Brother murder Brother Murder: Stones, sticks for property; Anna's death in Gowribidanooru

Brother Murder: ಆಸ್ತಿಗಾಗಿ ಕಲ್ಲು, ದೊಣ್ಣೆಗಳಿಂದ ಬಡಿದಾಟ; ಅಣ್ಣನ ದುರ್ಮರಣ..!

Brother Murder: ಆಸ್ತಿಗಾಗಿ ಕಲ್ಲು, ದೊಣ್ಣೆಗಳಿಂದ ಬಡಿದಾಟ; ಅಣ್ಣನ ದುರ್ಮರಣ..!

ಗೌರಿಬಿದನೂರು: ಪೀತ್ರಾರ್ಜಿತ ಆಸ್ತಿ ವಿಚಾರದಲ್ಲಿ ಶುರುವಾದ ಗಲಾಟೆ ಕೊಲೆಯಲ್ಲಿ ಅಂತ್ಯವಾದ (Brother Murder) ಘಟನೆ ಗೌರಿಬಿದನೂರು ಗ್ರಾಮಾಂತರ ಠಾಣಾ ವ್ಯಾಪ್ತಿಯ ನಡುವಲಹಳ್ಳಿಯಲ್ಲಿ ಸಂಭವಿಸಿದೆ.

ಇನ್ನಷ್ಟು ಸುದ್ದಿಗಳಿಗಾಗಿ ನಮ್ಮ ಟೆಲಿಗ್ರಾಂ ಚಾಲನ್ ಗೆ ಸೇರಿಕೊಳ್ಳಿ.. https://t.me/dcgkannada

ನಡುವಲಹಳ್ಳಿ ಗ್ರಾಮ ನಂಜುಂಡಯ್ಯ ಹಾಗೂ ರಾಮಾಂಜಿನಪ್ಪ ನವರ ಆಸ್ತಿ ವಿಚಾರಕ್ಕೆ ಗಲಾಟೆ ಶುರುವಾಗಿದೆ. ಇದೇ ವೇಳೆ ಮಾತಿಗೆ ಮಾತು ಬೆಳೆದು ದೊಣ್ಣೆ, ಕಲ್ಲುಗಳಿಂದ ಬಡೆದುಕೊಳ್ಳುವ ವಾತಾವರಣ ನಿರ್ಮಾಣವಾಗಿದೆ.

ಇದೇ ವೇಳೆ ತಮ್ಮ‌ನ ಮಕ್ಕಳು ದೊಡ್ಡಪ್ಪನ ಮೇಲೆ ವಿಕೋಪಕ್ಕೆ ಹೋಗಿದ್ದು ತಮ್ಮ ಹಾಗೂ ತಮ್ಮನ ಮಕ್ಕಳು ಸೇರಿ ಕಲ್ಲು, ದೊಣ್ಣೆಗಳಿಂದ ಅಣ್ಣ ನಂಜುಂಡಪ್ಪನ ಮೇಲೆ ದಾಳಿ ಮಾಡಿದ್ದಾರೆ.

ಘಟನೆಯಲ್ಲಿ ಗಾಯಗೊಂಡ 55 ವರ್ಷದ ನಂಜುಂಡಪ್ಪನನ್ನು ಸಾರ್ವಜನಿಕ ಆಸ್ಪತ್ರೆಗೆ ಸೇರಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿತ್ತು. ನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸೋಮವಾರ ಬೆಳಗಿನ ಜಾವ ನಂಜುಂಡಪ್ಪ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಇದನ್ನೂ ಓದಿ: ಉದ್ಯೋಗ ಸಿಗದ ಹತಾಶೆ; ಯುವಕ ಆತ್ಮಹತ್ಯೆ..! “I am a big failure” ಎಂದು ಡೆತ್ ನೋಟ್

ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ, ಸಿಪಿಐ, ಪಿಎಸೈ ಸೇರಿದಂತೆ ಇತರರು ‌ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ.

