50 ಲಕ್ಷ ರೂ.ಸ್ಕಾಲರ್‌ಶಿಪ್ ಗೆಲ್ಲುವ ಅವಕಾಶ: ಫೆ.22 ರಂದು ಬಿಎಎಸ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ

50 ಲಕ್ಷ ರೂ.ಸ್ಕಾಲರ್‌ಶಿಪ್ ಗೆಲ್ಲುವ ಅವಕಾಶ: ಫೆ.22 ರಂದು ಬಿಎಎಸ್ ಟ್ಯಾಲೆಂಟ್ ಅವಾರ್ಡ್ ಪರೀಕ್ಷೆ

ಮುದ್ದೇಬಿಹಾಳ : ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿರುವ ಬಿಎಎಸ್ ಇಂಟರ್‌ನ್ಯಾಶನಲ್ ಶಾಲೆಯಲ್ಲಿ ಫೆ.22 ರಂದು ಬಿಎಎಸ್ ಟ್ಯಾಲೆಂಟ್ ಅವಾರ್ಡ್ -2026-27 ಪರೀಕ್ಷೆ ಹಮ್ಮಿಕೊಳ್ಳಲಾಗಿದೆ ಎಂದು ಬಿಎಎಸ್ ಸಮೂಹ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರಭುಗೌಡ ಬಿರಾದಾರ ಮಾಹಿತಿ ನೀಡಿದರು.

ಪಟ್ಟಣದಲ್ಲಿ ಈಚೇಗೆ ಸುದ್ದಿಗೋಷ್ಠಿ ನಡೆಸಿ ಅವರು ಪರೀಕ್ಷೆಯ ಕುರಿತು ಮಾಹಿತಿ ನೀಡಿದರು. ಈ ಪರೀಕ್ಷೆ 4 ಮತ್ತು 9ನೇ ತರಗತಿ ಮಕ್ಕಳಿಗಾಗಿ ಈ ಪರೀಕ್ಷೆ ನಡೆಸಲಾಗುತ್ತಿದೆ. 50ಲಕ್ಷ ರೂ.ಮೌಲ್ಯದ
ಸ್ಕಾಲರಶಿಪ್ ಗೆಲ್ಲುವ ವಿಶೇಷ ಪರೀಕ್ಷೆ ಆಯೋಜಿಸಿದ್ದೇವೆ ಎಂದು ತಿಳಿಸಿದರು.

ರ‍್ಯಾಂಕ್‌ವಾರು ಮಕ್ಕಳಿಗೆ ಪ್ರತಿಶತ ರಿಯಾಯಿತಿಯಲ್ಲಿ ಶಿಷ್ಯವೇತನ ನೀಡುತ್ತಿದ್ದು,ಹೀಗಾಗಿ ಕಳೆದ ವರ್ಷ
20ಲಕ್ಷ ರೂಪಾಯಿ ಶಿಷ್ಯವೇತನ ನೀಡಲಾಗಿತ್ತು.ಫೆ. 21 ರಂದು ಟ್ಯಾಲೆಂಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕವಾಗಿದೆ ಎಂದು ಹೇಳಿದರು. ಪ್ರಾಚಾರ್ಯ ಸಲ್ಮಾನ್‌ಖಾನ್ ಎಚ್.,ಮಾತನಾಡಿ ನಮ್ಮ ಶಾಲೆಯಲ್ಲಿ 10 ಸಾವಿರ ಪುಸ್ತಕದ ಗ್ರಂಥಾಲಯ ಸಾಮರ್ಥ್ಯವಿದೆ.ಸಿಬಿಎಸ್‌ಸಿ
ಕಲ್ಚರ್ ಇದೆ,ಗಂಡು ಮತ್ತು ಹೆಣ್ಣು ಮಕ್ಕಳಿಗೆ ಪ್ರತ್ಯೇಕವಾದ ವಸತಿ ಸೌಲಭ್ಯವಿದೆ. ವಾಹನ ಸೌಕರ್ಯವೂ ಇದ್ದು ಗ್ರಾಮೀಣ ಭಾಗದಲ್ಲಿ ಇದೊಂದು ಅಂತರಾಷ್ಟ್ರೀಯ ಮಟ್ಟದ ಪ್ರಥಮ ಸ್ಕೂಲ್ ಆಗಿದೆ ಎಂದು ಹೇಳಿದರು.
ಸಂಸ್ಥೆಯ ಅಧ್ಯಕ್ಷ ಮಾಂತಗೌಡ ಬಿರಾದಾರ ಮಾತನಾಡಿ, 1-10ನೇ ಸ್ಥಾನ ಪಡೆಯುವ ಮಕ್ಕಳಿಗೆ ಶುಲ್ಕದಲ್ಲಿ ಶೇ.20 ರಷ್ಟು ರಿಯಾಯಿತಿ, 11-20ರವರೆಗೆ ಶೇ.15, 21-30 ರವರೆಗೆ ಶೇ.10 ರಷ್ಟು, 31-40 ರವರೆಗೆ ಶೇ.5ರಷ್ಟು ರಿಯಾಯಿತಿ ನೀಡಲಾಗುವುದು ಎಂದು ತಿಳಿಸಿದರು. ಪ್ರಾಚಾರ್ಯೆ ರಿಷೀಕಾ ನಾಯಕ ಮಾತನಾಡಿದರು.

