ಮುದ್ದೇಬಿಹಾಳ : ಗ್ರಾಮ ಆಡಳಿತ ಅಧಿಕಾರಿ ಹುದ್ದೆಯ ನೇರ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಅಕ್ರಮ ತಡೆಯಲು (Otoscope) ಓಟೋಸ್ಕೋಪ್ ಮೂಲಕ (ಟಾರ್ಚ್ ಹಾಕಿ) ಅಭ್ಯರ್ಥಿಗಳ ಶ್ರವಣೇಂದ್ರಿಯಗಳನ್ನು ಕೂಲಂಕಷವಾಗಿ ಪರೀಕ್ಷಿಸಲಾಯಿತು.
ಮುದ್ದೇಬಿಹಾಳದ ಅಭ್ಯುದಯ, ಎಸ್.ಎಸ್.ಶಿವಾಚಾರ್ಯ, ಶಾ ಎಸ್.ಪಿ.ಓಸ್ವಾಲ್ ಪ್ರಥಮ ದರ್ಜೆ ಕಾಲೇಜು, ನಾಗರಬೆಟ್ಟದ ಎಕ್ಸಪರ್ಟ್ ಸೈನ್ಸ್ ಕಾಲೇಜು, ಆಕ್ಸ್‌ಫರ್ಡ್ ಪಾಟೀಲ್ಸ್ ಆಂಗ್ಲ ಮಾಧ್ಯಮ ಪ್ರೌಢಶಾಲೆ, ನಾಗರಬೆಟ್ಟದ ಪಿಯು ಸೈನ್ಸ್ ಕಾಲೇಜು, ಎಂ.ಜಿ.ಎಂ.ಕೆ, ಜ್ಞಾನಭಾರತಿ, ಪದವಿ ಪೂರ್ವ ಕಾಲೇಜಿನಲ್ಲಿ ಪರೀಕ್ಷಾ ಕೇಂದ್ರ ನಡೆಸಲಾಯಿತು.
ಯಾವುದೇ ವಿದ್ಯುನ್ಮಾನ ಯಂತ್ರಗಳಾದ ಬ್ಲೂಟೂತ್ ಹಾಗೂ ಇಯರ್-ಫೋನ್‌ಗಳನ್ನು ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಲು ತಾಲೂಕಿನ ಪರೀಕ್ಷಾ ಕೇಂದ್ರಗಳಲ್ಲಿ ತಜ್ಞ ವೈದ್ಯರು, ಶ್ರವಣಶಾಸ್ತ್ರಜ್ಞರು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಿದರು.
ತಾಲೂಕಾ ಆರೋಗ್ಯ ಅಧಿಕಾರಿಗಳಾದ ಡಾ. ಸತೀಶ ತಿವಾರಿ , ನಗರ ಆರೋಗ್ಯ ನಿರೀಕ್ಷಣಾಧಿಕಾರಿ ಎಂ ಎಸ್ ಗೌಡರ, ಪಿಎಸ್ ಐ ಸಂಜಯ ತಿಪರಡ್ಡಿ ಸೇರಿದಂತೆ ಪರೀಕ್ಷಾ ಕೇಂದ್ರಗಳಲ್ಲಿ ಅಕ್ರಮ ನಡೆಯದಂತೆ ನೋಡಿಕೊಂಡರು.
ಒಟ್ಟು 3532 ಅಭ್ಯರ್ಥಿಗಳು ಮುದ್ದೇಬಿಹಾಳದಲ್ಲಿ ಪರೀಕ್ಷೆ ಬರೆದರು ಎಂದು ಸರ್ಕಾರ. ಪಪೂ ಕಾಲೇಜು ಪ್ರಾಚಾರ್ಯ ಎಸ್.ಎಸ್.ಅಂಗಡಿ ತಿಳಿಸಿದ್ದಾರೆ.
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ಪರೀಕ್ಷೆ : ಅಭ್ಯರ್ಥಿಗಳ ಕಿವಿಗಳ ತಪಾಸಣೆಗೆ ಓಟೋಸ್ಕೋಪ್ ಬಳಕೆ..
ಗ್ರಾಮ ಆಡಳಿತ ಅಧಿಕಾರಿಗಳ ಹುದ್ದೆಗೆ ಪರೀಕ್ಷೆ : ಅಭ್ಯರ್ಥಿಗಳ ಕಿವಿಗಳ ತಪಾಸಣೆಗೆ ಓಟೋಸ್ಕೋಪ್ ಬಳಕೆ..