Latest News

ಬಂಜಾರ ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಮೋತಿಲಾಲ  ಚವ್ಹಾಣರಿಗೆ  ಸನ್ಮಾನ

ಬಂಜಾರ ಭಾಷಾ ಅಕಾಡೆಮಿ ಅಧ್ಯಕ್ಷ ಡಾ.ಮೋತಿಲಾಲ  ಚವ್ಹಾಣರಿಗೆ  ಸನ್ಮಾನ

ಮುದ್ದೇಬಿಹಾಳ : ತಾಲೂಕಿನ ಹುಲ್ಲೂರ ತಾಂಡಾ(ವೆಂಕಟೇಶ ನಗರ) ಪ್ರತಿ ಎರಡು ವರ್ಷಕ್ಕೊಮ್ಮೆ ನಡೆಯುವ ಬಸು

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಶಾಸಕ ನಾಡಗೌಡರ ಮನೆಗೆ ನನ್ನ ಚಪ್ಪಲಿಯೂ ಹೋಗಿಲ್ಲ-ಎ.ಎಸ್.ಪಾಟೀಲ ನಡಹಳ್ಳಿ

ಮುದ್ದೇಬಿಹಾಳ : ತಮಗೆ ಸಾಷ್ಟಾಂಗ ಹಾಕಿರುವುದಾಗಿ ಸುಳ್ಳು ಹೇಳಿಕೆ ಕೊಡುವುದನ್ನು ಮೊದಲು ಶಾಸಕ ನಾಡಗೌಡರು

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ತಂಗಡಗಿಯಲ್ಲಿ 26 ಜೋಡಿ ನವಜೀವನಕ್ಕೆ ಪದಾರ್ಪಣೆ

ಮುದ್ದೇಬಿಹಾಳ : ಇಂದಿನ ರಾಜಕಾರಣಿಗಳು ತಮ್ಮ ಮಕ್ಕಳ ಮದುವೆಗಳನ್ನು ದುಂದುವೆಚ್ಚದಲ್ಲಿ ಮಾಡುವಬದಲು ಅದೇ ಖರ್ಚಿನಲ್ಲಿ

ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮಾಜಿ ಶಾಸಕರು ಐದು ವರ್ಷ ನಿದ್ದೆ ಮಾಡುತ್ತಿದ್ದರೇ ?-ಶಾಸಕ ನಾಡಗೌಡ ಪ್ರಶ್ನೆ

ಮುದ್ದೇಬಿಹಾಳ : ಮತಕ್ಷೇತ್ರದ ತಾಳಿಕೋಟಿ ತಾಲ್ಲೂಕಿನಲ್ಲಿ ಪ್ರಜಾಸೌಧ ನಿರ್ಮಾಣಕ್ಕೆ ತಮ್ಮ ಅವಧಿಯಲ್ಲಿ ಜಾಗೆ ಗುರುತಿಸುವುದನ್ನು

ಸೌಹಾರ್ದತೆ ಮೆರೆದ ಮನಿಯಾರ್ :                                          ಹಬ್ಬದ ಸಮಯಗಳಲ್ಲಿ ಬಡವರಿಗೆ ನೆರವಾಗಿ-ಸಿಪಿಐ ಫಸಿವುದ್ದೀನ್

