ಕಾಂಗ್ರೆಸ್ ಶಾಸಕನ ಆಯ್ಕೆ ಅಸಿಂಧು! ಹೈಕೋರ್ಟ್ ಮಹತ್ವದ ಆದೇಶ

ಕಾಂಗ್ರೆಸ್ ಶಾಸಕನ ಆಯ್ಕೆ ಅಸಿಂಧು! ಹೈಕೋರ್ಟ್ ಮಹತ್ವದ ಆದೇಶ

ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಮತ ಕ್ಷೇತ್ರದ ಕಾಂಗ್ರೆಸ್‌ ಶಾಸಕ ಕೆ.ವೈ ನಂಜೇಗೌಡ (K Y Nanjegowda) ಅವರ ಆಯ್ಕೆಯನ್ನು ಕರ್ನಾಟಕ ಹೈಕೋರ್ಟ್‌ ಅಸಿಂಧುಗೊಳಿಸಿ ಆದೇಶ ನೀಡಿದೆ.

ಅಷ್ಟು ಮಾತ್ರವಲ್ಲದೆ, ಮತಗಳ ಮರು ಎಣಿಕೆ ಮಾಡುವಂತೆ ಸೂಚನೆ ನೀಡಿದೆ. 2023ರ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕೋಲಾರ ಜಿಲ್ಲೆಯ ಮಾಲೂರು ಕ್ಷೇತ್ರದಿಂದ ಶಾಸಕರಾಗಿ ಕೆ.ವೈ ನಂಜೇಗೌಡ ಆಯ್ಕೆಯಾಗಿರುವುದನ್ನು ಅನೂರ್ಜಿತಗೊಳಿಸಬೇಕು ಎಂದು ಕೋರಿ ಬಿಜೆಪಿ ಪರಾಜಿತ ಅಭ್ಯರ್ಥಿ ಕೆಎಸ್ ಮಂಜುನಾಥ್ ಗೌಡ ಸಲ್ಲಿಸಿದ್ದ ಚುನಾವಣಾ ತಕರಾರು ಅರ್ಜಿಯನ್ನು ನ್ಯಾಯಮೂರ್ತಿ ಆ‌ರ್. ದೇವದಾಸ್ ಅವರದ್ದ ಪೀಠ ವಿಚಾರಣೆ ಮಾಡಿತು.

ಕಳೆದ ಎರಡು ವರ್ಷಗಳ ವಿಚಾರಣೆಯ ಬಳಿಕ ಹೈಕೋರ್ಟ್‌ ಮಂಗಳವಾರ ತೀರ್ಪು ನೀಡಿದೆ.

ಚುನಾವಣೆ ಮತ ಎಣಿಕೆಯಲ್ಲಿ ಲೋಪವಾಗಿದೆ ಎಂದು ಬಿಜೆಪಿ ಅಭ್ಯರ್ಥಿಯು ಆರೋಪ ಮಾಡಿದ್ದರು. ಹೀಗಾಗಿ, ಕೋರ್ಟ್‌ ಮತ್ತೊಮ್ಮೆ ಎಣಿಕೆಯನ್ನೂ ಮಾಡುವಂತೆ ಸೂಚನೆ ನೀಡಿದೆ.

ಶಾಸಕರಾಗಿ ಕೆ.ವೈ ನಂಜೇಗೌಡ ಅವರ ವಕೀಲರ ಮನವಿ ಮೇರೆಗೆ ಶಾಸಕ ಸ್ಥಾನ ಅಸಿಂಧು ಎಂದು ನೀಡಿದ್ದ ಆದೇಶಕ್ಕೆ 30 ದಿನಗಳ ಕಾಲ ಹೈಕೋರ್ಟ್‌ ತಡೆ ನೀಡಿದೆ. ಅಷ್ಟರಲ್ಲಿ ಶಾಸಕರು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಬಹುದು. ಒಂದು ವೇಳೆ ಸುಪ್ರೀಂ ಕೋರ್ಟ್‌ನಿಂದ ಯಾವುದೇ ನಿರ್ದೇಶನ ಬರದಿದ್ದರೆ ಶಾಸಕ ಸ್ಥಾನ ಅಸಿಂಧುವಾಗಲಿದೆ. ಮರು ಮತ ಎಣಿಕೆ ನಡೆಯಲಿದೆ.

