹತಾಶೆ; ಯುವಕ ಆತ್ಮಹತ್ಯೆ..! “I am a big failure” ಎಂದು ಡೆತ್ ನೋಟ್

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಿಪಿಐ, ಪಿಎಸೈ ಸೇರಿದಂತೆ ಇತರರು ‌ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

Latest News

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಡಿ.21 ರಂದು ರಾಷ್ಟೀಯ ಪಲ್ಸ್ ಪೋಲಿಯೋ : ವಿದ್ಯಾರ್ಥಿಗಳಿಂದ ಜಾಥಾ

ಮುದ್ದೇಬಿಹಾಳ : ಪ್ರಾಥಮಿಕ ಆರೋಗ್ಯ ಕೇಂದ್ರ ಗರಸಂಗಿ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ

ಸೂಕ್ತ ಸಮಯದಲ್ಲಿ ಹೈಕಮಾಂಡ್ ಕರೆ; ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

ಸೂಕ್ತ ಸಮಯದಲ್ಲಿ ಹೈಕಮಾಂಡ್ ಕರೆ; ಡಿಸಿಎಂ ಡಿ.ಕೆ. ಶಿವಕುಮಾರ್ ಸ್ಫೋಟಕ ಹೇಳಿಕೆ

ಬೆಂಗಳೂರು: “ನಮ್ಮ ಹೈಕಮಾಂಡ್ ನಾಯಕರು ಸಿಎಂ ಮತ್ತು ನನಗೆ ಇಬ್ಬರಿಗೂ ಏನೋ ಹೇಳಿದ್ದಾರೆ. ಸೂಕ್ತ

ಡಿ.24 ರಂದು ದಲಿತ ಚಳವಳಿಯ ನಾಯಕ ಡಿ.ಬಿ.ಮುದೂರ ನುಡಿನಮನ

ಡಿ.24 ರಂದು ದಲಿತ ಚಳವಳಿಯ ನಾಯಕ ಡಿ.ಬಿ.ಮುದೂರ ನುಡಿನಮನ

ಮುದ್ದೇಬಿಹಾಳ ; ಕರ್ನಾಟಕ ದಲಿತ ಸಂಘರ್ಷ ಸಮೀತಿ ರಾಜ್ಯ ಸಂಘಟನಾ ಸಂಚಾಲಕ ಡಿ.ಬಿ.ಮುದೂರ ಅವರ

BREAKING : ಟಿ20 ವಿಶ್ವಕಪ್ ಗೆ ‘ಟೀಂ ಇಂಡಿಯಾ’ ಪ್ರಕಟ, ಶುಭಮನ್’ಗಿಲ್ ಔಟ್ (India T20 World Cup)

BREAKING : ಟಿ20 ವಿಶ್ವಕಪ್ ಗೆ ‘ಟೀಂ ಇಂಡಿಯಾ’ ಪ್ರಕಟ, ಶುಭಮನ್’ಗಿಲ್ ಔಟ್ (India T20 World Cup)