Latest News
ಗುಡಿಮನಿಗೆ ಕರ್ನಾಟಕ ವಾಲ್ಮೀಕಿ ರತ್ನ ಪ್ರಶಸ್ತಿ
ಮುದ್ದೇಬಿಹಾಳ : ತಾಲ್ಲೂಕಿನ ಢವಳಗಿ ಗ್ರಾಮ ಪಂಚಾಯಿತಿ ನೌಕರ ಎಂ.ಕೆ.ಗುಡಿಮನಿ ಅವರಿಗೆ 2025ನೇ ಸಾಲಿನ
ಆಕ್ಸಫರ್ಡ್ ಪಾಟೀಲ್ಸ್ ಕಾಲೇಜಿನಲ್ಲಿ ಸನ್ಮಾನ ಕಾರ್ಯಕ್ರಮ: 2026ಕ್ಕೆ 200 ಮೆಡಿಕಲ್ ಸೀಟು ಆಯ್ಕೆಯ ಗುರಿ-ಅಮೀತಗೌಡ ಪಾಟೀಲ್
ಮುದ್ದೇಬಿಹಾಳ : ಉತ್ತರ ಕರ್ನಾಟಕ ಭಾಗದಲ್ಲಿ ಅತೀ ಹೆಚ್ಚು ಮೆಡಿಕಲ್ ಸೀಟುಗಳನ್ನು ಪಡೆದುಕೊಳ್ಳುವಲ್ಲಿ ಹಿರಿಮೆ
ಘತ್ತರಗಿ ಭಾಗ್ಯವಂತಿಯ 23ನೇ ವರ್ಷದ ಪಾದಯಾತ್ರೆ ಆರಂಭ
ಮಾರನಾಳ : ಯಾದಗಿರಿ ಜಿಲ್ಲೆಯ ಹುಣಸಗಿ ತಾಲ್ಲೂಕಿನ ಮಾರನಾಳದಿಂದ ಶ್ರೀ ಘತ್ತರಗಿ ಭಾಗ್ಯವಂತಿಯವರೆಗೆ ಪಾದಯಾತ್ರೆಯನ್ನು
ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್ ಪ್ರದೀಪನ
ಮುದ್ದೇಬಿಹಾಳ : ತಾಲ್ಲೂಕಿನ ಯರಗಲ್ ಮದರಿ ಬಾಲಾಜಿ ಸಕ್ಕರೆ ಕಾರ್ಖಾನೆಯಲ್ಲಿ ಶುಕ್ರವಾರ ಬಾಯ್ಲರ್ ಪ್ರದೀಪನ
ಕಾರ್ಮಿಕರ ಕಿಟ್ ವಿತರಣೆಗೆ ಅರ್ಜಿ ಆಹ್ವಾನ
ಮುದ್ದೇಬಿಹಾಳ : ನೋಂದಾಯಿತ ಕಟ್ಟಡ ಕಾರ್ಮಿಕರಿಗೆ ಸುರಕ್ಷಾ ಕಿಟ್ (ಗೌಂಡಿ, ಎಲೆಕ್ಟ್ರಿಷಿಯನ್, ಕಾರಪೇಂಟರ್ ವೆಲ್ಡಿಂಗ್, ಪ್ಲಂಬರ್, ಪೇಂಟರ್) ವಿತರಿಸಲು ಕಾರ್ಮಿಕ ಇಲಾಖೆಯಿಂದ ಅರ್ಜಿ ಆಹ್ವಾನಿಸಲಾಗಿದೆ. ಕಾರ್ಮಿಕ ಇಲಾಖೆ ಹಾಗೂ ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಯಿಂದ ನೋಂದಣಿಯಾದ ಫಲಾನುಭವಿಗಳಿಗೆ ಸುರಕ್ಷಾ ಕಿಟ್ ವಿತರಿಸಲಾಗುವುದು. ಫಲಾನುಭವಿಗಳು ಚಾಲ್ತಿಯಲ್ಲಿರುವ ಕಾರ್ಮಿಕ ಗುರುತಿನ ಚೀಟಿ, ಆಧಾರ್ ಕಾರ್ಡ, ಬ್ಯಾಂಕ್ ಪಾಸ್ ಪುಸ್ತಕ, ಫಲಾನುಭವಿಯ ಎರಡು ಭಾವಚಿತ್ರ ಹಾಗೂ ದ್ವಿಪ್ರತಿಗಳಲ್ಲಿ ಅ.24ರೊಳಗೆ
ಋತುಚಕ್ರ ರಜೆ ನೀತಿ: ಕಾನೂನು ಆಯೋಗದ ಅಧ್ಯಕ್ಷರೊಂದಿಗೆ ಸಚಿವ ಸಂತೋಷ್ ಲಾಡ್ ಚರ್ಚೆ
ಬೆಂಗಳೂರು: ಋತುಚಕ್ರ ರಜೆ ನೀತಿ ಕುರಿತು, ಕಾರ್ಮಿಕ ಸಚಿವರಾದ ಸಂತೋಷ್ ಎಸ್ ಲಾಡ್ ಅವರು, ಕರ್ನಾಟಕ ಕಾನೂನು ಆಯೋಗದ ಅಧ್ಯಕ್ಷರಾದ ಅಶೋಕ್ ಬಿ ಹಿಂಚಿಗೇರಿ ಅವರೊಂದಿಗೆ, ಚರ್ಚೆ ನಡೆಸಿದರು. ಸಚಿವರ ಬೆಂಗಳೂರಿನ ಅಧಿಕೃತ ನಿವಾಸದಲ್ಲಿ ಈ ಭೇಟಿ ಮಾಡಲಾಯಿತು. ಋತುಚಕ್ರ ರಜೆ ನೀತಿಗೆ ಇತ್ತೀಚೆಗೆ ನಡೆದ ರಾಜ್ಯ ಸಚಿವ ಸಂಪುಟ ಅನುಮೋದನೆ ನೀಡಿದೆ. ಈ ನೀತಿಯನ್ವಯ ಖಾಸಗಿ ಮತ್ತು ಸರ್ಕಾರ ವಲಯಗಳಲ್ಲಿ ದುಡಿಯುವ ಉದ್ಯೋಗಸ್ಥ ಮಹಿಳೆಯರು ತಿಂಗಳಲ್ಲಿ ಒಂದು ದಿನ







