ಇನ್ಸ್ಟಾ ಪ್ರೀಮಿಯಿಂದ ಗಂಡನ ಹತ್ಯೆ! 2 ವರ್ಷದ ಪಾಪು ಅನಾಥ

ಇನ್ಸ್ಟಾ ಪ್ರೀಮಿಯಿಂದ ಗಂಡನ ಹತ್ಯೆ! 2 ವರ್ಷದ ಪಾಪು ಅನಾಥ

ಕೊರಟಗೆರೆ: ಗಂಡನನ್ನು ಬಿಟ್ಟು ಗುಂಡನ ಹಿಂದೆ ಹೋದವಳ ಕಥೆಯಲ್ಲಿ ಈಗ ಕೊರಟಗೆರೆ ಪೊಲೀಸರ ತನಿಖೆಯಲ್ಲಿ ಬೀಗ್‌ ಟ್ವಿಸ್ಟ್ ಸಿಕ್ಕಿದೆ.

3ಜನ ಆರೋಪಿಗಳ ಮೇಲೆ ಪ್ರಥಮವಾಗಿ ಪ್ರಕರಣ ದಾಖಲಿಸಿದ್ದ ಪೊಲೀಸರು ಮತ್ತೇ ತನಿಖೆ ಚುರುಕು ಮಾಡಿದಾಗ ಬರೋಬ್ಬರಿ 6ಜನ ಆರೋಪಿಗಳು ಪೊಲೀಸರ ಅತಿಥಿಗಳಾಗಿ ಜೈಲೂಟ ಮಾಡಲು ಸಿದ್ದರಾಗಿದ್ದಾರೆ.

ಕೊರಟಗೆರೆ ತಾಲೂಕು ಕಸಬಾ ಹೋಬಳಿ ತುಂಬಾಡಿ-ಸಿದ್ದರಬೆಟ್ಟದ ಮಾರ್ಗದ ಕೆಪಿಟಿಸಿಎಲ್ ಘಟಕದ ಬಳಿ ಜು.28ರ ಭಾನುವಾರ ರಾತ್ರಿ 8ಗಂಟೆಯ ವೇಳೆಯಲ್ಲಿ ಪ್ರಕಾಶನ ಹತ್ಯೆಯಾಗಿತ್ತು.

ಘಟನೆಗೆ ಸಂಬಂಧ ತನಿಖೆ ಚುರುಕುಗೊಳಿಸಿದ ಕೊರಟಗೆರೆ ಪೊಲೀಸರಿಗೆ ಹೆಂಡತಿಯ ಪಾತ್ರದ ಜೊತೆ ಹಳೇ ಪ್ರೇಮಿಯ ಕೈವಾಡ ಸೇರಿ 6ಜನ ಆರೋಪಿಗಳ ಹೆಡೆಮುರಿ ಕಟ್ಟುವಲ್ಲಿ ಪೊಲೀಸರ ತಂಡ ಯಶಸ್ವಿ ಆಗಿದ್ದಾರೆ.

ಅಂಚೆಕಚೇರಿಯ ಸಿಬ್ಬಂದಿ ಮೃತ ಪ್ರಕಾಶದ ಕೊಲೆಯ ಪ್ರಕರಣದಲ್ಲಿ ಬೆಂಗಳೂರಿನ ಗೋವಿಂದರಾಜು(36 ವರ್ಷ), ಮಲ್ಲೇಕಾವಿನ ಹರ್ಷುತಾ (28 ವರ್ಷ), ಸೋಮಶೇಖರ್ (37 ವರ್ಷ), ಮಹೇಶ್(32), ಕಂಬದಹಳ್ಳಿಯ ದರ್ಶನ್(24), ಬಾಗೂರು ರಂಗಸ್ವಾಮಿ ಎಂಬ 6ಜನ ಆರೋಪಿಗಳು ಈಗ ಕೊರಟಗೆರೆ ಪೊಲೀಸರ ಅತಿಥಿಗಳಾಗಿದ್ದು, ತನಿಖೆ ಇನ್ನಷ್ಟು ಚುರುಕುಗೊಂಡಿದೆ.

ಅನಾಥವಾದ 2ವರ್ಷದ ಗಂಡು ಮಗು: ಗುಲ್ಬರ್ಗಾ ಜಿಲ್ಲೆಯ ಚಿಂಚುಲ್ಲಿ ಗ್ರಾಮದ ಮೃತ ಪ್ರಕಾಶನಿಗೆ ಇದೇ ಇನ್ಸ್‌ಸ್ಟಾಗ್ರಾಂ ಮೂಲಕ ಪರಿಚಯವಾದ ಮಲ್ಲೇಕಾವಿನ ಆರೋಪಿ ಹರ್ಷಿತಾ ಜೊತೆ ಮದುವೆಯಾಗಿ 3ವರ್ಷವಾಗಿ 2ವರ್ಷದ ಗಂಡು ಮಗುವಿದೆ.

