
ಮುಧೋಳ : ನಗರದ ಡಾ.ಬಿ.ಆರ್. ಅಂಬೇಡ್ಕರ್ ಹಾಗೂ ಡಾ. ಬಾಬು ಜಗಜೀವನರಾಂ ಭವನದಲ್ಲಿ ಭಾನುವಾರ ಬೆಳಗ್ಗೆ 11ಗಂಟೆಗೆ
ಅಂಗವಾಗಿ ತಾಲೂಕು ಘಟಕದ ಆಶ್ರಯದಲ್ಲಿ ವಿಚಾರ ಸಂಕಿರಣ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಮೀಸಲಾತಿ ಜನಕ ಛತ್ರಪತಿ ಶಾಹೂ ಮಹಾರಾಜ ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಹಿನ್ನೆಲೆ ಮೀಸಲಾತಿ-ಇತಿಹಾಸ ವರ್ತಮಾನ ಮತ್ತು ಭವಿಷ್ಯ ವಿಷಯವಾಗಿ ನಡೆಯುವ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಜಿಲ್ಲಾ ಉಸ್ತುವಾರಿ ಸಚಿವ ಆರ್.ಬಿ. ತಿಮ್ಮಾಪುರ ಅವರು ಕಾರ್ಯಕ್ರಮ ಉದ್ಘಾಟಿಸುವರು. ಮರಾಠಾ ಸಮಾಜದ ಮುಖಂಡ ಬಸವಂತ ಕಾಟೆ ಅಧ್ಯಕ್ಷತೆ ವಹಿಸುವರು, ಸತ್ಯಶೋಧಕ ಸಂಘದ ರಾಜ್ಯಾಧ್ಯಕ್ಷ ಪರಶುರಾಮ ಮಹಾರಾಜನವರ ಉಪನ್ಯಾಸ ನೀಡುವರು.
ತಹಸೀಲ್ದಾರ್ ಮಹಾದೇವ ಸಣಮುರಿ, ನಗರಸಭೆ ಪೌರಾಯುಕ್ತ ಗೋಪಾಲ ಕಾಸೆ, ನ್ಯಾಯವಾದಿ ಉದಯಸಿಂಗ್ ಪಡತಾರೆ, ಮರಾಠಾ ಸಮಾಜದ ಮುಖಂಡ ಮಾರುತಿ ಮಾನೆ, ಮುಸ್ಲಿಂ ಸಮುದಾಯದ ಮುಖಂಡರಾದ ಅಮೀನಸಾಬ ಬೇಪಾರಿ, ರಾಜು ಬಾಗವಾನ, ಹಿಂದುಳಿದ ವರ್ಗಗಳ ಜಿಲ್ಲಾ ಮುಖಂಡ ಮುದಕಣ್ಣ ಅಂಬಿಗೇರ, ಆರ್.ಬಾಲರಾಜ, ಮುಖಂಡರಾದ ಗೋವಿಂದ ಕೌಲಗಿ, ಎಂ.ಬಿ. ಚಿಕ್ಕೂರ, ವಿ.ಎಸ್.ದೊಡಮನಿ, ಪಿ.ಎಸ್.ಕರೇಣಿ ಸೇರಿದಂತೆ ಇತರರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
