ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಸದ್ಯ ನಾಯಿ ಮಾಂಸದ್ದೇ ದೊಡ್ಡ ಸುದ್ದಿ. ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಇದೀಗ, ರಾಷ್ಟ್ರ ರಕ್ಷಣಾ ಪಡೆಯ ಮುಖಂಡ ಪುನೀತ್ ಕೆರೆಹಳ್ಳಿಯವರು ಎಸಿಪಿ ಚಂದನ್ ವಿರುದ್ಧವೇ ಗಂಭೀರ ಆರೋಪ ಮಾಡಿದ್ದಾರೆ.
ಇಂದು ಮಾಧ್ಯಮಗಳ ಮುಂದೆ ಮಾತನಾಡಿದ ಅವರು, ಅಕ್ರಮವಾಗಿ ಹಾಗೂ ಕಲಬೆರಕೆ ಮಾಂಸ ಬೆಂಗಳೂರಿಗೆ ಬರುತ್ತಿದೆ ಎಂಬ ಮಾಹಿತಿ ಮೇಲೆ ನಾನು ಸ್ಥಳಕ್ಕೆ ಹೋದೆ. ನಾವು ಹೋಗುವದಕ್ಕೆ ಮುನ್ನವೇ ಮಾಧ್ಯಮ ಹಾಗೂ ಹೊಯ್ಸಳ ಪೊಲೀಸರು ಇದ್ದರು. ಈ ವೇಳೆ ನಾವು ಮಾಂಸವನ್ನು ಸೀಜ್ ಮಾಡಲು ಹೇಳಿದೆವು. ಆಗ ಅವರು ನಾವು ಸೀಜ್ ಮಾಡಲು ಆಗಲ್ಲ 112ಗೆ ಕರೆ ಮಾಡಲು ತಿಳಿಸಿದರು. ಅದರಂತೆ ನಾವು 112ಗೆ ಕಾಲ್ ಮಾಡಿದೆವು. ತಕ್ಷಣವೇ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪ್ರಕ್ರಿಯೆ ಆರಂಭಿಸಿದ್ದಾರೆ.
ಈ ವೇಳೆ ಅಬ್ದುಲ್ ರಜಾಕ್ ಏಕಾಏಕಿ 5-6 ಜನರನ್ನು ಕರೆದುಕೊಂಡು ಬಂದಿದ್ದಾರೆ. ಅಲ್ಲಿಯವರೆಗೂ ಯಾವುದೇ ಗಲಾಟೆ ನಡೆದಿರಲಿಲ್ಲ ಎಂದರು.
ಅಬ್ದುಲ್ ರಜಾಕ್ ಬಂದು ಈ ಮಾಂಸ ನಮ್ಮದು. ಇದನ್ನು ಓಪನ್ ಮಾಡಲು ಬಿಡಲ್ಲ ಎಂದು ಹಠಕ್ಕೆ ಬಿದ್ದರು. ಇಷ್ಟೆಲ್ಲಾ ಆದ ಬಳಿಕ ನಾನು ಪೆನ್‌ಡ್ರೈವ್ ನನ್ನ ಬಳಿ ಇದೆ ಅದರಲ್ಲಿ ಎಲ್ಲಾ ದಾಖಲೆಗಳು ಇವೆ ಎಂದು ಬಹಿರಂಗವಾಗಿ ಹೇಳಿದೆ. ಹೀಗೆ ಹೇಳುತ್ತಿದ್ದಂತೆಯೇ ಪೊಲೀಸರು ನನ್ನನ್ನು ಅವರ ವಾಹನಕ್ಕೆ ದಬ್ಬಿದ್ರು.
ಮೊದಲೇ ಕಾಲು ನೋವಿನಿಂದ ಬಳಲುತ್ತಿದ್ದ ನನ್ನನ್ನು ಕಾಟನ್ ಪೇಟೆ ಪೊಲೀಸ್ ಠಾಣೆಗೆ ಕರೆದುಕೊಂಡು ಹೋದರು. ಅಲ್ಲಿ ಮಳೆಯಲ್ಲಿ ನೆನೆದು, ಮೊದಲೇ ನೋವಿದ್ದರಿಂದ ಕಾಲು ಮರಗಟ್ಟಿತ್ತು. ಹೀಗಾಗಿ ನನಗೆ ನಡೆದುಕೊಂಡು ಹೋಗಲು ಸಾಧ್ಯವಾಗುತ್ತಿರಲಿಲ್ಲ. ನನ್ನಿಂದ ನಡೆಯೋಕೆ ಆಗಲ್ಲ ಅಂದಾಗ ನಾಟಕ ಆಡೋಡ ಸೂ*** ಮಗನೇ ಹೇಳಿ ಎಳೆದುಕೊಂಡು ಠಾಣೆಯೊಳಗಿರುವ ಎಂದರು.
ನಂತರ ಎದ್ದೇಳು ಮೇಲೆ ಅಂದ್ರು. ಆಗ ನಾನು ಕಾಲು ನೋವಿದೆ ಎಂದು ಹೇಳಿಕೊಂಡರೂಬಿಡದೇ ನನ್ನನ್ನು ಅವಾಚ್ಯ ಶಬ್ದಗಳಿಂದ ನಿಂದಿಸುವ ಮೂಲಕ ಟಾರ್ಚರ್ ಕೊಟ್ಟರು. ಇದಾದ ಬಳಿಕ ಎಸಿಪಿ ಚಂದನ್ ಅವರು ಬಂದು ಏನ್ರಿ ಅವನನ್ನು ಮಲಗಿಸಿದ್ದೀರಾ..? ಬೋ** ಮಗನನ್ನು ಎಬ್ಬಿಸಿ ಎಂದು ಹೇಳಿದರು.
ಆಗ ನಾನು ಎದ್ದೇಳಲು ಆಗ್ತಿಲ್ಲ ಅಂದಾಗ ನನಗೆ ಗೊತ್ತು ಹೇಗೆ ಎದ್ದೇಳಿಸಬೇಕು ಅಂದು ಲಾಠಿಯಿಂದ 8 ಬಾರಿ ಹೊಡೆದಿದ್ದಾರೆ. ಬಳಿಕ ನನ್ನ ಜುಟ್ಟು ಹಿಡಿದು ಸಂಪೂರ್ಣವಾಗಿ ಬೆತ್ತಲೆ ಮಾಡಿದ್ದಾರೆ ಎಂದು ಆರೋಪಿಸಿದರು.