ಮುದ್ದೇಬಿಹಾಳ : ಇಂದಿನ ಯುವ ವಿದ್ಯಾರ್ಥಿಗಳು ಕಾಲೇಜುಗಳಲ್ಲಿ ಹುಡುಗಿಯರ ಹಿಂದೆ ತಿರುಗುವುದನ್ನು ಬಿಟ್ಟು ಪುಸ್ತಕದ ಹಿಂದೆ ಬಿದ್ದರೆ ಭವಿಷ್ಯದಲ್ಲಿ ಒಳ್ಳೆಯ ಉದ್ಯೋಗ ಸಂಪಾದಿಸಿದರೆ ಹುಡುಗಿಯರೇ ಹಿಂದೆ ಬೀಳುತ್ತಾರೆ ಎಂದು ಕೆಪಿಸಿಸಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೀಣಾ ಕಾಶಪ್ಪನವರ ಹೇಳಿದರು.
ಪಟ್ಟಣದ ವಿಬಿಸಿ ಹೈಸ್ಕೂಲ್ ಆವರಣದಲ್ಲಿರುವ ಸಿದ್ದೇಶ್ವರ ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಯುವ ಸಂಘಗಳ ಒಕ್ಕೂಟ ಜಿಲ್ಲಾ ಹಾಗೂ ತಾಲ್ಲೂಕು ಘಟಕ ಹಾಗೂ ಇತರೆ ಸಂಘಟನೆಗಳ ಸಹಯೋಗದಲ್ಲಿ ಶನಿವಾರ ಸ್ವಾಮಿ ವಿವೇಕಾನಂದರ 163ನೇ ಜಯಂತಿ ಅಂಗವಾಗಿ ಸ್ವಾಮಿವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಸ್ವಾಮಿ ವಿವೇಕಾನಂದರು ಆಧ್ಯಾತ್ಮಿಕತೆಯ ಸಂಪ್ರದಾಯವನ್ನು ವಿದೇಶದಲ್ಲಿ ಸಾರಿದವರು.ವಿವೇಕಾನಂದರು ಕೇವಲ ನಾಮಫಲಕ,ಬ್ಯಾನರ್ಗೆ ಸಿಮೀತವಾಗಿಲ್ಲ.ಯುವಕರಿಗೆ ಶಕ್ತಿ ಆಗಿದ್ದಾರೆ.ದೇಶ ಹೆಮ್ಮೆ ಆಗಿದ್ದಾರೆ ಎಂದರು.
ಭಾರತ ಮಾತೆಯ ಮಕ್ಕಳು ನಾವೆಲ್ಲ ಒಂದೇ ಎನ್ನುವುದು ಎಲ್ಲಿಯವರೆಗೆ ಬರುವುದಿಲ್ಲವೋ ಅಲ್ಲಿಯವರೆಗೆ ದೇಶ ಅಭಿವೃದ್ಧಿ ಸಾಧಿಸಲು ಸಾಧ್ಯವಿಲ್ಲ.ಮೊಬೈಲ್ಗೆ ಪಾಶ್ಚಿಮಾತ್ಯ ಸಂಸ್ಕೃತಿಗೆ ಯುವಕರು ವಾಲುತ್ತಿದ್ದಾರೆ.ಯುವಕರಲ್ಲಿ ಸದೃಢತೆ ಕಡಿಮೆ ಆಗುತ್ತಿದೆ.ಸಾಧಿಸುವ ಮನಸ್ಸು ಹಾಗೂ ಬುದ್ದಿ ಯುವ ಸಮೂಹದಲ್ಲಿ ಇರಬೇಕು.ಯುವ ಜನಾಂಗ ದೇಹದ, ಮಾನಸಿಕ ಸ್ಥಿಮಿತತೆಯನ್ನು ಕಳೆದುಕೊಳ್ಳುತ್ತಿದ್ದಾರೆ.ಯುವಕರು ದುಡಿಯುವ ಕೈಗಳಿಗೆ ಕೆಲಸ ಕೊಡುವವರು ಆಗಬೇಕು ಎಂದರು.
ಸಾನಿದ್ಯ ವಹಿಸಿದ್ದ ಸಿದ್ಧನಕೊಳ್ಳದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಯುವಕರು ಸ್ವಾಮಿ ವಿವೇಕಾನಂದರ ಆದರ್ಶ ಅಳವಡಿಸಿಕೊಳ್ಳಬೇಕು.ತಂದೆ ತಾಯಿಯರನ್ನು ಜೀವನದ ಸಂಧ್ಯಾಕಾಲದಲ್ಲಿ ಕಾಳಜಿಯಿಂದ ಆರೈಕೆ ಮಾಡಬೇಕು ಎಂದರು.