248 ಮತಗಳ ಅಂತದ ಗೆಲುವು:

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಶಾಸಕ ಕೆವೈ ನಂಜೇಗೌಡ 248 ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಬಗ್ಗೆ ಮಾಜಿ ಶಾಸಕ, ಬಿಜೆಪಿ ಅಭ್ಯರ್ಥಿಯಾಗಿದ್ದ ಕೆಎಸ್ ಮಂಜುನಾಥ ಗೌಡ ಅನುಮಾನ ವ್ಯಕ್ತಪಡಿಸಿದ್ದರು. ಆ ಸಂದರ್ಭದಲ್ಲಿಯೇ ಮತ ಎಣಿಕೆಯಲ್ಲಿ ಲೋಪವಾಗಿದ್ದು, ಮರು ಮತ ಎಣಿಕೆಗೆ ಆದೇಶ ನೀಡುವಂತೆ ಹೈಕೋರ್ಟ್‌ಗೆ ಮನವಿ ಮಾಡಿದ್ದರು.

ತಕರಾರು ಅರ್ಜಿ ಹಾಕಿದ ಬಳಿಕ ಸಿಸಿಟಿವಿ ದೃಶ್ಯಾವಳಿ, 17 ಸಿ ಫಾರಂಗಳನ್ನು ನೀಡುವಂತೆ ನ್ಯಾಯಾಲಯವು ಆದೇಶವನ್ನು ನೀಡಿತ್ತು. ಸೂಕ್ತ ದಾಖಲೆ ನೀಡಿಲ್ಲ. 251 ಸಿ ಫಾರಂಗಳ ಪೈಕಿ 120 ಫಾರಂನಲ್ಲಿ ನಮ್ಮ ಏಜೆಂಟರ ಸಹಿಗಳೇ ಇಲ್ಲ. ಸಿಸಿಟಿವಿ ದೃಶ್ಯಾವಳಿ ದೊರೆತರೆ ನಮ್ಮ ಏಜೆಂಟರು ಇದ್ದರು ಅಥವಾ ಇಲ್ಲ ಎನ್ನುವುದು ತಿಳಿಯುತ್ತದೆ. ಮರು ಮತ ಎಣಿಕೆ ಆಗಬೇಕು ಎನ್ನುವುದಷ್ಟೇ ನನ್ನ ಉದ್ದೇಶ ಎಂದು ಮಾಜಿ ಶಾಸಕ ಕೆ.ಎಸ್‌. ಮಂಜುನಾಥ್‌ಗೌಡ ಹೇಳಿದ್ದರು.

Latest News

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ ; ಹುಲ್ಲೂರು ಎಸ್.ಎನ್.ಡಿ ಪಬ್ಲಿಕ್ ಶಾಲೆಗೆ ತಹಶೀಲ್ದಾರ್ ಭೇಟಿ

ಮುದ್ದೇಬಿಹಾಳ : ರಾಜ್ಯಾದ್ಯಂತ ಸೋಮವಾರದಿಂದ ಶಾಲೆಗಳು ಆರಂಭಗೊOಡಿದ್ದು ತಾಲ್ಲೂಕಿನ ಹುಲ್ಲೂರು ಗ್ರಾಮದ ಎಸ್.ಎನ್.ಡಿ ಪಬ್ಲಿಕ್

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ:             ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಹೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ: ಅಸಮರ್ಪಕ ವಿದ್ಯುತ್ ಪೂರೈಕೆ,ಟಿಸಿ ಸಮಸ್ಯೆಗೆ ರೈತರ ಆಕ್ರೋಶ

ಮುದ್ದೇಬಿಹಾಳ : ತಾಲ್ಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಒಂದು ತಿಂಗಳಿನಿoದ ಅಮಸರ್ಪಕ ವಿದ್ಯುತ್ ಪೂರೈಕೆ,ರೈತರಿಗೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ನಾಗರಬೆಟ್ಟ ಏತ ನೀರಾವರಿ ಯೋಜನೆ ಪೂರ್ಣಗೊಳಿಸಿ: ಜೂ.8 ರಂದು ಆಲಮಟ್ಟಿಯಲ್ಲಿ ರೈತರ ಬೃಹತ್ ಪ್ರತಿಭಟನೆ