ಸಂಸ್ಥೆಯ ಪ್ರಮುಖರಾದ ವಿವೇಕಾನಂದ ಬಿರಾದಾರ, ಗೀತಾ ಬಿರಾದಾರ, ಶಿವನಗೌಡ ಬಿರಾದಾರ, ಸುಮಂಗಲಾ ಬಿರಾದಾರ,ಬಸಮ್ಮ ಬಿರಾದಾರ ಸೇರಿದಂತೆ ಇದ್ದರು.ಪರೀಕ್ಷೆಯಲ್ಲಿ ಹೆಸರು ನೋಂದಾಯಿಸಲು ಮೊಬೈಲ್ ಸಂಖ್ಯೆ:9035054453, 9035054451, 9035054452 ಸಂಪರ್ಕಿಸಬಹುದಾಗಿದೆ.

Latest News

ಸುಡುಗಾಡ ಸಿದ್ಧರ ಕುಟುಂಬಗಳಿಗೆ ನೆರವು:                         ಸಿಎಂ ಪರಿಹಾರ ನಿಧಿಯಿಂದ ಆರು ಲಕ್ಷ ರೂ. ಪರಿಹಾರ ಧನ ಬಿಡುಗಡೆ

ಸುಡುಗಾಡ ಸಿದ್ಧರ ಕುಟುಂಬಗಳಿಗೆ ನೆರವು: ಸಿಎಂ ಪರಿಹಾರ ನಿಧಿಯಿಂದ ಆರು ಲಕ್ಷ ರೂ. ಪರಿಹಾರ ಧನ ಬಿಡುಗಡೆ

ಮುದ್ದೇಬಿಹಾಳ : ತಾಲ್ಲೂಕಿನ ಶಿರೋಳ ಗ್ರಾಮದ ಹತ್ತಿರ ಕಾಲುವೆಯಲ್ಲಿ ನ.11, 2025ರಂದು ಒಂದೇ ಕುಟುಂಬದ

ಶಿವರಾತ್ರಿ ಅಂಗವಾಗಿ ದಿನಸಿ ಕಿಟ್,ಬಟ್ಟೆ ವಿತರಣೆ:               ದಾನ ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಿ-ಕಾಶೀಬಾಯಿ ರಾಂಪೂರ

ಶಿವರಾತ್ರಿ ಅಂಗವಾಗಿ ದಿನಸಿ ಕಿಟ್,ಬಟ್ಟೆ ವಿತರಣೆ: ದಾನ ಕೊಡುವ ಪ್ರವೃತ್ತಿ ಬೆಳೆಸಿಕೊಳ್ಳಿ-ಕಾಶೀಬಾಯಿ ರಾಂಪೂರ

ಮುದ್ದೇಬಿಹಾಳ : ಸಮಾಜದಲ್ಲಿ ಸಾಕಷ್ಟು ಜನ ಸಂಪತ್ತು ಹೊಂದಿದವರಿದ್ದಾರೆ.ಆದರೆ ಕೊಡುವ ಮನಸ್ಸು ಎಲ್ಲರಲ್ಲೂ ಇರುವುದಿಲ್ಲ.ನಿಸ್ವಾರ್ಥದಿಂದ

ಅತೀ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದ ಮೋಮಿನ: ಮುದ್ದೇಬಿಹಾಳ : ಸಂತೆ ಕರ 15 ಲಕ್ಷ ರೂ.ಗೆ ಹರಾಜು

ಅತೀ ಹೆಚ್ಚು ಮೊತ್ತಕ್ಕೆ ಬಿಡ್ ಮಾಡಿದ ಮೋಮಿನ: ಮುದ್ದೇಬಿಹಾಳ : ಸಂತೆ ಕರ 15 ಲಕ್ಷ ರೂ.ಗೆ ಹರಾಜು

ಮುದ್ದೇಬಿಹಾಳ : ಪಟ್ಟಣದ ಪುರಸಭೆ ವ್ಯಾಪ್ತಿಯಲ್ಲಿರುವ ಜಾಗೆಯಲ್ಲಿ ದೈನಂದಿನ ಸಂತೆ ಕರ ವಸೂಲಿಗಾಗಿ ಮಂಗಳವಾರ

‘ರಾಷ್ಟ್ರದ್ವಜ ಹಿಡಿದು ಶತ್ರು ಸಂಹಾರ ಮಾಡ್ತೀನಿ,ಇಲ್ಲಂದ್ರೆ ಮೈಮೇಲೆ ಅದೇ ಧ್ವಜ ಹೊತ್ತು ಬರ‍್ತೀನಿ’

‘ರಾಷ್ಟ್ರದ್ವಜ ಹಿಡಿದು ಶತ್ರು ಸಂಹಾರ ಮಾಡ್ತೀನಿ,ಇಲ್ಲಂದ್ರೆ ಮೈಮೇಲೆ ಅದೇ ಧ್ವಜ ಹೊತ್ತು ಬರ‍್ತೀನಿ’