ದಿವ್ಯ ಸಾನಿಧ್ಯ ಇಮ್ಮಡಿ ಸಿದ್ಧರಾಮೇಶ್ವರ ಸ್ವಾಮೀಜಿ,ಅಕ್ಕಮಹಾದೇವಿ ಮವಿವಿ ಕುಲಸಚಿವ ಶಂಕರಗೌಡ ಸೋಮನಾಳ,ಯುವ ಸಬಲೀಕರಣ ಇಲಾಖೆಯ ಉಪನಿರ್ದೇಶಕ ರಮೇಶ ಎಂ.ಸಿ.,ಅಧ್ಯಕ್ಷತೆ ವಹಿಸಿದ್ದ ಕನ್ನಡ ಜಾನಪದ ಪರಿಷತ್ ರಾಜ್ಯಾಧ್ಯಕ್ಷ ಎಸ್.ಬಾಲಾಜಿ,ತಾಲೂಕು ಕುರುಬರ ಸಂಘದ ಅಧ್ಯಕ್ಷ ಎಂ.ಎನ್.ಮದರಿ,ಅಸ್ಕಿ ಫೌಂಡೇಶನ್ ಅಧ್ಯಕ್ಷ ಸಿ.ಬಿ.ಅಸ್ಕಿ,ಬಿಜೆಪಿ ಜಿಲ್ಲಾ ನಿಕಟಪೂರ್ವ ಕಾರ್ಯದರ್ಶಿ ಕಾಶೀಬಾಯಿ ರಾಂಪೂರ,ಕಸಾಪ ಅಧ್ಯಕ್ಷ ಕಾಮರಾಜ ಬಿರಾದಾರ, ಪುರಸಭೆ ಮಾಜಿ ಅಧ್ಯಕ್ಷ ಮಹೆಬೂಬ ಗೊಳಸಂಗಿ, ಬಿ.ಎನ್.ಹೂಗಾರ, ಡಿ.ಬಿ.ವಿಜಯಶಂಕರ,ದಾನಯ್ಯ ಹಿರೇಮಠ,ಜಾನಪದ ಪರಿಷತ್ ಮಹಿಳಾ ಘಟಕದ ಅಧ್ಯಕ್ಷೆ ದೀಪರತ್ನಶ್ರೀ, ತಾಲ್ಲೂಕು ಮಾಜಿ ಅಧ್ಯಕ್ಷ ವೀರೇಶ ಗುರುಮಠ ಮೊದಲಾದವರು ಇದ್ದರು.
ಕರ್ನಾಟಕ ಯುವ ಸಂಘಗಳ ಒಕ್ಕೂಟದ ಪದಾಧಿಕಾರಿಗಳಾದ ಸಂಗಣ್ಣ ಕಂಚ್ಯಾಣಿ, ಚಂದ್ರು ಕರೇಕಲ್,ಬಸವರಾಜ ದಡ್ಡಿ,ಸಾಬಣ್ಣ ಚಳ್ಳಗಿ, ಅಪ್ಪುಗೌಡ ಪಾಟೀಲ, ಮಹ್ಮದರಫೀಕ ಶಿರೋಳ,ಮಹಾಂತೇಶ ಬಿಜ್ಜೂರ, ಕೃಷ್ಣಾ ಕುಂಬಾರ, ದೀಪರತ್ನಶ್ರೀ, ರಾಜು ವಾಲೀಕಾರ, ಬಸವರಾಜ ಯಂಕAಚಿ, ಚಂದ್ರು ಮೂಕಿಹಾಳ,ರಾಜುಗೌಡ ತುಂಬಗಿ ಇದ್ದರು.
ಮುದ್ದೇಬಿಹಾಳದ ಸರ್ಕಾರಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ.ಪರಶುರಾಮ ವಡ್ಡರ ಸೇರಿದಂತೆ ಮೂವರಿಗೆ ಅಂತರ್ರಾಷ್ಟಿçÃಯ ಮಟ್ಟದ, ಆರು ಜನರಿಗೆ ರಾಷ್ಟçಮಟ್ಟದ, 36 ಜನರಿಗೆ ರಾಜ್ಯ ಮಟ್ಟದ ಸ್ವಾಮಿವಿವೇಕಾನಂದ ಸದ್ಭಾವನಾ ಪ್ರಶಸ್ತಿ ಪ್ರದಾನ ಮಾಡಲಾಯಿತು.ಉಪನ್ಯಾಸಕ ಪ್ರಕಾಶ ನರಗುಂದ ಹಾಗೂ ಪುಂಡಲೀಕ ಮುರಾಳ ಸಂಪಾದಕತ್ವದ ವಿವೇಕ ಯುವ ಚೈತನ್ಯ ಕೃತಿ ಬಿಡುಗಡೆ ಮಾಡಲಾಯಿತು.ಧರ್ಮಯುದ್ಧ ದಿನದರ್ಶಿಕೆ ಲೋಕಾರ್ಪಣೆ ಮಾಡಲಾಯಿತು.ಇದಕ್ಕೂ ಮುನ್ನ ಖಾಸ್ಗತೇಶ್ವರ ಮಠದಿಂದ ಸ್ವಾಮಿ ವಿವೇಕಾನಂದರ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.
ಸಂಗಮೇಶ ಶಿವಣಗಿ ಹಾಗೂ ತಂಡದವರು ಪ್ರಾರ್ಥಿಸಿದರು.ಶಿಕ್ಷಕ ಎಂ.ಬಿ.ಗುಡಗುAಟಿ ಹಾಗೂ ಹೇಮಾ ಬಿರಾದಾರ ನಿರೂಪಿಸಿದರು.ಯುವ ಸಂಘಗಳ ಒಕ್ಕೂಟದ ಜಿಲ್ಲಾಧ್ಯಕ್ಷ ಪುಂಡಲೀಕ ಮುರಾಳ ಪ್ರಾಸ್ತಾವಿಕವಾಗಿ ಮಾತನಾಡಿದರು.