ಸೌಹಾರ್ದತೆ ಮೆರೆದ ಮನಿಯಾರ್ : ಹಬ್ಬದ ಸಮಯಗಳಲ್ಲಿ ಬಡವರಿಗೆ ನೆರವಾಗಿ-ಸಿಪಿಐ ಫಸಿವುದ್ದೀನ್

ಮುದ್ದೇಬಿಹಾಳ : ಸಮಾಜದಲ್ಲಿ ಆರ್ಥಿಕವಾಗಿ ಸಬಲತೆ ಸಾಧಿಸಿದವರು ಬಡವರು,ನಿರ್ಗತಿಕರಿಗೆ ಹಬ್ಬದ ಸಮಯಗಳಲ್ಲಿ ನೆರವಾಗುವ ಕಾರ್ಯ ಮಾಡಬೇಕು ಎಂದು ಸಿಪಿಐ ಮೊಹ್ಮದ್ ಫಸಿವುದ್ದೀನ್ ಹೇಳಿದರು. ಪಟ್ಟಣದ ಹುಡ್ಕೋದಲ್ಲಿರುವ ಉದ್ಯಮಿ ಅಯ್ಯೂಬ ಮನಿಯಾರ್ ಅವರ ಮನಿಯಾರ್ ಚಾರಿಟೇಬಲ್ ಟ್ರಸ್ಟ್ನಿಂದ ಮಂಗಳವಾರ ರಂಜಾನ್ ಹಬ್ಬದ ನಿಮಿತ್ಯ ಬಡವರಿಗೆ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಮನಿಯಾರ್ ಅವರು ತಮ್ಮ ತಂದೆ ತಾಯಿ ಸ್ಮರಣಾರ್ಥ ಈ ಕಿಟ್‌ಗಳನ್ನು ವಿತರಿಸುತ್ತಿದ್ದಾರೆ.ಆರ್ಥಿಕ ಸಬಲತೆ ಸಾಧಿಸಿದವರು ಇಂತಹ ಕಾರ್ಯಗಳನ್ನು ಮಾಡುತ್ತಿದ್ದರೆ

ಮುದ್ದೇಬಿಹಾಳ : ಅಬ್ಬರದ ಆಲಿಕಲ್ಲು ಮಳೆಗೆ ನೆಲಕಚ್ಚಿದ ದ್ರಾಕ್ಷಿ,ಚಿಕ್ಕು,ತೆಂಗಿನ ಗಿಡ

ಮುದ್ದೇಬಿಹಾಳ : ಅಬ್ಬರದ ಆಲಿಕಲ್ಲು ಮಳೆಗೆ ನೆಲಕಚ್ಚಿದ ದ್ರಾಕ್ಷಿ,ಚಿಕ್ಕು,ತೆಂಗಿನ ಗಿಡ

ಮುದ್ದೇಬಿಹಾಳ : ಪಟ್ಟಣವೂ ಸೇರಿದಂತೆ ತಾಲ್ಲೂಕಿನ ಕೆಲವು ಗ್ರಾಮಗಳಲ್ಲಿ ಮಂಗಳವಾರ ಕೆಲಕಾಲ ಸುರಿದ ಭಾರೀ ಬಿರುಗಾಳಿ,ಆಲಿಕಲ್ಲು ಮಳೆ ರೈತರಿಗೆ ನಷ್ಟವನ್ನುಂಟು ಮಾಡಿದ್ದು ಫಸಲಿನ ನಿರೀಕ್ಷೆಯಲ್ಲಿದ್ದ ರೈತರಿಗೆ ಬರಸಿಡಿಲು ಅಪ್ಪಳಿಸಿದಂತಾಗಿದೆ. ತಾಲ್ಲೂಕಿನ ಆಲೂರ ಗ್ರಾಮದಲ್ಲಿ ಬಿರುಗಾಳಿ,ಮಳೆಗೆ ಶಿವಪುತ್ರಪ್ಪ ಗೂಳಿ ಎಂಬುವರ ಹೊಲದಲ್ಲಿ ಬೆಳೆದಿದ್ದ ಐದು ಎಕರೆ ದ್ರಾಕ್ಷಿ ಬೆಳೆ ಹಾನಿಯಾಗಿದೆ.ಇನ್ನೆನ್ನು ವಾರದಲ್ಲಿ ದ್ರಾಕ್ಷಿ ಕಟಾವು ಮಾಡಬೇಕಿದ್ದ ರೈತನಿಗೆ ಈ ಬಿರುಗಾಳಿ,ಮಳೆ ಬರಸಿಡಿಲಿನಂತೆ ಬಂದೆರಗಿದ್ದು ದ್ರಾಕ್ಷಿ ಗೊನೆಗಳು,ಹಣ್ಣುಗಳು ಉದುರಿ ಬಿದ್ದಿವೆ.ಇದರೊಟ್ಟಿಗೆ ಚಿಕ್ಕು ಗಿಡಗಳಿಂದ