ಮುದ್ದೇಬಿಹಾಳ : ಪಟ್ಟಣದ ಸೈನಿಕ ಮೈದಾನದ ಆವರಣದಲ್ಲಿ ಹಿಂದೂ ಮಹಾಗಣಪತಿಯನ್ನು ಪ್ರತಿಷ್ಠಾಪನೆ ಮಾಡಲು ನಿರ್ಧರಿಸಲಾಗಿದ್ದು ಸಮೀತಿಯ ಅಧ್ಯಕ್ಷರನ್ನಾಗಿ ವೆಂಕನಗೌಡ ಪಾಟೀಲ ಅವರನ್ನು ಆಯ್ಕೆ ಮಾಡಲಾಗಿದೆ.
ಪ್ರಧಾನ ಕಾರ್ಯದರ್ಶಿಯನ್ನಾಗಿ ಸಂಗಮೇಶ ನಾಲತವಾಡ, ಖಜಾಂಚಿಯನ್ನಾಗಿ ರಾಜು ಬಳ್ಳೊಳ್ಳಿ, ಸಂಚಾಲಕರನ್ನಾಗಿ ರಾಜು ರಾಯಗೊಂಡ, ಸಂಘಟನಾ ಕಾರ್ಯದರ್ಶಿಯನ್ನಾಗಿ ಅನಿಲ ರಾಠೋಡ,ಸಹ ಸಂಚಾಲಕರಾಗಿ ಮಹಾಂತೇಶ ಬೂದಿಹಾಳಮಠ, ಸಹ ಸಂಘಟನಾ ಕಾರ್ಯದರ್ಶಿಯಾಗಿ ಸುಚಿತ ಚಳಗೇರಿ ಹಾಗೂ ಪೂಜಾ ಸಮೀತಿಯ ಸದಸ್ಯರನ್ನಾಗಿ ಬಸವರಾಜ ನಂದಿಕೇಶ್ವರಮಠ, ಮಾಣಿಕಚಂದ ದಂಡಾವತಿ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.