ಮುದ್ದೇಬಿಹಾಳ : ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಾವು ಕಚ್ಚಿದ ಪರಿಣಾಮ ರೈತತರೊಬ್ಬರುಸಾವನ್ನಪ್ಪಿದ ಘಟನೆ ಸಮೀಪದ ಬಿಜ್ಜೂರ ಗ್ರಾಮದಲ್ಲಿ ಭಾನುವಾರ ನಡೆದಿದೆ.
ಬಿಜ್ಜೂರ ಗ್ರಾಮದ ರೈತ ಗಂಗಪ್ಪ ಹಣಮಪ್ಪ ಗುರಿಕಾರ (69) ಸಾವನ್ನಪ್ಪಿದ ರೈತ. ಕಬ್ಬಿನ ಬೆಳೆಗೆ ನೀರು ಬಿಡುವ ಸಂದರ್ಭದಲ್ಲಿ ಕಟಾವು ಮಾಡಿದ ಕಬ್ಬಿನ ರವದಿ ಹಾಗೂ ಕಸವನ್ನು ತೆರವುಗೊಳಿಸುತ್ತಿದ್ದ ವೇಳೆ ಹಾವು ಅವರ ಕೈಗೆ ಕಚ್ಚಿದೆ.
ವಿಷಯ ತಿಳಿದ ತಕ್ಷಣ ಕುಟುಂಬಸ್ಥರು ಮತ್ತು ಗ್ರಾಮಸ್ಥರು ಅವರನ್ನು ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ ತುರ್ತುವಾಗಿ ದಾಖಲಿಸಿದರು.
ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಸಾವನ್ನಪ್ಪಿದರು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಮುದ್ದೇಬಿಹಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
.
.







