ಮುದ್ದೇಬಿಹಾಳ : ಪಟ್ಟಣದ ಮನಿಯಾರ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸಮಾಜ ಸೇವಕ ಅಯ್ಯೂಬ ಮನಿಯಾರ ಅವರ ನೇತೃತ್ವದಲ್ಲಿ ಶ್ರಾವಣ ಮಾಸದ ಅಂಗವಾಗಿ ಏರ್ಪಡಿಸಿದ್ದ ನೇತ್ರ ಉಚಿತ ತಪಾಸಣೆ, ಶಸ್ತ್ರ ಚಿಕಿತ್ಸೆ ಫಲಾನುಭವಿಗಳಿಗೆ ಕನ್ನಡಕ ಹಾಗೂ ಔಷಧ ವಿತರಣೆ ಕಾರ್ಯಕ್ರಮ ಆ.25 ರಂದು ಬೆಳಗ್ಗೆ 10.30ಕ್ಕೆ ಆರ್.ಎಂ.ಎಸ್.ಎ ಶಾಲೆಯ ರಸ್ತೆಯಲ್ಲಿರುವ ಮನಿಯಾರ ಶಾಲಾ ಆವರಣದಲ್ಲಿ ಜರುಗಲಿದೆ.
ಆಲಮೇಲ ವಿರಕ್ತಮಠದ ಜಗದೇವ ಮಲ್ಲಿಬೊಮ್ಮ ಶ್ರೀ ದಿವ್ಯ ಸಾನಿಧ್ಯ ವಹಿಸುವರು. ಪ್ರವಚನಕಾರ ಲಾಲಹುಸೇನ ಕಂದಗಲ ಸಾನಿಧ್ಯ ವಹಿಸುವರು.ಸಣ್ಣ ಕೈಗಾರಿಕೆ ಸಚಿವ ಶರಣಬಸಪ್ಪ ದರ್ಶನಾಪೂರ ಉದ್ಘಾಟಿಸುವರು. ಶಾಸಕ ಸಿ.ಎಸ್.ನಾಡಗೌಡ ಅಪ್ಪಾಜಿ ಅಧ್ಯಕ್ಷತೆ ವಹಿಸುವರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಕಾಂಗ್ರೆಸ್ ಮುಖಂಡರಾದ ಹಮೀದ ಮುಶ್ರೀಫ, ನೇತ್ರ ಚಿಕಿತ್ಸಕ ಡಾ.ಪ್ರಭುಗೌಡ ಪಾಟೀಲ ಲಿಂಗದಳ್ಳಿ, ಸಮಾಜ ಸೇವಕ ಶಂಕರಗೌಡ ಹೊಸಮನಿ, ವಿಜಯಪುರ ಬನಶ್ರೀ ಸೌಹಾರ್ದ ಬ್ಯಾಂಕ್‌ನ ಅಧ್ಯಕ್ಷ ರೂಪಸಿಂಗ ಲೋಣಾರಿ ಮುಖ್ಯ ಅತಿಥಿಗಳಾಗಿ ಆಗಮಿಸುವರು ಎಂದು ಸಮಾಜ ಸೇವಕ ಅಯ್ಯೂಬ ಮನಿಯಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.