Accident News: ರಸ್ತೆ ಬದಿ ಟೀ ಕುಡಿಯುತ್ತಿದ್ದವರಿಗೆ ಲಾರಿ ಡಿಕ್ಕಿ.. ಓರ್ವ ಸ್ಥಳದಲ್ಲಿಯೇ ದುರ್ಮರಣ

Accident News: ರಸ್ತೆ ಬದಿ ಟೀ ಕುಡಿಯುತ್ತಿದ್ದವರಿಗೆ ಲಾರಿ ಡಿಕ್ಕಿ.. ಓರ್ವ ಸ್ಥಳದಲ್ಲಿಯೇ ದುರ್ಮರಣ

ದೊಡ್ಡಬಳ್ಳಾಪುರ: ರಸ್ತೆ ಬದಿ ಸ್ಕೂಟರ್ ನಿಲ್ಲಿಸಿ ಟೀ ಕುಡಿಯುತ್ತಿದ್ದವರಿಗೆ ಲಾರಿ ನಡುವೆ ಡಿಕ್ಕಿ ಹೊಡೆದ (Accident News) ಪರಿಣಾಮ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದು, ಇಬ್ಬರು ಗಂಭೀರ ಗಾಯಗೊಂಡಿವ ಘಟನೆ ಗೊಲ್ಲಹಳ್ಳಿ ಬಳಿ ನಡೆದಿದೆ.

ಇಂದು ಮುಂಜಾನೆ ದೊಡ್ಡಬಳ್ಳಾಪುರ ಗೌರಿಬಿದನೂರು ನಡುವಿನ ರಾಜ್ಯ ಹೆದ್ದಾರಿ ಗೊಲ್ಲಹಳ್ಳಿ ಬಳಿಯ ಟೀ ಅಂಗಡಿಯಲ್ಲಿ ಟೀ ಕುಡಿಯಲು ಸ್ಕೂಟರ್ ನಿಲ್ಲಿಸಿದ್ದ ವೇಳೆ, ಗೌರಿಬಿದನೂರು ಕಡೆಯಿಂದ ಬಂದ ಸಿಮೆಂಟ್ ಬಲ್ಕರ್ ಲಾರಿ ಏಕಾಏಕಿ ಡಿಕ್ಕಿ ಹೊಡೆದಿದೆ.

ಈ ವೇಳೆ ಸ್ಕೂಟರ್ ಬಳಿಯೇ ಇದ್ದ ಚಿಕ್ಕಬಳ್ಳಾಪುರ ಜಿಲ್ಲೆಯ ನಲ್ಲಾರೆಡ್ಡಿ ಪಲ್ಲಿ ಗ್ರಾಮದ ಬಾಬು 35 ವರ್ಷ ಎಂಬುವವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಉಳಿದಂತೆ ತಪ್ಪಸಿಹಳ್ಳಿ ನಿವಾಸು ಕಂಬಿ ನಾಗರಾಜ್, ಭದ್ರಾವತಿಯ ಅಜೀಜ್ ಎನ್ನುವವರಿಗೆ ತೀವ್ರಗಾಯಗಳಾಗಿವೆ.

ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Latest News

ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮ

ಕುಳಗೇರಿ ಕ್ರಾಸ್: ಸಮೀಪದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಸೋಮನಕೊಪ್ಪದಲ್ಲಿ ಸನ್ 2025-26ನೇ ಸಾಲಿನ

ಉತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ ಪುರಸ್ಕೃತ ಶಿವಕುಮಾರಗೆ ಸನ್ಮಾನ

ಉತ್ತಮ ಜಿಲ್ಲಾಧ್ಯಕ್ಷ ಪ್ರಶಸ್ತಿ ಪುರಸ್ಕೃತ ಶಿವಕುಮಾರಗೆ ಸನ್ಮಾನ

ಮುದ್ದೇಬಿಹಾಳ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರಾಜ್ಯ ಕರಾಟೆ ಶಿಕ್ಷಕರ ಸಂಘದಿಂದ ಕೊಡಮಾಡುವ ಉತ್ತಮ

ಬಸ್‌ಗೆ ಅಟೋ ಡಿಕ್ಕಿ: ಓರ್ವನಿಗೆ ಗಾಯ

ಬಸ್‌ಗೆ ಅಟೋ ಡಿಕ್ಕಿ: ಓರ್ವನಿಗೆ ಗಾಯ

ಮುದ್ದೇಬಿಹಾಳ : ಹಾಲು ಪೂರೈಸುವ ಗೂಡ್ಸ್ ವಾಹನವನ್ನು ಅಜಾಗರೂಕತೆಯಿಂದ ಚಲಾಯಿಸಿ ಬಸ್‌ಗೆ ಡಿಕ್ಕಿ ಹೊಡೆದ