ಕಳೆದ 3 ತಿಂಗಳ ಹಿಂದೆಯಷ್ಟೇ ಹರ್ಷಿತಾ ಗೋವಿಂರಾಜು ಅಲಿಯಾಸ್ ಗುಂಡನ ಜೊತೆ ಮನೆ-ಗಂಡ ಮತ್ತು ಮಗು ಬಿಟ್ಟು ಓಡಿಹೋಗಿದ್ದಳು. ಗಂಡನ ದೂರಿನ ಬಳಿಕ ಪೊಲೀಸರ ಮೂಲಕ ರಾಜಿಸಂಧಾನ ಆಗಿತ್ತು.

ಗುಂಡನ ಸಹವಾಸದಿಂದ ಗಂಡನ ಪ್ರಾಣವನ್ನೇ ತೆಗೆಯುವ ನಿರ್ದಾರಕ್ಕೆ ಬಂದ ಹರ್ಷಿತ ಜೈಲುಪಾಲಾಗಿ 2ವರ್ಷದ ಗಂಡುಮಗು ಅನಾಥವಾಗಿದೆ.

ಸ್ಥಳಕ್ಕೆ ತುಮಕೂರು ಎಸ್ಪಿ ಅಶೋಕ್, ಮಧುಗಿರಿ ಡಿವೈಎಸ್ಪಿ ರಾಮಕೃಷ್ಣಯ್ಯ ಮಾರ್ಗದರ್ಶನದಲ್ಲಿ ಕೊರಟಗೆರೆ ಸಿಪಿಐ ಅನಿಲ್, ಪಿಎಸೈಗಳಾದ ಚೇತನಗೌಡ, ಯೊಗೀಶ್, ಎಎಸೈ ಮಂಜುನಾಥ ೬ಜನ ಆರೋಪಿಗಳನ್ನು ಕೊಲೆಯಾದ 24ಗಂಟೆಯೊಳಗೆ ಅರೆಸ್ಟ್ ಮಾಡಿದ್ದಾರೆ.

ಕೊರಟಗೆರೆ ಪೊಲೀಸ್ ಠಾಣೆಯಲ್ಲಿ 6ಜನ ಆರೋಪಿಗಳ ಮೇಲೆ ಪ್ರಕರಣ ದಾಖಲಾಗಿದೆ.

Latest News

ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ನಿರ್ಲಕ್ಷ : ರೈತರ ಆಕ್ರೋಶ

ಕೆ.ಬಿ.ಜೆ.ಎನ್.ಎಲ್ ಅಧಿಕಾರಿಗಳ ನಿರ್ಲಕ್ಷ : ರೈತರ ಆಕ್ರೋಶ

ಮುದ್ದೇಬಿಹಾಳ : ಕೆಬಿಜೆಎನ್‌ಎಲ್ ಅಡಿ ನಿರ್ಮಿಸಲಾದ ಕಾಲುವೆ ಸಂಖ್ಯೆ 16ಎ- ಲ್ಯಾಟರಲ್ ನಂ.2 ಕಾಲುವೆ

ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ-ಸಿ.ಎಸ್.ನಾಡಗೌಡ

ಸರ್ಕಾರಿ ಶಾಲೆಗಳಲ್ಲೇ ಗುಣಮಟ್ಟದ ಶಿಕ್ಷಣ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಖಾಸಗಿ ಶಾಲೆಗಳಲ್ಲಿ ಉತ್ತಮ ಶಿಕ್ಷಣ ದೊರೆಯುತ್ತದೆ ಎಂಬ ಪಾಲಕರಲ್ಲಿರುವ ಅಭಿಪ್ರಾಯ ಸರಿಯಲ್ಲ.ಸರ್ಕಾರಿ

ಕ್ರೀಡಾಸ್ಫೂರ್ತಿಯಿಂದ ಆಟವಾಡಿ-ಶಾಸಕ ನಾಡಗೌಡ

ಕ್ರೀಡಾಸ್ಫೂರ್ತಿಯಿಂದ ಆಟವಾಡಿ-ಶಾಸಕ ನಾಡಗೌಡ

ಮುದ್ದೇಬಿಹಾಳ : ಬಿಸಿಲಿನ ತೀವ್ರತೆಯ ಮಧ್ಯೆ ಆರಂಭಗೊAಡಿರುವ ಹಾರ್ಡ ಟೆನ್ನಿಸ್‌ಬಾಲ್ ಕ್ರಿಕೇಟ್ ಟೂರ್ನಾಮೆಂಟ್‌ನಲ್ಲಿ ಪಾಲ್ಗೊಳ್ಳುವ