ಮುದ್ದೇಬಿಹಾಳ : ನಾನು ಸೈನ್ಯಕ್ಕೆ ಸೇರುತ್ತಿದ್ದಂತೆ ನನ್ನ ತಾಯಿ ‘ನೀ ಹೆಣ್ಣು ಮಗಳಾಗಿ ಗಡಿ

ಸರದಿಯಲ್ಲಿ ನಿಂತು ಶಿವಲಿಂಗದ ದರ್ಶನ;                    ಎಲ್ಲೆಲ್ಲೂ ಅನುರಣಿಸಿದ ಶಿವನಾಮ

ಸರದಿಯಲ್ಲಿ ನಿಂತು ಶಿವಲಿಂಗದ ದರ್ಶನ; ಎಲ್ಲೆಲ್ಲೂ ಅನುರಣಿಸಿದ ಶಿವನಾಮ

ಮುದ್ದೇಬಿಹಾಳ : ಪಟ್ಟಣದಾದ್ಯಂತ ಶಿವರಾತ್ರಿ ಅಂಗವಾಗಿ ಭಕ್ತರು ಭಾನುವಾರ ಸಂಜೆ ಶಿವನ ದೇವಾಲಯಗಳಲ್ಲಿ ಸರದಿಯಲ್ಲಿ ನಿಂತುಕೊoಡು ಈಶ್ವರ ಲಿಂಗದ ದರ್ಶನ ಪಡೆದುಕೊಂಡು ಪುನೀತರಾದರು. ದಿನವೀಡಿ ಉಪವಾಸ ವ್ರತ ಆಚರಿಸಿದ ಶಿವನ ಆರಾಧಕರು ಸಂಜೆ ವೇಳೆ ವಿವಿಧ ವಿಶೇಷ ಖಾದ್ಯಗಳನ್ನು ತಯಾರಿಸಿ ಶಿವಲಿಂಗಕ್ಕೆ ನೈವೇದ್ಯ ಅರ್ಪಿಸಿ ಉಪವಾಸ ವ್ರತ ಅಂತ್ಯಗೊಳಿಸಿದರು. ಪಟ್ಟಣದ ಕಿಲ್ಲಾದ ಹಳೇ ಈಶ್ವರಲಿಂಗ ದೇವಸ್ಥಾನ, ವಿಜಯ ವಿಠ್ಠಲ ಮಂದಿರ,ಕಾಶೀ ವಿಶ್ವನಾಥ ದೇವಸ್ಥಾನ,ಮರುಳಸಿದ್ದಪ್ಪನ ಗುಡಿ, ಹಳೇ ಕೋರ್ಟ್ ಆವರಣದಲ್ಲಿರುವ ಈಶ್ವರ

ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಉದ್ಘಾಟನೆ:            ಕಾಲು ಹಿಡಿದು ಜಗ್ಗುವವರೇ ಬಹಳಷ್ಟು ಜನ-ಸಿ.ಎಸ್.ನಾಡಗೌಡ

ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್ ಉದ್ಘಾಟನೆ: ಕಾಲು ಹಿಡಿದು ಜಗ್ಗುವವರೇ ಬಹಳಷ್ಟು ಜನ-ಸಿ.ಎಸ್.ನಾಡಗೌಡ

ಮುದ್ದೇಬಿಹಾಳ : ಸಮಾಜದಲ್ಲಿ ಒಂದು ಸಂಸ್ಥೆ, ಕಾರ್ಖಾನೆ , ಒಬ್ಬ ವ್ಯಕ್ತಿ ಬೆಳೆಯುತ್ತಿದ್ದಾನೆ ಎಂದರೆ ಕಾಲು ಹಿಡಿದು ಜಗ್ಗುವವರು ಬಹಳ ಜನ ಇದ್ದಾರೆ.ಆದರೆ ಶಿಕ್ಷಣಕ್ಕಾಗಿ ಪ್ರಭುಗೌಡ ದೇಸಾಯಿ ಅವರಂತಹವರು ಜಮೀನು ಕೊಟ್ಟು ಮತ್ತೊಬ್ಬರನ್ನು ಬೆಳೆಸುವಂತವರು ವಿರಳ ಜನ ಇದ್ದಾರೆ.ಅವರು ನಿಜವಾದ ದೈವಿಯ ಗುಣ ಹೊಂದಿದವರು ಎಂದು ಶಾಸಕ ಸಿ.ಎಸ್.ನಾಡಗೌಡ ಹೇಳಿದರು. ಪಟ್ಟಣದ ಆಲಮಟ್ಟಿ ರಸ್ತೆಯಲ್ಲಿ ಶನಿವಾರ ಬಿಎಎಸ್ ಇಂಟರ್‌ನ್ಯಾಶನಲ್ ಸ್ಕೂಲ್‌ನ ನೂತನ ಕಟ್ಟಡವನ್ನು ಶಾಸಕ ಸಿ.ಎಸ್.ನಾಡಗೌಡ ಉದ್ಘಾಟಿಸಿ ಅವರು ಮಾತನಾಡಿದರು.