ಗ್ರಾಮದೇವತೆ ಜಾತ್ರೆಗೆ ಕ್ಷಣಗಣನೆ: ಮದುವಣಗಿತ್ತಿಯಂತೆ ಶೃಂಗಾರಗೊಂಡ ಮುದ್ದೇಬಿಹಾಳ ನಗರ

ಗ್ರಾಮದೇವತೆ ಜಾತ್ರೆಗೆ ಕ್ಷಣಗಣನೆ: ಮದುವಣಗಿತ್ತಿಯಂತೆ ಶೃಂಗಾರಗೊಂಡ ಮುದ್ದೇಬಿಹಾಳ ನಗರ

ಮುದ್ದೇಬಿಹಾಳ : ಪ್ರತಿ ಮೂರು ವರ್ಷಕ್ಕೊಮ್ಮೆ ಜರುಗುವ ಗ್ರಾಮದೇವತೆ ಜಾತ್ರೆಗೆ ಮುದ್ದೇಬಿಹಾಳ ಪಟ್ಟಣ ಮದುವಣಗಿತ್ತಿಯಂತೆ

ಹೃದಯಾಘಾತದಿಂದ ಕುಸಿದು ಬಿದ್ದ ಯುವತಿ ಸಾವು!

ಹೃದಯಾಘಾತದಿಂದ ಕುಸಿದು ಬಿದ್ದ ಯುವತಿ ಸಾವು!

ಹಾಸನ: ಇತ್ತೀಚೆಗೆ ಯುವ ಜನರೇ ಹೃದಯಾಘತಕ್ಕೆ ಬಲಿಯಾಗುತ್ತಿರುವುದು ಹೆಚ್ಚಾಗಿದ್ದು, ಇದೀಗ ಹೃದಯಾಘಾತದಿಂದ ಕುಸಿದುಬಿದ್ದು ಪದವಿ ವಿದ್ಯಾರ್ಥಿನಿ ಮೃತಪಟ್ಟ ಘಟನೆ ಹಾಸನ ತಾಲೂಕಿನ ಕೆಲವತ್ತಿ ಗ್ರಾಮದಲ್ಲಿ ನಡೆದಿದೆ. ಮೃತ ಯುವತಿಯನ್ನು ಕೆಲವತ್ತಿ ಗ್ರಾಮದ ಪಾಪಣ್ಣ ಹಾಗೂ ಗಾಯತ್ರಿ ದಂಪತಿ ಪುತ್ರಿ ಕವನಾ ಕೆ.ವಿ. (21) ಎಂದು ಗುರುತಿಸಲಾಗಿದೆ. ಈಕೆ ಹಾಸನ ಸರ್ಕಾರಿ ಕಾಲೇಜಿನಲ್ಲಿ ಅಂತಿಮ ಬಿಕಾಂ ವ್ಯಾಸಂಗ ಮಾಡುತ್ತಿದ್ದಳು. ಕಾಲೇಜು ಮುಗಿಸಿ ಸಂಜೆ ಮನೆಗೆ ಬಂದ ಕವನಾಗೆ ಧಿಡೀರ್ ಆಗಿ ಎದೆನೋವು

ನಿಗದಿಯಂತೆ ಕಾರ್ಯಕ್ರಮ: ಮೇ.30 ರಂದು ಗ್ರಾಮ ದೇವತೆ ಜಾತ್ರೆಗೆ ಸಿದ್ಧತೆ ಪೂರ್ಣ

ನಿಗದಿಯಂತೆ ಕಾರ್ಯಕ್ರಮ: ಮೇ.30 ರಂದು ಗ್ರಾಮ ದೇವತೆ ಜಾತ್ರೆಗೆ ಸಿದ್ಧತೆ ಪೂರ್ಣ

ಮುದ್ದೇಬಿಹಾಳ : ಮೇ.30 ರಿಂದ ಪಟ್ಟಣದಲ್ಲಿ ಗ್ರಾಮದೇವತೆ ಜಾತ್ರೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಕಮೀಟಿಯ ಮುಖಂಡ ಪ್ರಭುರಾಜ ಕಲ್ಬುರ್ಗಿ ಹೇಳಿದರು. ಪಟ್ಟಣದ ಹಳೆ ತಹಸೀಲ್ದಾರ್ ಕಚೇರಿ ಬಳಿ ಇರುವ ಪೊಲೀಸ್ ಕ್ವಾರ್ಟರ್ಸ್ನಲ್ಲಿ ಮುದ್ದೇಬಿಹಾಳ ಗ್ರಾಮ ದೇವತೆ ಜಾತ್ರಾ ಕಮೀಟಿ ನೇತೃತ್ವದಲ್ಲಿ ಬುಧವಾರ ಸಂಜೆ ನಡೆದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು. ಅಂದು ಬೆಳಗ್ಗೆ 8 ರಿಂದ ಗ್ರಾಮದೇವತೆ ಹಾಗೂ ಶಾರದಾ ದೇವಿಯವರ ಮೂರ್ತಿಗಳ ಭವ್ಯ ಮೆರವಣಿಗೆ ಕಿಲ್ಲಾದ ಹೊಸಮಠದಿಂದ