ಆಲಮಟ್ಟಿ : ಇಲ್ಲಿಗೆ ಸಮೀಪದ ಯಲಗೂರು ಶ್ರೀ ಆಂಜನೇಯ ಸ್ವಾಮಿ ದೇವಸ್ಥಾನದಲ್ಲಿ ಕಾಂಗ್ರೆಸ್ ಮುಖಂಡ, ಪ್ರಥಮ ದರ್ಜೆ ಗುತ್ತಿಗೆದಾರರಾದ ಸಿ.ಬಿ.ಅಸ್ಕಿ ಅವರ ನೇತೃತ್ವದಲ್ಲಿ ಹೊರ ತಂದಿರುವ 2026ನೇ ಸಾಲಿನ ಅಸ್ಕಿ ಫೌಂಡೇಶನ್‌ದ ನೂತನ ವರ್ಷದ ಕ್ಯಾಲೆಂಡರನ್ನು ಶನಿವಾರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಮುದ್ದೇಬಿಹಾಳ ತಾಲ್ಲೂಕು ಪಂಚ ಗ್ಯಾರಂಟಿ ಸಮಿತಿ ಸದಸ್ಯ ಬುಡ್ಡೇಸಾಬ ಚಪ್ಪರಬಂದ, ಅಸ್ಕಿ ಫೌಂಡೇಶನ್ ಮುದ್ದೇಬಿಹಾಳ ಮತಕ್ಷೇತ್ರದಲ್ಲಿ ಒಳ್ಳೆಯ ಕೆಲಸಗಳನ್ನು ಮಾಡುತ್ತಿದೆ.ಫೌಂಡೇಶನ್ ಸಂಸ್ಥಾಪಕ ಸಿ.ಬಿ.ಅಸ್ಕಿ ಅವರು ಮಾನವೀಯ,ಅಂತಃಕರಣ ಹೃದಯವುಳ್ಳವರಾಗಿದ್ದಾರೆ.ಫೌಂಡೇಶನ್ ಕಾರ್ಯಗಳು ಹೀಗೆ ಮುಂದುವರೆಯಲಿ ಎಂದರು.
ರೈತ ಸಂಘದ ಮುಖಂಡ ಬಸವರಾಜ ಬಾಗೇವಾಡಿ ಮಾತನಾಡಿ, ಅಸ್ಕಿ ಫೌಂಡೇಶನ್ ಜನಸೇವೆ ಮಾದರಿಯಾಗಿದೆ.ಉಳ್ಳವರು ಹಲವಾರು ಜನ ಇದ್ದರೂ ಕೊಡುವವರ ಕೈ ಮಾತ್ರ ವಿರಳವಾಗಿರುತ್ತವೆ.ಅಂತಹ ವಿರಳ ಕೈಗಳಲ್ಲಿ ಅಸ್ಕಿ ಫೌಂಡೇಶನ್‌ವರು ಸೇರಿಕೊಂಡಿರುವುದು ಮೆಚ್ಚುಗೆಗೆ ಪಾತ್ರವಾದದ್ದು.ಮುಂಬರುವ ದಿನಗಳಲ್ಲಿ ಕಾಂಗ್ರೆಸ್ ಮುಖಂಡರಾದ ಅಸ್ಕಿ ಅವರಿಗೆ ಜನಸೇವೆ ಮಾಡುವ ಅವಕಾಶ ಒದಗಿ ಬರಲಿ ಎಂದು ಹೇಳಿದರು.
ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ ಮಾತನಾಡಿ, ಸಾಮಾಜಿಕ ಕಾರ್ಯಗಳಲ್ಲಿ ನಮ್ಮ ಫೌಂಡೇಶನ್ ಸದಾ ಮುಂದೆ ಇರಲಿದೆ ಎಂದರು.
ಪ್ರಥಮ ದರ್ಜೆ ಗುತ್ತಿಗೆದಾರರು, ಕಾಂಗ್ರೆಸ್ ಹಿರಿಯ ಮುಖಂಡ ಶ್ಯಾಮ ಪಾತ್ರದ, ಟಿಎಪಿಸಿಎಂಎಸ್ ನಿರ್ದೇಶಕರಾದ ಮುತ್ತಣ್ಣ ಮುತ್ತಣ್ಣವರ, ಪ್ರಥಮ ದರ್ಜೆ ಗುತ್ತಿಗೆದಾರರಾದ ಎಚ್.ಬಿ.ಸಂಗಮ, ವಾಯ್.ವಾಯ್.ಬಿರಾದಾರ,ಹಣಮಂತ ಪೂಜಾರಿ (ಕಾಶಿನಕುಂಟಿ),ಬಿ.ಎಸ್.ಪಾಟೀಲ, ಬಸವರಾಜ ದಂಡಿನ, ಶಿವು ಗದಿಗೆಪ್ಪಗೌಡರ, ಯುವ ಕಾಂಗ್ರೆಸ್ ಮುಖಂಡ ಆಸಿಫ್ ಬಿಲಕೇರಿ, ಅಸ್ಕಿ ಫೌಂಡೇಶನ್ ಸಾಮಾಜಿಕ ಜಾಲತಾಣ ಮುಖ್ಯಸ್ಥ ಶ್ರೀಧರ ಬಿರಾದಾರ, ಸಚಿನ ನಾಡಗೌಡ, ರಾಮನಗೌಡ ಹೊಸಮನಿ, ಮಲ್ಲು ಢವಳಗಿ ಸೇರಿದಂತೆ ಯಲಗೂರ, ಕಾಶಿನಕುಂಟಿ,ಬೂದಿಹಾಳ, ಗ್ರಾಮದ ಗಣ್ಯರು ಹಿರಿಯ ಮುಖಂಡರು, ಯುವಕರು ಉಪಸ್ತಿತರಿದ್ದರು.