ಮೇ.3 ರಂದು ಮುದ್ದೇಬಿಹಾಳದಲ್ಲಿ ಬೃಹತ್ ಉದ್ಯೋಗಮೇಳ

ಮೇ.3 ರಂದು ಮುದ್ದೇಬಿಹಾಳದಲ್ಲಿ ಬೃಹತ್ ಉದ್ಯೋಗಮೇಳ

ಮುದ್ದೇಬಿಹಾಳ : ಬಿಎಎಸ್ ಸ್ಟಾಫಿಂಗ್ ಸಲೂಷನ್ಸ್ ಪ್ರೆöÊವೆಟ್ ಲಿಮಿಟೆಡ್ ಕಂಪನಿಯಿoದ ಮೇ.3 ರಂದು ಮುದ್ದೇಬಿಹಾಳದಲ್ಲಿ

ಉತ್ತಮ ಕಾರ್ಯನಿರ್ವಹಣೆ :                                              KRIDL ಇಇ ಆನಂದಸ್ವಾಮಿ ಅವರಿಗೆ ಪ್ರಶಸ್ತಿ

ಉತ್ತಮ ಕಾರ್ಯನಿರ್ವಹಣೆ : KRIDL ಇಇ ಆನಂದಸ್ವಾಮಿ ಅವರಿಗೆ ಪ್ರಶಸ್ತಿ

ಮುದ್ದೇಬಿಹಾಳ : ವಿಜಯಪುರದ ಕೆ.ಆರ್.ಐ.ಡಿ.ಎಲ್ ಇಲಾಖೆಯ ಇಇ ಆನಂದಸ್ವಾಮಿ ಅವರು ಇಲಾಖೆಯಲ್ಲಿ ಸಲ್ಲಿಸುತ್ತಿರುವ ಉತ್ತಮ ಕಾರ್ಯನಿರ್ವಹಣೆಗಾಗಿ ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಿಷಿ ಆನಂದ ಅವರು ಪ್ರಶಸ್ತಿ ನೀಡಿ ಗೌರವಿಸಿದರು.ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಿಂದ ಹಮ್ಮಿಕೊಂಡಿದ್ದ ರಾಷ್ಟಿçÃಯ ಪಂಚಾಯತರಾಜ್ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಯಿತು. ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ ವಡ್ಡರ, ಮುಖ್ಯಲೆಕ್ಕಾಧಿಕಾರಿ ರಾಮಣ್ಣ ಅಥಣಿ, ಯೋಜನಾಧಿಕಾರಿ ಚಂದ್ರಕಾAತ ಕುಂಬಾರ ಮೊದಲಾದವರು ಇದ್ದರು.

ತೆರಿಗೆ ವಸೂಲಾತಿಯಲ್ಲಿ ಸಾಧನೆ: ಆಲೂರು ಗ್ರಾ.ಪಂಗೆ ಪ್ರಶಸ್ತಿ ಪ್ರದಾನ

ತೆರಿಗೆ ವಸೂಲಾತಿಯಲ್ಲಿ ಸಾಧನೆ: ಆಲೂರು ಗ್ರಾ.ಪಂಗೆ ಪ್ರಶಸ್ತಿ ಪ್ರದಾನ

ನಾಲತವಾಡ : ತೆರಿಗೆ ವಸೂಲಾತಿಯಲ್ಲಿ ವಿಜಯಪುರ ಜಿಲ್ಲೆಗೆ ಮೂರನೇ ಸ್ಥಾನ ಪಡೆದುಕೊಂಡ ಹಿನ್ನೆಲೆಯಲ್ಲಿ ಮುದ್ದೇಬಿಹಾಳ ತಾಲ್ಲೂಕಿನ ಆಲೂರು ಗ್ರಾಮ ಪಂಚಾಯಿತಿಗೆ ಸನ್ 2025-26 ಸಾಲಿನ ಪ್ರಶಸ್ತಿ ಪ್ರದಾನ ಮಾಡಲಾಯಿತು. ವಿಜಯಪುರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಷ್ಟಿçÃಯ ಪಂಚಾಯತ್ ದಿನಾಚರಣೆ ಕಾರ್ಯಕ್ರಮದಲ್ಲಿ ಜಿಪಂ ಸಿಇಒ ರಿಷಿ ಆನಂದ ಅವರು ಆಲೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಾಜು ಆರ್.ನಾರಾಯಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಈ ಸಂದರ್ಭದಲ್ಲಿ ಜಿಪಂ ಉಪ ಕಾರ್ಯದರ್ಶಿ ಪ್ರಕಾಶ