ಮುದ್ದೇಬಿಹಾಳ : ನಾಗರಬೆಟ್ಟ ಏತ ನೀರಾವರಿ ಯೋಜನೆಗೆ ಸಂಬoಧಿಸಿದoತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು

ಎಲ್ಲೆಡೆ ಶಾಲಾ ಆರಂಭೋತ್ಸವ:                                            ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಎಲ್ಲೆಡೆ ಶಾಲಾ ಆರಂಭೋತ್ಸವ: ಎತ್ತಿನ ಬಂಡಿಯಲ್ಲಿ ಮಕ್ಕಳ ಮೆರವಣಿಗೆಯ ಮೆರಗು

ಮುದ್ದೇಬಿಹಾಳ : ಬೇಸಿಗೆ ರಜೆ ಕಳೆದು ಶಾಲಾ ಮಕ್ಕಳು ಇನ್ನು ಮುಂದೆ ಶೈಕ್ಷಣಿಕ ಚಟುವಟಿಕೆಗಳಲ್ಲಿ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪರಿಸರ ರಕ್ಷಕ” ಪ್ರಶಸ್ತಿ ಗೆ ಅರ್ಜಿ ಆಹ್ವಾನ

ಮುದ್ದೇಬಿಹಾಳ : ಪಟ್ಟಣದ ಹಸಿರು ತೋರಣ ಗೆಳೆಯರ ಬಳಗ ಪ್ರತಿ ವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ನೀಡಲಾಗುವ "ಪರಿಸರ ರಕ್ಷಕ" ಪ್ರಶಸ್ತಿಗೆ ಅರ್ಜಿ ಆಹ್ವಾನಿಸಿದೆ. ಗಿಡಗಳನ್ನು ನೆಟ್ಟು ಬೆಳೆಸಿರುವ, ಸಂರಕ್ಷಿಸಿರುವ ವ್ಯಕ್ತಿಗಳಿಗೆ, ಶಾಲೆ ಕಾಲೇಜುಗಳ ಶಿಕ್ಷಕರು, ಸಂಘ, ಸಂಸ್ಥೆಗಳಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ. ಮುದ್ದೇಬಿಹಾಳ ತಾಲ್ಲೂಕಿನ ವ್ಯಾಪ್ತಿಯಲ್ಲಿ ಪರಿಸರ ರಕ್ಷಣೆ ಮಾಡಿರುವ ಅರ್ಹರು ತಮ್ಮ ವಿವರಗಳುಳ್ಳ ಅರ್ಜಿಗಳನ್ನು ಜೂನ್ 3 ರೊಳಗೆ, ಅಧ್ಯಕ್ಷರು,

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಮೇ.24 ರಂದು ಕ್ರಿಕೆಟ್ ಪಂದ್ಯಾವಳಿ ಫೈನಲ್

ಮುದ್ದೇಬಿಹಾಳ : ಎಂ.ಬಿ.ಎಲ್ ಗ್ರೂಪನಿಂದ ಪಟ್ಟಣದಲ್ಲಿ ಮೂರು ವಾರಗಳಿಂದ ಜರುಗುತ್ತಿದ್ದ ಹಾರ್ಡ್ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಾಮೆಂಟ್‌ನ ಫೈನಲ್ ಪಂದ್ಯಾವಳಿ ಮೇ.24 ರಂದು ಜರುಗಲಿದೆ ಎಂದು ಆಯೋಜಕರ ಬಳಗ ತಿಳಿಸಿದೆ. ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಫೈನಲ್ ಪಂದ್ಯಾವಳಿಯ ಕುರಿತು ಮಾಹಿತಿ ನೀಡಿದ ಸಂಘಟಕರಲ್ಲೊಬ್ಬರಾದ ಕಾಮರಾಜ ಬಿರಾದಾರ, ಈಗಾಗಲೇ ನಿಡಗುಂದಿ ತಂಡವನ್ನು ಸೋಲಿಸಿ ಆಲಮಟ್ಟಿ ತಂಡ ಫೈನಲ್ ತಲುಪಿದ್ದು ಮೇ.24 ರಂದು ಜರುಗಲಿರುವ ಸೆಮಿಫೈನಲ್ ಪಂದ್ಯದಲ್ಲಿ ಮುದ್ದೇಬಿಹಾಳ ಹಾಗೂ