ನವದೆಹಲಿ : ಟಿ20 ವಿಶ್ವಕಪ್ ಗೆ ಟೀಂ ಇಂಡಿಯಾ ಪ್ರಕಟವಾಗಿದ್ದು, ಶುಭಮನ್ ಗಿಲ್ ತಂಡದಿಂದ

ಹುಲುಸಾದ ಪೈರು: ಸಂಭ್ರಮದ ಚರಗ ಚೆಲ್ಲಿದ ರೈತರು

ಹುಲುಸಾದ ಪೈರು: ಸಂಭ್ರಮದ ಚರಗ ಚೆಲ್ಲಿದ ರೈತರು

ಮುದ್ದೇಬಿಹಾಳ : ಎಳ್ಳ ಅಮವಾಸ್ಯೆಯ ನಿಮಿತ್ಯ ಶುಕ್ರವಾರ ತಾಲ್ಲೂಕಿನೆಲ್ಲೆಡೆ ರೈತರು ಸಂಭ್ರಮದಿAದ ಚರಗ ಚೆಲ್ಲಿದರು. ಬೆಳಗ್ಗೆಯಿಂದಲೇ ಚಕ್ಕಡಿ,ಟ್ರಾö್ಯಕ್ಟರ್, ಜೀಪು,ಕಾರು,ಬೈಕುಗಳಲ್ಲಿ ತಮ್ಮ ಹೊಲಗಳಿಗೆ ತೆರಳಿದ ರೈತರು ಭೂಮಿ ತಾಯಿಗೆ ಪೂಜೆ ಸಲ್ಲಿಸಿದರು.ಬಳಿಕ ವಿವಿಧ ಖಾದ್ಯಗಳನ್ನು ಚರಗದೂಟದಲ್ಲಿ ಸವಿದರು.ಜೋಳ,ಕಡಲೆ,ಕಬ್ಬು,ಸೂರ್ಯಕಾಂತಿ ಬೆಳೆಗಳು ಹೊಲದಲ್ಲಿದ್ದು ರೈತರು ತುಸು ಮಂದಹಾಸದಿAದ ಈ ವರ್ಷದ ಚರಗ ಚೆಲ್ಲಿದರು. ಮುದ್ದೇಬಿಹಾಳ ತಾಲ್ಲೂಕಿನ ಗೆದ್ದಲಮರಿಯ ರೈತ ಮಹದೇವಪ್ಪ ಕನ್ನೂರ ಅವರ ಹೊಲದಲ್ಲಿ ಅವರ ಸ್ನೇಹಿತರು, ಚರಗ ಚೆಲ್ಲಿದರು.ಪೊಲೀಸ್ ಇಲಾಖೆಯ ಪ್ರಕಾಶ ಪೂಜಾರಿ,

ಗೊಂದಲದ ಗೂಡಾದ ಮಲಗಲದಿನ್ನಿ ವಾರ್ಡ ಸಭೆ.

ನಾಲತವಾಡ. ಗ್ರಾಮದಲ್ಲಿ ಎಲ್ಲೆಂದರಲ್ಲಿ ಅನೈರ್ಮಲ್ಯ ತಾಂಡವವಾಡುತ್ತಿದೆ, ಹದಗೆಟ್ಟ ರಸ್ತೆಗಳಲ್ಲಿ ನಿತ್ಯ ಗಲೀಜು ನೀರು ಹರಿದು ಸೊಳ್ಳೆಗಳ ಕಾಟ ಹೆಚ್ಚಾಗುತ್ತಿದೆ, ರಾತ್ರಿ ನಿದ್ರೆಗೆಡುವಂತಾಗಿದೆ, ಚರಂಡಿಗಳ ಸ್ವಚ್ಚತೆಯಿಲ್ಲ, ಕಪ್ಪೆ ಜಂಡಿನ ನೀರಲ್ಲೇ ಮಹಿಳೆಯರು ಬಟ್ಟೆ ತೊಳೆಯುತ್ತಿದ್ದಾರೆ ಮೊದಲು ಸ್ವಚ್ಚತೆಗೆ ಆದ್ಯತೆ ಕೊಡಿ ಎಂದ ನಾಗರಬೆಟ್ಟ ಗ್ರಾ.ಪಂ ವ್ಯಾಪ್ತಿಯ ಮಲಗಲದಿನ್ನಿ ಗ್ರಾಮದ ವಾರ್ಡ ಸಭೆಯಲ್ಲಿ ಸೇರಿದ್ದ ಸಾರ್ವಜನೀಕರು ಅಧಿಕಾರಿಗಳನ್ನು ತರಾಟೆಗೆ ತಗೆದುಕೊಂಡ ಘಟನೆ ನಡೆಯಿತು. ಮಲಗಲದಿನ್ನಿ ಸಭೆಯಲ್ಲಿ ಪಿಡಿಓ ಮತ್ತು ಸಾರ್ವಜನೀಕರೊಂದಿಗೆ ನಡೆದ ವಾದ