ಮುದ್ದೇಬಿಹಾಳ : ಗೆಳೆತನವೇ ಹಾಗೆ, ಯಾರೊಂದಿಗೂ ಹೇಳಿಕೊಳ್ಳದ ವಿಷಯವನ್ನು ಗೆಳೆಯರ ಮುಂದೆ ಹೇಳಿಕೊಂಡು ಮನಸ್ಸು ಹಗುರ ಮಾಡಿಕೊಂಡಿದ್ದನ್ನು ಕಂಡಿದ್ದೇವೆ.
ಮುದ್ದೇಬಿಹಾಳದ ಸ್ನೇಹ ಸಂಗಮ ಗೆಳೆಯರ ಬಳಗದ ಸದಸ್ಯರು ಮಾನವೀಯ ಕೆಲಸ ಮಾಡಿದ್ದಾರೆ.
ತಮ್ಮದೇ ಬಳಗದಲ್ಲಿ ಸದಸ್ಯನಾಗಿರುವ ದೈಹಿಕವಾಗಿ ಅಂಗವೈಕಲ್ಯತೆ ಇರುವ ಮುಸ್ತಾಕ ಹಿಪ್ಪರಗಿ ಅವರು ತಳ್ಳುವ ಗಾಡಿ ಮೇಲೆ ಬಾಡಿಗೆ ಆಧಾರದಲ್ಲಿ ಪಾನ್ ಬೀಡಾ ಅಂಗಡಿ ನಡೆಸುತ್ತಿದ್ದನ್ನು ಕಂಡ ಗೆಳೆಯರ ಬಳಗದ ಸದಸ್ಯರೆಲ್ಲ ಒಟ್ಟುಗೂಡಿ ಸ್ನೇಹಿತನ ಕಷ್ಟಕ್ಕೆ ಮಿಡಿದು ಆತನಿಗೆ ಸ್ವಂತ ತಳ್ಳುಗಾಡಿ ಕೊಟ್ಟು ಉಪಜೀವನ ನಡೆಸಲು ಆಧಾರವಾಗಿದ್ದಾರೆ.
ಭಾನುವಾರದಂದು ತಮ್ಮ ಮೆಚ್ಚಿನ ಗೆಳೆಯನಿಗೆ ಈ ತಳ್ಳುಗಾಡಿಯನ್ನು ವಿತರಿಸಿ ಆಧಾರವಾಗಿದ್ದಾರೆ.
ಸ್ನೇಹ ಸಂಗಮ ಗೆಳೆಯರ ಬಳಗದ ಅಧ್ಯಕ್ಷ ವಿಶ್ವನಾಥ್ ಪಾಟೀಲ್, ಗೌರವಾಧ್ಯಕ್ಷ ಶಿವಾಜಿ ಬಿಜಾಪುರ, ಡಾ.ಸಿ.ಕೆ. ಶಿವಯೋಗಿಮಠ, ಆನಂದ ಜಂಬಗಿ, ಪ್ರಕಾಶ ಇಲ್ಲೂರು, ಸತೀಶ್ ಕುಲಕರ್ಣಿ, ರಾಘು ನಲವಡೆ, ಮುಸ್ತಾಕ ಬಾಗವಾನ, ಸಂಗಣ್ಣ ಮೇಲಿನಮನಿ, ವಿ.ಐ.ಪತ್ತಾರ, ವಕೀಲರಾದ ಎನ್. ಬಿ. ಮುದ್ನಾಳ, ರಾಜು ರಾಯಗೊಂಡ ಈ ವೇಳೆ ಇದ್ದರು. ಸ್ನೇಹಿತರ ಕರುಣೆಯ ಸಹಾಯಹಸ್ತಕ್ಕೆ ಗೆಳೆಯ ಮುಸ್ತಾಕ ಹಿಪ್ಪರಗಿ ಭಾವುಕರಾದರು.